ಎಸೆಸೆಲ್ಸಿ: ಆಳ್ವಾಸ್ ಕನ್ನಡ ಮಾಧ್ಯಮ ಶೇ.100 ಸಾಧನೆ
Team Udayavani, May 1, 2019, 6:16 AM IST
ಮೂಡುಬಿದಿರೆ: ಎಸೆಸೆಲ್ಸಿ ಪರೀಕ್ಷೆಗೆ ಹಾಜರಾದ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಪ್ರವರ್ತಿತ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಎಲ್ಲ 158 ಮಂದಿ ಪ್ರಥಮ ದರ್ಜೆ (140 ವಿಶಿಷ್ಟ) ಯಲ್ಲಿ ಪಾಸಾಗಿ ಶೇ. 100 ಫಲಿತಾಂಶ ದಾಖಲಾಗಿದೆ.
ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ 662 ವಿದ್ಯಾರ್ಥಿಗಳ ಪೈಕಿ 652 ಮಂದಿ ಪಾಸಾಗಿ ಶೇ. 98. 43 ಫಲಿತಾಂಶ ಬಂದಿದೆ. ಆಂಗ್ಲ ಮಾಧ್ಯಮದಲ್ಲಿ ಮೂವರು 623 ಅಂಕ ಗಳಿಸಿ ರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿದ್ದಾರೆ. ಎರಡೂ ಶಾಲೆಗಳಲ್ಲಿ ಒಟ್ಟು 88 ಮಂದಿ 600 ಪ್ಲಸ್ ಅಂಕ ಗಳಿಸಿದ್ದು ದ.ಕ. ಜಿಲ್ಲೆಯ ಟಾಪ್ 10ರಲ್ಲಿ ಆಳ್ವಾಸ್‌ನ 4 ಮಂದಿ ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಳ್ವಾಸ್ ಆಂಗ್ಲ ಮಾಧ್ಯಮದ ಶ್ರೀಯಾ ಪೈ, ಸುಜ್ಞಾನ್ ಆರ್. ಶೆಟ್ಟಿ, ವಿದ್ಯಾಶ್ರೀ ಯು. 625ರಲ್ಲಿ 623, ಸ್ಪೂ ರ್ತಿ ಮುರಳೀಧರ ಹುರಲಿ 622, ರಾಹುಲ್ ಯಾದವ್ 620 ಅಂಕ ಗಳಿಸಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮಂಜುನಾಥ ಮಲ್ಲಪ್ಪ 620 ಅಂಕ ಗಳಿಸಿ ದ.ಕ. ಜಿಲ್ಲೆಯಲ್ಲಿ ಪ್ರಥಮ ಸ್ಥಾನ
ಗಳಿಸಿದ್ದಾರೆ.
ನೂರಕ್ಕೆ ನೂರು ಅಂಕ
ಕನ್ನಡದಲ್ಲಿ 59 ಮಂದಿ, ಇಂಗ್ಲಿಷ್‌ನಲ್ಲಿ 14, ಹಿಂದಿಯಲ್ಲಿ 37, ಸಂಸ್ಕೃತದಲ್ಲಿ 21, ಗಣಿತದಲ್ಲಿ 24, ವಿಜ್ಞಾನದಲ್ಲಿ 4 ಹಾಗೂ ಸಮಾಜವಿಜ್ಞಾನದಲ್ಲಿ 20 ಮಂದಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. 119 ಮಂದಿ ಶೇ.95ಕ್ಕಿಂತ ಅಧಿಕ, 145 ಮಂದಿ ಶೇ.90ಕ್ಕಿಂತ ಅಧಿಕ, 123 ಮಂದಿ ಶೇ.85ಕ್ಕಿಂತ ಅಧಿಕ, 110 ಮಂದಿ 80ಕ್ಕಿಂತ ಅಧಿಕ, 104 ಮಂದಿ ಶೇ.75ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ ಎಂದು ಅವರು ತಿಳಿಸಿದರು.
ಶಾಲೆಯ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಸಹನಾ ಪಿ.ಹೆಗ್ಡೆ, ಕನ್ನಡ ಮಾಧ್ಯಮ ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.