ಅಪ್ಪನ ಡ್ಯೂಟಿ ಹೇಗಿರಬೇಕು?

ತಂದೆಯೇ ಬಾಳಿನ ಬೆಳಕಾಗಿ...

Team Udayavani, May 1, 2019, 6:05 AM IST

Avalu-Family

ಮಗು ಜನಿಸಿದ ನಂತರ ನೀವು ಅಪ್ಪ ಆಗುತ್ತೀರಿ. ಅಂದರೆ, ಹೆಸರಿಗೆ ಮಾತ್ರ ಅಪ್ಪನಾಗುವುದಲ್ಲ. ದಿನದ ಸ್ವಲ್ಪ ಸಮಯ ಮಡದಿಯ ಮುಂದೆ ಮಗುವನ್ನು ಎತ್ತಿ ಆಡಿಸಿ. ಮಗುವಿನ ಅಂದಚಂದವನ್ನು ಅವಳೆದುರು ಹಾಡಿ ಹೊಗಳಿ…

ಕೆಲವೊಂದು ಕುಟುಂಬದಲ್ಲಿ ಗಂಡು ಹೊರಗೆ ದುಡಿದು ಮನೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಮತ್ತು ಹೆಣ್ಣು ಮನೆ ಕೆಲಸ, ಮಕ್ಕಳ ಆರೈಕೆ ನೋಡಿಕೊಳ್ಳಬೇಕೆಂದು ತಮ್ಮ ಮಕ್ಕಳ ಮದುವೆಗೆ ಮೊದಲೇ ಹಿರಿಯರ ಅಪ್ಪಣೆಯಾಗಿರುತ್ತದೆ. ಇನ್ನೂ ಕೆಲವೊಂದು ಕುಟುಂಬದವರು, ಹೆಣ್ಣು ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದೂ ಕೈತುಂಬಾ ಸಂಬಳ ತರುತ್ತಿದ್ದರೆ ಮದುವೆಯ ನಂತರ ಕೆಲಸವನ್ನು ಮುಂದುವರಿಸಲು ಹೇಳುವವರೇ ಜಾಸ್ತಿ. ಮದುವೆಯ ನಂತರ ಮಕ್ಕಳು, ಸಂಸಾರವೆಂದು ಹೆಚ್ಚಿನ ಜವಾಬ್ದಾರಿ ಹೆಣ್ಣಿಗೆ ಬಳುವಳಿಯಾಗಿ ಬರುವುದು ಸಹಜ.

ಮನೆಯಲ್ಲೇ ಇರುವ ಹೆಣ್ಣಾದರೆ ಹೇಗೋ ನಿಭಾಯಿಸುವ ಶಕ್ತಿ ಅವಳಲ್ಲಿರುತ್ತದೆ. ಆದರೆ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತಾನು ತಾಯಿಯಾಗುವ ಸೂಚನೆ ಸಿಕ್ಕಾಗ ಮನೆಯಿಂದ ಹೊರಗೂ, ಒಳಗೂ ನಿಭಾಯಿಸ ಬೇಕೆಂದರೆ ಕೆಲವೊಮ್ಮೆ ಯಾಕಾದರೂ ಈ ಸಂಸಾರ- ಮಕ್ಕಳು ಅನ್ನಿಸುವಷ್ಟು ಸಂಕಟಪಡುವಂತಾಗುತ್ತದೆ.

ಇಂಥ ವೇಳೆ ಗಂಡಂದಿರು ಏನು ಮಾಡಬೇಕು? ಆಕೆಗೆ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟರೂ ಸಾಕು. ಅವಳು ಹ್ಯಾಪಿ. ಪತ್ನಿಗೆ ಕೆಲಸದ ಹೊರೆಯೂ ತಗ್ಗುತ್ತದೆ. ಆಕೆ ಅಮ್ಮ ಆಗುತ್ತಿದ್ದಾಳೆಂಬ ಸುದ್ದಿ ಕೇಳಿದಾಗ, ಅವಳೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ. ಅವಳ ಆರೋಗ್ಯದ ಬಗ್ಗೆ ಗಮನಹರಿಸಿ. ಅವಳು ನಿಮ್ಮಿಂದ ನಿರೀಕ್ಷಿಸುವುದು, ಸಣ್ಣ ಸಣ್ಣ ಪ್ರೀತಿಯ ಮಾತುಗಳನ್ನು ಮಾತ್ರ. ಪ್ರತಿ ತಿಂಗಳು ವೈದ್ಯರ ಭೇಟಿಯಲ್ಲಿ ತಪ್ಪದೇ ಅವಳೊಂದಿಗೆ ನೀವಿರಿ.

ಹೆರಿಗೆಯ ದಿನಾಂಕವನ್ನು ವೈದ್ಯರಲ್ಲಿ ತಿಳಿದು ಎರಡು ವಾರಗಳ ಮೊದಲೇ ನಿಮಗೆ ಎಂಥ ಆಫೀಸ್‌ ಕೆಲಸಗಳಿದ್ದರೂ ರಜೆ ಹಾಕಿ ಅವಳೊಂದಿಗೆ ಸಂತೋಷವಾಗಿ ಸಮಯ ಕಳೆಯಿರಿ. ಅವಳ ಮನಸ್ಸಿನಲ್ಲಿ ನನ್ನವರು ನನ್ನ ಜೊತೆಗೆ ಇದ್ದಾರೆಂಬ ಧೈರ್ಯದ ಮನೋಭಾವ ಮೂಡುವಂತೆ ಮಾಡುವುದು ನಿಮ್ಮ ಕರ್ತವ್ಯ.

ಮಗು ಜನಿಸಿದ ನಂತರ ನೀವು ಅಪ್ಪ ಆಗುತ್ತೀರಿ. ಅಂದರೆ, ಹೆಸರಿಗೆ ಮಾತ್ರ ಅಪ್ಪನಾಗುವುದಲ್ಲ. ದಿನದ ಸ್ವಲ್ಪ ಸಮಯ ಮಡದಿಯ ಮುಂದೆ ಮಗುವನ್ನು ಎತ್ತಿ ಆಡಿಸಿ. ಮಗುವಿನ ಅಂದಚಂದವನ್ನು ಅವಳೆದುರು ಹಾಡಿ ಹೊಗಳಿ. ಆಗ ಚಿಕ್ಕ ಮಗುವನ್ನು ಹೇಗಪ್ಪಾ ಸಾಕುವುದು? ಅಂತಂದುಕೊಂಡಿದ್ದ ನಿಮ್ಮ ಪತ್ನಿಗೆ ಆ ಹೊಗಳಿಕೆ ಧೈರ್ಯ ತುಂಬುತ್ತದೆ.

ಮಗುವಿನ ಒದ್ದೆ ಬಟ್ಟೆ ಬದಲಿಸುವುದು, ತೊಟ್ಟಿಲಲ್ಲಿ ಮಗುವನ್ನು ಹಾಕಿ ಲಾಲಿ ಹಾಡಿ ಮಲಗಿಸುವುದು, ರಾತ್ರಿ ಜಾಸ್ತಿ ಆಳುವ ಮಗುವಾಗಿದ್ದರೆ ಸ್ವಲ್ಪ ಹೊತ್ತು ಅದನ್ನು ಎತ್ತಿಕೊಂಡು, ಸಮಾಧಾನಿಸುವುದು… ಇಂಥ ಸಣ್ಣಪುಟ್ಟ ಕೆಲಸಗಳನ್ನು ಮರೆಯದೆ ಮಾಡಿ. ಆಗ ಅವಳಿಗೆ ನಿಮ್ಮ ಮೇಲೆ ಗೌರವ ದುಪ್ಪಟ್ಟಾಗುತ್ತದೆ.

ಮಗುವಿನ ತುಂಟಾಟಗಳಲ್ಲಿ ನೀವೂ ಭಾಗಿಯಾಗಿ. ನಿಮ್ಮ ಮಗುವಿಗೆ ನೀವು ಕೋತಿಯಾಗಿ, ಆನೆಯಾಗಿ ಎಲ್ಲದಕ್ಕಿಂತ ಹೆಚ್ಚು ಅಪ್ಪನಾಗಿ ಆ ಮಗುವಿನೊಂದಿಗೆ ಆಟವಾಡಿ. ಮಗುವಿನ ತೊದಲು ನುಡಿಗಳನ್ನು ಕೇಳಿ ಆನಂದಿಸಿ.

ಹೀಗೆಲ್ಲ ಮಾಡಿದಾಗಲೇ, ನೀವು ಗ್ರೇಟ್‌ ಅಪ್ಪ..! ಇಲ್ಲಾಂದ್ರೆ, ಬೆಪ್ಪ..!


— ವೇದಾವತಿ ಎಚ್‌.ಎಸ್‌.

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.