ಜಾನುವಾರು ಗೋಳು ಕೇಳ್ಳೋರಿಲ್ಲ!

•ಬಿಸಿಲಿನ ತಾಪಕ್ಕೆ ಬಳಲಿದ ಹಸುಗಳು•ತಾಲೂಕಿನಲ್ಲಿ ಮೇವಿನ ಕೊರತೆ ತೀವ್ರ

Team Udayavani, May 1, 2019, 11:46 AM IST

bagalkote-3-tdy..

ಹುನಗುಂದ: ಗೋ ಶಾಲೆ ನಿರ್ಮಿಸದಿರುವುದರಿಂದ ಬಿಸಿಲಿನಲ್ಲಿರುವ ಜಾನುವಾರುಗಳು.

ಹುನಗುಂದ: ಈ ಬಾರಿಯ ಬೇಸಿಗೆಯು ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಕಾಣದ ಬಿಸಿಲು ಸೃಷ್ಟಿಯಾಗಿದೆ. ಬಿಸಿಲಿನ ತಾಪಕ್ಕೆ ಜನರಿಗಷ್ಟೆ ಅಲ್ಲ, ಜಾನುವಾರಗಳು ಕೂಡಾ ನಿಟ್ಟುಸಿರು ಬಿಡುತ್ತಿವೆ.

ಹೌದು, ಸತತ ಬರಗಾಲದ ಛಾಯೆ ತಾಲೂಕಿನ ಜನ ಜಾನುವಾರುಗಳಿಗೆ ಮೇಲಿಂದ ಮೇಲೆ ಬರೆ ಸಿಡಿಲು ಬಡಿದಂತೆ ಅಪ್ಪಳಿಸುತ್ತಿದೆ. ಈ ವರ್ಷ ಬಿಸಿಲನ ತಾಪ ಹೆಚ್ಚಾಗುತ್ತಿದೆ. ಜನರಿಗೆ ಉಸಿರು ಕಟ್ಟುವ ಸ್ಥಿತಿ ನಿರ್ಮಾಣವಾಗಿದ್ದು, ಇನ್ನೂ ಜಾನುವಾರುಗಳ ಸ್ಥಿತಿ ಹೇಳ ತೀರದು. ಕೆಂಡದಂತ ಬಿಸಿಲೇ ದನಕರುಗಳ ಆಶ್ರಯ ತಾಣವಾಗಿದೆ.

ಬೇಸಿಗೆ ಪ್ರಾರಂಭಕ್ಕೂ ಮುಂಚೆಯೇ ಗೋಶಾಲೆ ತೆ‌ರೆದು ತಾಲೂಕಿನ ಜಾನುವಾರುಗಳಿಗೆ ಮೇವು, ನೀರು, ನೆರಳಿನ ಆಶ್ರಯ ಮಾಡಬೇಕಾದ ತಾಲೂಕಾಡಳಿತ ಚುನಾವಣೆಯ ನೆಪ ಹೇಳಿ ಗೋಶಾಲೆ ತೆರೆದಿಲ್ಲ. ಗುಬ್ಬಿಯ ಮೇಲೆ ಬ್ರಹ್ಮಾಶ÷ ಬಿಟ್ಟಂತೆ ಮೂಕ ಪ್ರಾಣಿಗಳ ವೇದನೆ ಅರಿಯದೇ ಗೋಶಾಲೆ ನಿರ್ಮಿಸಲು ಮುಂದಾಗಿಲ್ಲ.

ಜಾಲಿ-ಬೇಲಿಯ ನೆರಳೇ ಜಾನುವಾರುಗಳಿಗೆ ಆಶ್ರಯ:

ಬೇಸಿಗೆ ಬಿಸಿಲನ ತಾಪಮಾನ ಪ್ರತಿನಿತ್ಯ ಹೆಚ್ಚಾಗುತ್ತಿದ್ದು, ತಾಲೂಕಿನ ಜಾನುವಾರುಗಳಿಗೆ ಸರಿಯಾದ ನೆರಳಿನ ವ್ಯವಸ್ಥೆಯಿಲ್ಲದೇ ಜಾಲಿ ಬೇಲಿಗಳೇ ಅವುಗಳ ನೆರಳಿನ ತಾಣವಾಗಿದೆ. ಇದರಿಂದ ಬಿಸಿಲಿನ ತಾಪಕ್ಕೆ ಮೈ ಹೊಡಿ ಬಿಸಿಲನ್ನು ತಾಳಿಕೊಳ್ಳಲು ಸಾಧ್ಯವಾಗದೇ ಎತ್ತು, ಎಮ್ಮೆ, ಆಡು, ಕುರಿಗಳು ಗೋಗರೆಯುತ್ತಿವೆ. ಮೂಕನ ನೋವು, ವೇದನೆ ಮೂಕನಿಗೆ ಗೊತ್ತಾಗುವಂತೆ ಸಾಕಿದ ಪ್ರಾಣಿಗಳ ನೋವು ರೈತರಿಗೆ ಗೊತ್ತಾಗುತ್ತದೆ ವಿನಹ ಅಕಾರಿಗಳಿಗೇನು ಗೊತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೇವಿನ ಅಭಾವ ರೈತರು  ಕಂಗಾಲು:

ಪ್ರತಿ ವರ್ಷ ಬೇಸಿಗೆ ಆರಂಭಕ್ಕೆ ಮುನ್ನ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ತಾಲೂಕಾಡಳಿತ ತಾಲೂಕಿನ ಜಾನುವಾರಗಳಿಗೆ ಬೇಸಿಗೆ ಸಮಯದಲ್ಲಿ ಮೇವಿನ ಕೊರತೆಯಾಗದಂತೆ ಮುಂಚಿತವಾಗಿ ಮೇವು ಸಂಗ್ರಹಿಸಿ ಅವಶ್ಯಕತೆ ಇದ್ದಲ್ಲಿ ಗೋ ಶಾಲೆ ನಿರ್ಮಿಸಬೇಕು. ಸರ್ಕಾರದ ನಿಯಮವಿದ್ದರೂ ಸತತ ಬರಗಾಲದಿಂದ ಮಳೆಯಿಲ್ಲದೇ ದನಕರುಗಳನ್ನು ಬದಿಕಿಸಲು ಜಾನುವರುಗಳು ಮಾಲೀಕರು ನಿತ್ಯ ಹೆಣಗಾಡುತ್ತಿದ್ದಾರೆ. ಸರಿಯಾದ ಮಳೆಯಿಲ್ಲದೆ ಬೆಳಯನ್ನೇ ಕಾಣದ ರೈತರು ಜಾನುವಾರುಗಳಗೆ ಮೇವು ಎಲ್ಲಿಂದ ತರಬೇಕು ಎಂಬುದು ತಿಳಿಯದೇ ಕಂಗಾಲಾಗಿದ್ದಾರೆ.

ತಾಲೂಕಿನ ಜಿಪಂ ಕ್ಷೇತ್ರಕ್ಕೊಂದರಂತೆ ಮತ್ತು ಹುನಗುಂದ ಮತ್ತು ಇಲಕಲ್ಲ ಅವಳಿ ನಗರಕ್ಕೆ ಒಂದರಂತೆ ಏಳು ಗೋಶಾಲೆ ನಿರ್ಮಿಸಬೇಕು ಎಂದು ಕಳೆದ ಎರಡು ತಿಂಗಳ ಹಿಂದೆ ರೈತ ಸಂಘದಿಂದ ಜಿಲ್ಲಾಧಿಕಾರಿ ಮತ್ತು ತಾಲೂಕಿನ ತಹಶೀಲ್ದಾರಿಗೆ ಮನವಿ ಸಲ್ಲಿಸಿದ್ಧೇವೆ. ಇಲ್ಲಿವರೆಗೆ ಒಂದು ಗೋಶಾಲೆ ತರೆದಿಲ್ಲ. ಇದರಿಂದ ಜಾನುವಾರುಗಳಿಗೆ ಮೇವು, ನೀರು, ನೆರಳು ಇಲ್ಲದೇ ನೆರಳಾಡುವ ಪರಸ್ಥಿತಿ ನಿರ್ಮಾಣವಾಗಿದೆ. –ಮಲ್ಲನಗೌಡ ತುಂಬದ, ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ.

•ಮಲ್ಲಿಕಾರ್ಜುನ ಬಂಡರಗಲ್ಲ

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.