ಕ್ರೀಡಾಂಗಣ ಪಕ್ಕ ಈಜುಗೊಳ ನಿರ್ಮಾಣಕ್ಕೆ ಮನವಿ
Team Udayavani, May 1, 2019, 3:00 AM IST
ದೇವನಹಳ್ಳಿ: ನಗರದ ವೇಣುಗೋಪಾಲಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿ ಈಜುಗೊಳ ನಿರ್ಮಾಣ ಮಾಡಲು ಪುರಸಭೆಗೆ ಮನವಿ ಸಲ್ಲಿಸಲಾಗಿದೆ ಎಂದು ನೂತನ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಸಂಘದ ಅಧ್ಯಕ್ಷ ಎನ್.ರಘು ತಿಳಿಸಿದರು.
ನಗರದ ಶಾಂತಿ ನಗರದಲ್ಲಿರುವ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಸಂಘದ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪಂದ್ಯಾವಳಿಗೆ ಚಿಂತನೆ: ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಷಟಲ್ ಬ್ಯಾಡ್ಮಿಟನ್ ಪಂದ್ಯಾವಳಿಗಳನ್ನು ಆಯೋಜಿಸಿ ಹೆಚ್ಚಿನ ಉತ್ತೇಜನ ನೀಡಲಾಗುವುದು. ಪ್ರತಿದಿನ ಬೆಳಗ್ಗೆ ಹಲವಾರು ಜನರು ಷಟಲ್ ಬ್ಯಾಡ್ಮಿಟನ್ ಆಡುತ್ತಾರೆ. ಇದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ತಾಲೂಕು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ನಡೆಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ.
ಅಭ್ಯಾಸದ ಸಂದರ್ಭದಲ್ಲಿ ಹಿರಿಯ ಷಟಲ್ ಬ್ಯಾಡ್ಮಿಟನ್ ಪಟುಗಳು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಅಗತ್ಯವೆನ್ನಿಸಿದರೆ ಸೂಕ್ತ ತರಬೇದಾರರನ್ನು ನಿಯೋಜಿಸಲಾಗುವುದು. ಯುವ ಸಮುದಾಯಕ್ಕೆ ದೈಹಿಕ ಕಸರತ್ತು ನೀಡಲು ಮಲ್ಟಿ ಜಿಮ್ ಇದೆ ಎಂದು ತಿಳಿಸಿದರು.
ಸಭೆಗೆ ಎಲ್ಲರೂ ಹಾಜರಾಗಿ: ಕೆಲವೊಂದು ತಾಂತ್ರಿಕ ಕಾರಣದಿಂದ ಈಗ ವಿಳಂಬವಾಗಿದೆ. ಬೇಸಿಗೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆಯಿರುವುದರಿಂದ ಪ್ರತಿಭಾವಂತ ಷಟಲ್ ಬ್ಯಾಡ್ಮಿಮಿಟನ್ ಪಟುಗಳು ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಬಹುದು. ಉಚಿತವಾಗಿ ಅವಕಾಶ ನೀಡಲಾಗಿದೆ. ಒಬ್ಬೊಬ್ಬ ಸದಸ್ಯರ ಯೋಚನೆ, ದೂರ ದೃಷ್ಟಿ ವಿಭಿನ್ನವಾಗಿರುತ್ತದೆ.
500ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಯಲ್ಲಿ ಸದಸ್ಯರ ಗೈರು ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಗಬೇಕು. ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲು ಪ್ರತಿ ಸದಸ್ಯರ ಸಲಹೆ ಅಗತ್ಯ. ಮನೋರಂಜನೆಗೆ ಅವಶ್ಯವಾಗಿರುವ ಪರಿಕರಗಳಿವೆ ಎಂದು ಹೇಳಿದರು.
ಸಾಧಕರಿಗೆ ಸನ್ಮಾನ: ಇತ್ತೀಚೆಗೆ ಉತ್ತರಖಂಡ್‌ನಲ್ಲಿ ನಡೆದ ಮಾಸ್ಟರ್ ರಾಷ್ಟ್ರೀಯ ಷಟಲ್ ಬ್ಯಾಡ್ಮಿಟನ್ ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ವಯೋಮಾನದಲ್ಲಿ ಸ್ವರ್ಣ, ಬೆಳ್ಳಿ, ಕಂಚಿನ ಪದಕಗಳನ್ನು ಪಡೆದ ಡಿ.ಎಂ.ವೇಣುಗೋಪಾಲ್, ಟೈಗರ್ ರಾಜಣ್ಣ ಅವರನ್ನು ಆಡಳಿತದ ಮಂಡಳಿಯಿಂದ ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳು: ಇದೇ ವೇಳೆ ಗೌರವಾಧ್ಯಕ್ಷರಾಗಿ ಪಟೇಲ್ ದೊಡ್ಡವೆಂಕಟಪ್ಪ, ಅಧ್ಯಕ್ಷರಾಗಿ ಎನ್.ರಘು, ಉಪಾಧ್ಯಕ್ಷರಾಗಿ ಸುಜಯ್‌ಬಾಬು, ಕಾರ್ಯದರ್ಶಿಯಾಗಿ ಕೆ.ಎಸ್.ಪ್ರಭಾಕರ್, ಸಹ ಕಾರ್ಯದರ್ಶಿಯಾಗಿ ನಂಜಪ್ಪ, ಖಜಾಂಚಿಯಾಗಿ ವಿನಯ್ ಆಯ್ಕೆಯಾದರು.
ನಿರ್ದೇಶಕರಾದ ಸಿ.ಜಗನ್ನಾಥ್, ಬಿದಲೂರು ನಾರಾಯಣಸ್ವಾಮಿ, ರವೀಂದ್ರ, ಮುನಿವೆಂಕಟಪ್ಪ, ಶ್ರೀಧರ್, ಬೂದಿಹಾಳ ಕುಮಾರ್, ಪುಟ್ಟಸ್ವಾಮಿ, ಸದ್ರು ಹುಸೇನ್, ಶಿವರಾಜ್, ವೆಂಕಟೇಶ್, ಕೇಶವ, ವೇಣುಗೋಪಾಲ್, ರಾಜಣ್ಣ, ಮಂಜುನಾಥ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.