ಏರೋ ಸ್ಪೇಸ್ ಎಂಜಿನಿಯರಿಂಗ್ ಅವಕಾಶಗಳ ಆಗರ
Team Udayavani, May 1, 2019, 6:21 AM IST
ಪಿಯುಸಿ ಶಿಕ್ಷಣದ ಬಳಿಕ ಉತ್ತಮ ಭವಿಷ್ಯಕ್ಕಾಗಿ ಎಂಜಿನಿಯರಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಏರೋಸ್ಪೆಸ್ ಎಂಜಿಯರಿಂಗ್ ಉತ್ತಮ ಆಯ್ಕೆ. ಆಂತರಿಕ್ಷಾ ಯಾನದಲ್ಲಿ ಆಗುತ್ತಿರುವ ಪರಿಣಾಮಕಾರಿ ಬದಲಾವಣೆಯಿಂದಾಗಿನ ಇಂದು ಏರೋಸ್ಪೆಸ್ ಎಂಜಿನಿಯರಿಂಗ್‌ನಲ್ಲಿ ಹಲವಾರು ಉದ್ಯೋಗಾವಕಾಶಗಳು ದೊರೆಯುತ್ತಿವೆ. ಈ ಬಗೆಗಿನ ಮಾಹಿತಿ ಇಲ್ಲಿದೆ.
ಹೈಸ್ಕೂಲ್, ಪಿಯುಸಿ ಬಳಿಕ ಮುಂದೇನೂ ಎಂದು ಒಂದು ಬಾರಿ ತಡಕಾಡಿದರೆ ಕಣ್ಣ ಮುಂದೆ ಸಾವಿರಾರು ಕೋರ್ಸ್‌ಗಳು ಕಾಣಸಿಗುತ್ತವೆ. ಅದರಲ್ಲಿ ನಮ್ಮ ಸಾಮಾರ್ಥ್ಯಕ್ಕೆ ತಕ್ಕುದಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದೊಂದು ಸವಾಲು. ಪಿಯುಸಿ ಆದ ಬಳಿಕ ವಿವಿಧ ವಿಷಯಗಳ ಪದವಿ, ವೈದ್ಯಕೀಯ, ಎಂಜಿನಿಯರಿಂಗ್ ಸಹಿತ ಸಾವಿರಾರು ಅವಕಾಶಗಳ ನಡುವೆ ಭವಿಷ್ಯದ ದೃಷ್ಠಿಯಿಂದ ಒಂದು ಉತ್ತಮ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ. ನಾವು ಆಯ್ಕೆ ಮಾಡಿಕೊಂಡ ಕೋರ್ಸ್‌ಗಳಿಗೆ ಮುಂದೆ ಉದ್ಯೋಗಾವಕಾಶಗಳು ಹೇಗಿವೆ ಎಂಬ ನಿಟ್ಟಿನಲ್ಲಿ ಭವಿಷ್ಯವನ್ನು ಯಾವ ರೀತಿಯಲ್ಲಿ ರೂಪಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಪಿಯುಸಿ ಬಳಿಕ ನಾವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ನಮ್ಮ ಮುಂದಿನ ಭವಿಷ್ಯದ ಮೇಲೆ ದೊಡ್ಡದಾದ ಪರಿಣಾಮ ಬೀರುವುದರಿಂದ ನಾವು ಮುಂದಿನ ಹೆಜ್ಜೆಯನ್ನು ಯೋಚಿಸಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಪ್ರಸ್ತುತ ಬಹುತೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮಾಡುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ದೇಶ- ವಿದೇಶಗಳಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸೃಷ್ಟಿಯಾಗುತ್ತಿರುವ ಉದ್ಯೋಗಾವಕಾಶಗಳು. ಎಂಜಿನಿಯರಿಂಗ್ ಮಾಡುವುದೆಂದು ಯೋಚನೆ ಮಾಡಿದ ಬಳಿಕ ಅದರಲ್ಲಿರುವ ಉಪಶಾಖೆಗಳನ್ನು ಆಯ್ಕೆ ಮಾಡಿಕೊಳ್ಳುವುದು ದೊಡ್ಡ ಕೆಲಸ. ಮೆಕಾನಿಕಲ್, ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಶನ್, ಕಂಪ್ಯೂಟರ್ ಸೈನ್ಸ್, ಮೆಕಾಟ್ರನಿಸ್, ಕೆಮಿಕಲ್, ಏರೋನಾಟಿಕಲ್, ಏರೋಸ್ಪೆಸ್ ಹೀಗೆ ಹಲವಾರು ಉಪಶಾಖೆಗಳಿವೆ. ಇದರಲ್ಲಿ ಅತ್ಯುತ್ತಮ ಶಾಖೆಗಳನ್ನು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಯಾರೆಲ್ಲ ಈ ಕೋರ್ಸ್ ಮಾಡಬಹುದು?
ಏರೋಸ್ಪೆಸ್ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು ಪಿಯುಸಿ ಅಥವಾ ಈ ಹಿಂದಿನ ತರಗತಿಯಲ್ಲಿ ಗಣಿತ ಹಾಗೂ ಭೌತಶಾಸ್ತ್ರ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು. ಇನ್ನೂ ಕೆಲವು ಸಂಸ್ಥೆಗಳು ಭೌತಶಾಸ್ತ್ರದ ಬದಲಾಗಿ ರಸಾಯನಶಾಸ್ತ್ರವನ್ನು ಮುಖ್ಯ ವಿಷಯವಾಗಿ ಆಯ್ಕೆ ಮಾಡಿರುತ್ತವೆ. ಆದರೆ ಏರೋಸ್ಪೆಸ್ ಎಂಜಿನಿಯರಿಂಗ್ ಮಾಡಲು ಗಣಿತ ಹಾಗೂ ಭೌತಶಾಸ್ತ್ರ ವಿಷಯಗಳು ಮುಖ್ಯವಾಗಿರುತ್ತದೆ. ಈ ಎರಡು ವಿಷಯಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಏರೋಸ್ಪೆಸ್ ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ವಿಪುಲ ಅವಕಾಶಗಳು
ಏರೋಸ್ಪೆಸ್ ಎಂಜಿನಿಯರಿಂಗ್ ವೇಗವಾಗಿ ಅಭಿವೃದ್ಧಿ ಹೊಂದಿರುವ ಉದ್ಯಮ.ಜಗತ್ತಿನ ಎರಡನೇ ಅತಿ ದೊಡ್ಡ ಏರೋಸ್ಪೆಸ್ ವಿಭಾಗ ಯುಎಸ್‌ಎಯಲ್ಲಿದೆ. ಭಾರತ ಸಹಿತ ಜಗತ್ತಿನ ಎಲ್ಲ ದೇಶಗಳಲ್ಲೂ ಏರೋಸ್ಪೆಸ್ ಎಂಜಿನಿಯರಿಂಗ್ ಪದವಿ ಪಡೆದ ಉದ್ಯೋಗಿಗಳಿಗೆ ಉತ್ತಮ ಅವಕಾಶಗಳಿವೆ. ವಿಮಾನ ಉತ್ಪಾದನ ಕಂಪೆನಿಗಳು , ಸಶಸ್ತ್ರ ಪಡೆಗಳು, ಸರಕಾರಿ ಸಂಶೋಧನ ಕೇಂದ್ರಗಳು, ತರಬೇತಿ ಸಂಸ್ಥೆಗಳು ಸಹಿತ ಉಪಗ್ರಹ ಆಧಾರಿತ ಪರಿಕರಣಗಳ ತಯಾರಿ ಕಂಪೆನಿಗಳಲ್ಲೂ ಉದ್ಯೋಗಾವಕಾಶಗಳಿವೆ. ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಂಡರೆ ವಿಮಾನಯಾನದ ಎಲ್ಲ ವಿಭಾಗಗಳಲ್ಲೂ ಉದ್ಯೋಗಾವಕಾಶಗಳು ಹೆಚ್ಚು ಇರಲಿದೆ.
ಏರೋಸ್ಪೇಸ್‌ಎಂಜಿನಿಯರಿಂಗ್‌ಗೆ ಉತ್ತಮ ಅವಕಾಶ
ಏರೋಸ್ಪೇಸ್ ಎಂಜಿನಿಯರಿಂಗ್ ಎಂದರೆ ಅಂತರಿಕ್ಷಯಾನ ಎಂಜಿನಿಯರಿಂಗ್. ಎಂಜಿನಿಯರಿಂಗ್ ಶಿಕ್ಷಣದ ಒಂದು ಶಾಖೆ ಇದಾಗಿದ್ದು, ಇದರಲ್ಲಿ ವಿಮಾನ, ಉಪಗ್ರಹಕ್ಕೆ ಸಂಬಂಧಿಸಿದ ವಿಷಯಗಳ ಅಧ್ಯಯನ ಮಾಡಲಾಗುತ್ತದೆ. ಈ ವಿಭಾಗದಲ್ಲಿ ವಿಮಾನ, ವಿಮಾನದ ಸುರಕ್ಷತೆ, ಇಂಧನ ದಕ್ಷತೆ, ಬಾಹ್ಯಾಕಾಶ ನೌಕೆಯ ಹಾರಾಟದಲ್ಲಿ ವಾತಾವರಣದ ಪರಿಣಾಮ ಮೊದಲಾದವುಗಳ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಇದರಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ , ಪರಿಶೀಲನೆ ಅಥವಾ ನಿರ್ವಹಣೆ ಎಂಬ ಎರಡು ವಿಭಾಗಗಳಿರುವುದರಿಂದ ಇದರಲ್ಲೊಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಇದನ್ನು ಹೊರತುಪಡಿಸಿ ಒಂದು ವಿಮಾನ ತಯಾರಿಸುವ ಯೋಜನೆಯ ವೆಚ್ಚ, ಸಮಯ, ಉನ್ನತೀಕರಣ, ತಾಂತ್ರಿಕವಾದ ಅಭಿವೃದ್ಧಿ ಹಾಗೂ ವಿಮಾನ ದುರಂತವಾದಲ್ಲಿ ಅದಕ್ಕೆ ಕಾರಣ ಮೊದಲಾದವುಗಳ ಬಗ್ಗೆ ಕಾರ್ಯನಿರ್ವಹಿಸಬೇಕಾಗುತ್ತದೆ.
ಏರೋಸ್ಪೆಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಮಿಶ್ರಣದೊಂದಿಗೆ ವಿಮಾನವನ್ನು ತಯಾರಿಸುವ ಬಗ್ಗೆ ತಿಳಿಯಬೇಕಾಗುತ್ತದೆ. ಈ ಕೋರ್ಸ್ ಮೂರರಿಂದ 5 ವರ್ಷದವರೆಗೆ ಇರುತ್ತದೆ. ಕೋರ್ಸ್‌ನ ಮೂರನೇ ವರ್ಷದಲ್ಲೇ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಪಾಲ್ಗೊಳ್ಳುವ ಅವಕಾಶಗಳಿವೆ. ಅದರಂತೆ ಹಲವಾರು ವಿಮಾನ ತಯಾರಿಕೆ ಕಂಪೆನಿಗಳು ಏರೋಸ್ಪೆಸ್ ವಿದ್ಯಾರ್ಥಿಗಳನ್ನು ಕೋರ್ಸ್ ಮುಗಿಯುವ ಮುನ್ನವೇ ಅವರ ಅರ್ಹತೆಗೆ ತಕ್ಕುದಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಕೋರ್ಸ್ ಪೂರ್ಣಗೊಳ್ಳುವ ಮುನ್ನವೇ ಉದ್ಯೋಗಾವಕಾಶಗಳು ಅರಸಿಕೊಂಡು ಸಾಧ್ಯತೆ ಇದೆ. ಹಾಗಾಗಿ ಕೋರ್ಸ್ ಆಯ್ಕೆ ಮಾಡಿಕೊಂಡ ಬಳಿಕ ಶ್ರದ್ಧೆಯಿಂದ ಪಾಠಗಳನ್ನು ಆಲಿಸಿ, ಹೊಸ ಪ್ರಯೋಗಗಳನ್ನು ಮಾಡಲು ಹೊರಟರೆ ಇನ್ನಷ್ಟು ಅವಕಾಶಗಳು ಸೃಷ್ಠಿಯಾಗಬಲ್ಲದು. ಅಲ್ಲದೆ ಏರೋಸ್ಪೆಸ್ ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ. ಮಾಡುವ ಅವಕಾಶಗಳಿವೆ. ಸಂಶೋಧನೆಗಳನ್ನು ಮಾಡಲು ವಿಪುಲ ಅವಕಾಶಗಳಿವೆ.
- ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.