ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ನಂಬರ್ 9
•15ರಿಂದ 9ನೇ ಸ್ಥಾನಕ್ಕೇರಿದ ದಾವಣಗೆರೆ•29 ಸರ್ಕಾರಿ ಶಾಲೆಗಳಲ್ಲಿ ಶೇ. 100 ಫಲಿತಾಂಶ
Team Udayavani, May 1, 2019, 1:09 PM IST
ದಾವಣಗೆರೆ: ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡುತ್ತಿರುವ ವಿದ್ಯಾರ್ಥಿಗಳು.
ದಾವಣಗೆರೆ: ಕಳೆದ ಮಾರ್ಚ್-ಏಪ್ರಿಲ್ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆ ಶೇ.86.28 ರಷ್ಟು ಫಲಿತಾಂಶದೊಂದಿಗೆ 9ನೇ ಸ್ಥಾನಕ್ಕೇರಿದೆ.
ಮಂಗಳವಾರ ಅಂತರ್ಜಾಲದಲ್ಲಿ ಪ್ರಕಟಗೊಂಡ ಫಲಿತಾಂಶದ ಪ್ರಕಾರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 23,557 ವಿದ್ಯಾರ್ಥಿಗಳಲ್ಲಿ 20,325 ವಿದ್ಯಾರ್ಥಿಗಳು (ಶೇ.86.28) ತೇರ್ಗಡೆಯಾಗಿದ್ದಾರೆ.
2018ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆ ಶೇ.81.56 ರಷ್ಟು ಫಲಿತಾಂಶದೊಂದಿಗೆ 15ನೇ ಸ್ಥಾನದಲ್ಲಿತ್ತು.ಈ ಬಾರಿ ಶೈಕ್ಷಣಿಕ ಹಬ್… ಖ್ಯಾತಿಯ ದಾವಣಗೆರೆ 10ರೊಳಗೆ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ.
ದಾವಣಗೆರೆ ಉತ್ತರ ವಲಯದಲ್ಲಿ 3,357 ವಿದ್ಯಾರ್ಥಿಗಳಲ್ಲಿ 2,710(ಶೇ.80.73), ದಾವಣಗೆರೆ ದಕ್ಷಿಣ ವಲಯದಲ್ಲಿ 6,405 ವಿದ್ಯಾರ್ಥಿಗಳಲ್ಲಿ 5,229(ಶೇ.81.64), ಹರಪನಹಳ್ಳಿಯಲ್ಲಿ 3,416 ವಿದ್ಯಾರ್ಥಿಗಳಲ್ಲಿ 2,978(ಶೇ.87.18), ಹೊನ್ನಾಳಿಯಲ್ಲಿ 2,805 ವಿದ್ಯಾರ್ಥಿಗಳಲ್ಲಿ 2,428(ಶೇ.86.56), ಜಗಳೂರಿನಲ್ಲಿ 2,149 ವಿದ್ಯಾರ್ಥಿಗಳಲ್ಲಿ 1,842(ಶೇ.85.71), ಹರಿಹರದಲ್ಲಿ 3,404 ವಿದ್ಯಾರ್ಥಿಗಳಲ್ಲಿ 2,830(ಶೇ.83.14), ಚನ್ನಗಿರಿಯಲ್ಲಿ 3,835 ವಿದ್ಯಾರ್ಥಿಗಳಲ್ಲಿ 2,994(ಶೇ.78.07) ತೇರ್ಗಡೆಯಾಗಿದ್ದಾರೆ. ಹರಪನಹಳ್ಳಿ ತಾಲೂಕು ಪ್ರಥಮ ಸ್ಥಾನದಲ್ಲಿದ್ದರೆ, ಚನ್ನಗಿರಿ ಕೊನೆ ಸ್ಥಾನದಲ್ಲಿದೆ.
ದಾವಣಗೆರೆ ಜಿಲ್ಲೆಯಲ್ಲಿನ 177 ಸರ್ಕಾರಿ ಪ್ರೌಢಶಾಲೆಯ 9,744 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೇ.85.12 ರಷ್ಟು ಪ್ರಮಾಣದಲ್ಲಿ 8,294 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 172 ಅನುದಾನಿತ ಶಾಲೆಗಳ 7,671 ವಿದ್ಯಾರ್ಥಿಗಳಲ್ಲಿ 6,529(ಶೇ.85.11), 137 ಅನುದಾನ ರಹಿತ ಶಾಲೆಗಳ 6,142 ವಿದ್ಯಾರ್ಥಿಗಳಲ್ಲಿ 5,502 (ಶೇ.89.58) ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯ 177 ಸರ್ಕಾರಿ ಪ್ರೌಢಶಾಲೆಗಳಲ್ಲಿ 29 ಶಾಲೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. 172 ಅನುದಾನಿತ ಶಾಲೆಗಳ ಪೈಕಿ 6, 137 ಅನುದಾನರಹಿತ ಶಾಲೆಗಳಲ್ಲಿ 24 ಶಾಲೆಯಲ್ಲಿ ಶೇ.100 ಫಲಿತಾಂಶ ಬಂದಿದೆ. ಯಾವುದೇ ಶಾಲೆ ಶೂನ್ಯ ಫಲಿತಾಂಶ ಪಡೆದಿಲ್ಲ ಎಂಬುದು ಗಮನಾರ್ಹ.
ಎಲ್ಲಾ 7 ಶೈಕ್ಷಣಿಕ ವಲಯಗಳಿಂದ ಪರೀಕ್ಷೆ ಬರೆದಿದ್ದ 11,521 ಬಾಲಕರಲ್ಲಿ 9,676 ಬಾಲಕರು ತೇರ್ಗಡೆ ಯಾಗಿದ್ದಾರೆ. 12,306 ಬಾಲಕಿಯರಲ್ಲಿ 10,649 ಬಾಲಕಿಯರು ತೇರ್ಗಡೆಯಾಗುವ ಮೂಲಕ ಎಂದಿನಂತೆ ಮೇಲುಗೈ ಸಾಧಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 14,793 ವಿದ್ಯಾರ್ಥಿಗಳಲ್ಲಿ 12,400(ಶೇ.83.82), ಆಂಗ್ಲ ಮಾಧ್ಯಮದ 7,889 ವಿದ್ಯಾರ್ಥಿಗಳಲ್ಲಿ 7,269(ಶೇ.92.14), ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 875 ವಿದ್ಯಾರ್ಥಿಗಳಲ್ಲಿ 656(ಶೇ.74.97) ವಿದ್ಯಾರ್ಥಿಗಳು ಪಾಸಾಗಿದ್ದಾರೆ.
•ಗೌರಮ್ಮ ಪ್ರೌಢಶಾಲೆಗೆ ಶೇ.100 ಫಲಿತಾಂಶ:
ದಾವಣಗೆರೆಯ ವಿನೋಬ ನಗರ 3ನೇ ಮುಖ್ಯರಸ್ತೆ, 9ನೇ ಅಡ್ಡ ರಸ್ತೆಯಲ್ಲಿನ ಶ್ರೀ ಯಜಮಾನ್ ಬೆಳ್ಳೊಡಿ ಸೋಮಶೇಖರಪ್ಪ ಗೌರಮ್ಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 36 ವಿದ್ಯಾರ್ಥಿಗಳಲ್ಲಿ ನಾಲ್ವರು ವಿಶಿಷ್ಟ ದರ್ಜೆ, 32 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
•ಶ್ರೀ ಬಕ್ಕೇಶ್ವರ ಪ್ರೌಢಶಾಲೆ: ಎಂಸಿಸಿ ಎ ಬ್ಲಾಕ್‌ನಲ್ಲಿರುವ ಶ್ರೀ ಬಕ್ಕೇಶ್ವರ ಪ್ರೌಢಶಾಲೆಗೆ ಶೇ.92.8 ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 28 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಆರ್. ಮಂಜುನಾಥ್(ಶೇ.92), ವೀರೇಂದ್ರ (ಶೇ.84.32), ಸಂಜನಾ ಬದ್ಯಾ(ಶೇ.88), ರೇವತಿಬಾಯಿ (ಶೇ.77.28), ಶಬಾನಬಾನು(ಶೇ.77.12) ಅಂಕ ಪಡೆದಿದ್ದಾರೆ. ಸಂಗೀತಾ ಎಂಬ ವಿದ್ಯಾರ್ಥಿನಿ ಕನ್ನಡದಲ್ಲಿ 125ಕ್ಕೆ 122, ವೀರೇಂದ್ರ ಹಿಂದಿಯಲ್ಲಿ 95ಮ ಸಮಾಜ ವಿಜ್ಞಾನದಲ್ಲಿ 94 ಅಂಕ ಗಳಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಕೆ. ಈಶಾನಾಯ್ಕ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.