ಜೂನ್ 21ರಿಂದ 28ವರೆಗೆ ಪೂರಕ ಪರೀಕ್ಷೆ
Team Udayavani, May 1, 2019, 3:00 AM IST
ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 21ರಿಂದ 28ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಮೇ 2ರಿಂದ ಮೇ 10ರವರೆಗೆ ಪರೀಕ್ಷಾ ಶುಲ್ಕ ಪಾವತಿಸಿ, ಆನ್‌ಲೈನ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಬಹುದು. ದಂಡ ಶುಲ್ಕ 200ರೂ.ಪಾವತಿಸಿ ಮೇ 15ರವರೆಗೂ ವಿವರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಇದೆ.
ಶುಲ್ಕ ಪಾವತಿಸಿದ ಚಲನ್, ಮಂಡಳಿಗೆ ಮೇ 21ರೊಳಗೆ ಸಲ್ಲಿಸಬೇಕು. ಒಂದು ವಿಷಯಕ್ಕೆ 290ರೂ., ಎರಡು ವಿಷಯಕ್ಕೆ 350 ರೂ., ಮೂರು ಅಥವಾ ಮೂರಕ್ಕಿಂತ ಹೆಚ್ಚು ವಿಷಯಕ್ಕೆ 470 ರೂ.ನಿಗದಿಪಡಿಸಲಾಗಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
ಪೂರಕ ಪರೀಕ್ಷೆ ವೇಳಾಪಟ್ಟಿ
ಜೂ.21ಕ್ಕೆ ಗಣಿತ
ಜೂ.24ಕ್ಕೆ ವಿಜ್ಞಾನ/ ಮಧ್ಯಾಹ್ನ: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಜೂ.25ಕ್ಕೆ ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಹಾಗೂ ಸಂಸ್ಕೃತ)
ಜೂ.26 ಸಮಾಜ ವಿಜ್ಞಾನ
ಜೂ.27ಕ್ಕೆ ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಜೂ.28ಕ್ಕೆ ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಕೊಂಕಣಿ, ತುಳು).
ಆನ್‌ಲೈನ್ ಅರ್ಜಿ: ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಛಾಯಾಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗೆ ಆನ್‌ಲೈನ್ ಮೂಲಕ ಮೇ 13ರವರೆಗೂ ಅರ್ಜಿ ಸಲ್ಲಿಸಬಹುದು.
ಮರುಮೌಲ್ಯಮಾಪನಕ್ಕೆ ಮೇ 6ರಿಂದ ಮೇ 17ರವರೆಗೆ ಅರ್ಜಿ ಸಲ್ಲಿಸಬಹುದು. ಛಾಯಾಪ್ರತಿಗೆ ಒಂದು ವಿಷಯಕ್ಕೆ 405ರೂ.ಹಾಗೂ ಮರುಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ 805 ರೂ.ನಿಗದಿ ಮಾಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.