ಪೊಲೀಸನ ಮಗನೇ ಕಳವಿನ ಸೂತ್ರಧಾರಿ!
ಸೂತ್ರಧಾರಿ! | ಗೋವಾ ಎಎಸ್‌ಐ ಪುತ್ರ ಸೇರಿ ಇಬ್ಬರ ಬಂಧನ | 4.15 ಲಕ್ಷ ಮೌಲ್ಯದ ಸ್ವತ್ತು ವಶ
Team Udayavani, May 1, 2019, 10:57 AM IST
ಹುಬ್ಬಳ್ಳಿ: ವಿದ್ಯಾನಗರ ಪೊಲೀಸರು ಅಂತಾರಾಜ್ಯ ಸರಗಳ್ಳರನ್ನು ಕಳವಿನ ಚಿನ್ನದಸರ, ಬೈಕ್ ಸಮೇತ ಬಂಧಿಸಿದರು.
ಹುಬ್ಬಳ್ಳಿ: ಮಹಿಳೆಯೊಬ್ಬರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಅಂತಾರಾಜ್ಯ ಕಳ್ಳರಿಬ್ಬರನ್ನು ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 4.15ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋವಾದ ಪರಿವರಿಯಂ ಮೂಲದ ಇಲ್ಲಿನ ಉಣಕಲ್ಲ ಸಾಯಿನಗರ ನಿವಾಸಿ ಗೌರೇಶ ಆರ್. ಕೇರಕರ ಹಾಗೂ ಹಳೇಹುಬ್ಬಳ್ಳಿ ಚನ್ನಪೇಟೆ ಲತ್ತಿಪೇಟೆಯ ಕುಮಾರ ಎಂ. ಸುಣಗಾರ ಬಂಧಿತರಾಗಿದ್ದಾರೆ ಎಂದರು.
ಗೌರೇಶ ಮೇಲೆ ಗೋವಾದಲ್ಲಿ 14 ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 3 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಕಾರಾಗೃಹ ಶಿಕ್ಷೆ ಕೂಡ ಆಗಿದೆ. ಈತ ಗೋವಾ ಪೊಲೀಸ್ ಇಲಾಖೆಯಲ್ಲಿನ ಎಎಸ್‌ಐ ಮಗನಾಗಿದ್ದು, ಅವರು ಇವನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ಹೀಗಾಗಿ ನಗರದಲ್ಲಿ ವಾಸಿಸುತ್ತಿದ್ದ. ಆಟೋ ರಿಕ್ಷಾ ಚಾಲಕನಾದ ಕುಮಾರ ಸುಣಗಾರ ಗೋವಾಕ್ಕೆ ಹೋಗಿದ್ದಾಗ ಗೌರೇಶನ ಪರಿಚಯವಾಗಿತ್ತು. ಅಂದಿನಿಂದ ಇಬ್ಬರು ಕೂಡಿ ಸರಗಳ್ಳತನ ಮಾಡುತ್ತಿದ್ದರು ಎಂದಿ ವಿವರ ನೀಡಿದರು.
ಬಂಧಿತರಿಂದ ನಗರದ ವಿದ್ಯಾನಗರ, ಹಳೇಹುಬ್ಬಳ್ಳಿ, ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನದ ಒಟ್ಟು ನಾಲ್ಕು ಪ್ರಕರಣ ಭೇದಿಸಿ, ಅಂದಾಜು 4,15,500 ರೂ. ಮೌಲ್ಯದ 100 ಗ್ರಾಂ ತೂಕವುಳ್ಳ ನಾಲ್ಕು ಚಿನ್ನದ ಸರಗಳು, ಕಳ್ಳತನಕ್ಕೆ ಬಳಸುತ್ತಿದ್ದ ಬೈಕ್, ಎರಡು ಮೊಬೈಲ್, ಖಾರದಪುಡಿ, ನೇಲ್ ಕಟರ್ ವಶಪಡಿಸಿಕೊಳ್ಳಲಾಗಿದೆ. ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಮೂವರು ಪೇದೆಗಳಿಗೆ ತಲಾ 5 ಸಾವಿರ ಹಾಗೂ ತಂಡಕ್ಕೆ 5 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ನಾಗೇಶ ಡಿ.ಎಲ್., ಎಸಿಪಿ ಶ್ರೀಕಾಂತ ಕಟ್ಟಿಮನಿ, ಇನ್ಸ್‌ಪೆಕ್ಟರ್ ಆನಂದ ಒನಕುದ್ರೆ ಮೊದಲಾದವರಿದ್ದರು.
ನಾಲ್ಕು ಪ್ರಕರಣಕ್ಕೆ ಮೋಕ್ಷ:
ಎಚ್‌ಡಿಬಿಆರ್‌ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್ ಹಾಗೂ ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ವಾಹನ ಹೊರತುಪಡಿಸಿ ಇನ್ನಿತರೆ ವಾಹನಗಳು ಓಡಾಡುವಂತಿಲ್ಲ. ಅಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹಗಲು ಹೊತ್ತಿನಲ್ಲಿ ಲಾರಿಗಳ ನಗರ ಪ್ರವೇಶ ನಿರ್ಬಂಧಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಆಟೋ ರಿಕ್ಷಾಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಕಾರ್ಯಗತಗೊಳಿಸಲು ಆಗಿರಲಿಲ್ಲ. ಈ ಕುರಿತು ಸಂಚಾರ ವಿಭಾಗದ ಡಿಸಿಪಿ, ಎಸಿಪಿ ಅವರೊಂದಿಗೆ ಚರ್ಚಿಸಿ ವಾರದೊಳಗೆ ಜಾರಿಗೊಳಿಸಲಾಗುವುದು. –ಎಂ.ಎನ್. ನಾಗರಾಜ, ಹು-ಧಾ ಪೊಲೀಸ್ ಆಯುಕ್ತ
ಕಾರ್ಯಾಚರಣೆ ನಡೆದಿದ್ದು ಹೇಗೆ?:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.