ವಿವಾದದಲ್ಲಿ ಕಿಂಗ್ಸ್ ಇಲೆವನ್ ಸಹ ಮಾಲಕ
Team Udayavani, May 1, 2019, 10:03 AM IST
ಹೊಸದಿಲ್ಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕ ನೆಸ್ ವಾಡಿಯ ಅವರಿಗೆ ಡ್ರಗ್ಸ್ ಹೊಂದಿರುವ ಕಾರಣಕ್ಕಾಗಿ ಜಪಾನಿನಲ್ಲಿ 2 ವರ್ಷಗಳ ಅಮಾನತು ಜೈಲು ಶಿಕ್ಷೆ ನೀಡಲಾಗಿದೆ.
ಮಾರ್ಚ್ ವೇಳೆ ಜಪಾನಿನಲ್ಲಿದ್ದ ವಾಡಿಯ ಅವರನ್ನು ಉತ್ತರ ಜಪಾನಿನಲ್ಲಿರುವ ನ್ಯೂ ಚಿಟೋಸ್ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆದರೆ ಅವರ ಈ ಶಿಕ್ಷೆಯನ್ನು ಐದು ವರ್ಷಗಳ ಕಾಲ ತಡೆ ಹಿಡಿಯಲಾಗಿದೆ. ಈ ಅಮಾನತು ಅವಧಿಯಲ್ಲಿ ವಾಡಿಯ ಮುಂದಿನ 5 ವರ್ಷಗಳಲ್ಲಿ ಮತ್ತಷ್ಟು ಅಪರಾಧಗಳನ್ನು ಮಾಡಿದರೆ ಬಂಧಿಸಲಾಗುತ್ತದೆ.
ವಾಡಿಯಾ ಗ್ರೂಪಿನ ಉತ್ತರಾಧಿಕಾರಿಯಾಗಿರುವ ಅವರು ರಜೆಯ ಮಜಾಕ್ಕಾಗಿ ಜಪಾನಿಗೆ ತೆರಳಿದ್ದು, ಅಲ್ಲಿ ಕೆಲವು ಸಮಯ ಕಳೆದ ಅನಂತರ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ. 25 ಗ್ರಾಂ. ಕ್ಯಾನಿಬಿಸ್ ರಿಸಿನ್ ಹೊಂದಿದ್ದ ವಾಡಿಯ ಮೂಲಗಳ ಪ್ರಕಾರ ವಾಡಿಯ ಗ್ರೂಪ್ ನೆಸ್ ವಾಡಿಯ ಅವರ ಬಂಧನದ ಸುದ್ದಿಯನ್ನು ತಳ್ಳಿಹಾಕಿದೆ.
ಚಿಟೋಸ್ ವಿಮಾನನಿಲ್ದಾಣದಲ್ಲಿ ಸುಮಾರು 25 ಗ್ರಾಂ. ಕ್ಯಾನಬಿಸ್ ರಿಸಿನ್ ಎಂಬ ಡ್ರಗ್ ಅನ್ನು ಟ್ರೋಸರ್ ಕಿಸೆಯಲ್ಲಿ ಸಾಗಿಸುತ್ತಿರವುದನ್ನು ಮತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಸಪೋರೊ ಜಿಲ್ಲಾ ನ್ಯಾಯಾಲಯ ಅವರಿಗೆ ಮೊದಲು 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ಅನಂತರ ಈ ಶಿಕ್ಷೆಗೆ ಐದು ವರ್ಷಗಳ ತಡೆ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.