ಕುಂದಾಪುರ: ತಾಲೂಕಿನ ವಿವಿಧೆಡೆ ಗಾಳಿ, ಸಿಡಿಲಿನೊಂದಿಗೆ ಮಳೆ
Team Udayavani, May 1, 2019, 6:00 AM IST
ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ನೀರು ನಿಂತಿರುವುದು.
ಕುಂದಾಪುರ: ತಾಲೂಕಿನ ವಿವಿಧೆಡೆ ಮಂಗಳವಾರ ಮುಂಜಾನೆ ಮಳೆಯಾಗಿದೆ. ಗಾಳಿ, ಸಿಡಿಲಿನ ಜತೆಗೆ ಒಂದು ತಾಸು ಮಳೆಯಾಗಿದ್ದು ತಂಪೆರೆದಿದೆ. ಈತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಸುರಿದ ಮೊದಲ ದೊಡ್ಡ ಮಳೆ ಇದಾಗಿದೆ. ಸುಮಾರು 11 ಗಂಟೆವರೆಗೆ ಮೋಡ ಕವಿದ ವಾತಾವರಣ ಇತ್ತು. ಅನಂತರ ಬಿಸಿಲಿನ ಝಳ ಎಂದಿನಂತೆಯೇ ಇತ್ತು. ಮುಂಜಾನೆ 3 ಗಂಟೆ ವೇಳೆಗೆ 1 ತಾಸಿನಷ್ಟು ಮಳೆಯಾದ್ದಷ್ಟೇ ಅಲ್ಲ, ಬೆಳಗ್ಗೆ 10.30ರ ಸುಮಾರಿಗೆ ಮತ್ತೆ ಹನಿ ಹನಿ ಮಳೆಯಾಗಿದೆ.
ಎಲ್ಲೆಲ್ಲಿ ಮಳೆ
ಯಡ್ತಾಡಿ 4ಮಿಮೀ., ಯಡ್ತರೆ 1ಮಿಮೀ., ಆನಗಳ್ಳಿ 19ಮಿಮೀ., ಬಳ್ಕೂರು 9ಮಿಮೀ., ಬಸೂÅರು 8ಮಿಮೀ., ಬೀಜಾಡಿ 35ಮಿಮೀ., ಗುಲ್ವಾಡಿ 5 ಮಿಮೀ., ಗೋಪಾಡಿ 29 ಮಿಮೀ., ಕಂದಾವರ 12ಮಿಮೀ., ಹಂಗಳೂರು 41ಮಿಮೀ., ಹಾರ್ದಳ್ಳಿ ಮಂಡಳ್ಳಿ 8ಮಿಮೀ., ಹಟ್ಟಿಯಂಗಡಿ 8ಮಿಮೀ., ಹೆಂಗವಳ್ಳಿ 1ಮಿಮೀ., ಕೋಣಿ 17ಮಿಮೀ., ಕೋಟೇಶ್ವರ 38ಮಿಮೀ., ಕಟ್‌ಬೆಲೂ¤ರು 48ಮಿಮೀ., ಶಂಕರನಾರಾಯಣ 2ಮಿಮೀ., ಅಮಾಸೆ ಬೈಲು 5ಮಿಮೀ.,ಕುಂಬಾಶಿ 14ಮಿಮೀ., ತಲ್ಲೂರು 32ಮಿಮೀ., ತೆಕ್ಕಟ್ಟೆ 7ಮಿಮೀ., ಗಂಗೊಳ್ಳಿ 16ಮಿಮೀ., ಗುಜ್ಜಾಡಿ 20ಮಿಮೀ., ಕರ್ಕುಂಜೆ
3ಮಿಮೀ., ಕಾವ್ರಾಡಿ 2ಮಿಮೀ. ಮಳೆಯಾಗಿದೆ.
ಮರ ಬಿದ್ದು ಹಾನಿ
ಜಾಲಾಡಿ ಸಮೀಪ ಮರ ಬಿದ್ದು ವಿದ್ಯುತ್ ವ್ಯವಸ್ಥೆಗೆ ಹಾನಿಯಾಗಿದೆ. ಕುಂದಾಪುರದ ಗಾಂಧಿ ಪಾರ್ಕ್ ಬಳಿ ಮರದ ಗೆಲ್ಲು ಮುರಿದು ಬಿದ್ದಿದೆ. ತಲ್ಲೂರು ಸಮೀಪ ಹೆದ್ದಾರಿ ಕಾಮಗಾರಿಗೆ ಹಾನಿಯಾಗಿದೆ. ಮಳೆಗೆ ರಸ್ತೆ ಕುಸಿಯುವಂತೆ ಮಣ್ಣು ಕರಗಿದೆ. ಪರಿಣಾಮ ಪಕ್ಕದಲ್ಲಿರುವ ಮನೆಯ ಅಂಗಳದಲ್ಲಿ ಕೆಸರು ನೀರು ಸಂಗ್ರಹವಾಗಿ ತೊಂದರೆಯಾಗಿದೆ.
ಚರಂಡಿ ಇಲ್ಲ
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಮಳೆಗೆ ನೀರು ನಿಂತು ತೊಂದರೆಯಾಗಿದೆ. ಪುರಸಭೆ ವತಿಯಿಂದ ಚರಂಡಿ ಕಾಮಗಾರಿ ಆಗಿಲ್ಲ. ಒಂದೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದಿಲ್ಲ. ಫ್ಲೈಓವರ್ ಹಾಗೆಯೇ ಇದೆ. ಆದ್ದರಿಂದ ನೀರು ನಿಂತು ಪಾದಚಾರಿಗಳಿಗೆ, ವಾಹನಗಳ ಓಡಾಟಕ್ಕೂ ಅಡಚಣೆಯಾಯಿತು. ನಡೆದು ಹೋಗುವವರ ಮೇಲೆಲ್ಲ ಕೆಸರ ನೀರ ಸಿಂಚನವಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.