ರಂಗನತಿಟ್ಟು ಪಕ್ಷಿಧಾಮಕ್ಕೆ 4.07 ಕೋಟಿ ಆದಾಯ
ಕಳೆದ ವರ್ಷಕ್ಕಿಂತಲೂ 40 ಲಕ್ಷ ರೂ. ಆದಾಯ ವೃದ್ಧಿ • ಪಕ್ಷಿಗಳ ಕಲರವ ವೀಕ್ಷಣೆಗೆ ಪ್ರವಾಸಿಗರ ದಂಡು
Team Udayavani, May 1, 2019, 2:38 PM IST
ರಂಗನತಿಟ್ಟಿನಲ್ಲಿ ಪಕ್ಷಿಗಳ ವೀಕ್ಷಣೆಯಲ್ಲಿ ತೊಡಗಿರುವ ಪ್ರವಾಸಿಗರು
ಶ್ರೀರಂಗಪಟ್ಟಣ: ಸದಾ ಪಕ್ಷಿಗಳ ಕಲರವ ಕೇಳಿಬರುವ ರಂಗನತಿಟ್ಟು ಪಕ್ಷಿಧಾಮ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಗಿರುವುದಲ್ಲದೆ, ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಆದಾಯ ಮೂಲವನ್ನೂ ಸೃಷ್ಟಿಸಿಕೊಂಡಿದೆ.
ಕಳೆದ ವರ್ಷ 2017-18ನೇ ಸಾಲಿನಲ್ಲಿ ರಂಗನತಿಟ್ಟು ಪಕ್ಷಿಧಾಮ ಪ್ರವಾಸಿಗರ ಆಗಮನದಿಂದ 3.67 ಕೋಟಿ ರೂ. ಆದಾಯ ಗಳಿಸಿತ್ತು. ಆ ವರ್ಷ 2.50 ಲಕ್ಷ ಜನ ಪ್ರವಾಸಿಗರು ರಂಗನತಿಟ್ಟು ವೀಕ್ಷಣೆಗೆ ಆಗಮಿಸಿದ್ದರು. ಪ್ರಸ್ತುತ 2018-19ನೇ ಸಾಲಿನಲ್ಲಿ 3.27 ಲಕ್ಷ ಪ್ರವಾಸಿಗರ ಭೇಟಿ ನೀಡಿದ್ದು, 4.07 ಕೋಟಿ ರೂ ಆದಾಯ ಗಳಿಸಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ: ಪ್ರವಾಸಿಗರ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚುವರಿಯಾಗಿ 77 ಸಾವಿರ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಿದ್ದಾರೆ. ಇದರ ಪರಿಣಾಮ ಆದಾಯದ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ದೇಶದ ಪ್ರವಾಸಿಗರಲ್ಲದೆ 22 ಸಾವಿರ ವಿದೇಶಿಯರೂ ಭೇಟಿ ನೀಡಿ ಪಕ್ಷಿಧಾಮ ವೀಕ್ಷಿಸಿದ್ದಾರೆ.
ದ್ವೀಪಗಳ ದುರಸ್ತಿ: ವರ್ಷದಿಂದ ವರ್ಷಕ್ಕೆ ರಂಗನತಿಟ್ಟು ಪಕ್ಷಿಧಾಮ ತನ್ನ ಆದಾಯ ಹಾಗೂ ಪ್ರವಾಸಿಗರನ್ನು ಹೆಚ್ಚಿಸಿಕೊಳ್ಳತೊಡಗಿದೆ. ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಕಳೆದ ವರ್ಷ ಕಾವೇರಿ ನೀರು ಹೆಚ್ಚಾಗಿ ಹರಿದು ಪಕ್ಷಿಗಳು ವಾಸಿಸುವ ದ್ವೀಪ(ಐಲ್ಯಾಂಡ್) ನೀರಿನಲ್ಲಿ ಕೊಚ್ಚಿಹೋಗಿತ್ತು. ರಭಸದಿಂದ ನುಗ್ಗಿಬಂದ ನೀರಿನಿಂದ ಹಾನಿಯಾಗಿದ್ದ ದ್ವೀಪಗಳನ್ನು ದುರಸ್ತಿಪಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈಗ ಅವೆಲ್ಲವೂ ಸಂಪೂರ್ಣ ದುರಸ್ತಿಯಾಗಿ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿವೆ.
ಪಕ್ಷಿಗಳ ಸಂಖ್ಯೆಯೂ ಹೆಚ್ಚಳ: ಎತ್ತ ನೋಡಿದರೂ ಪಕ್ಷಿಗಳ ಕಲರವ ಕೇಳಿ ಬರುತ್ತಿವೆ. ಜನವರಿಯಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿರುವ ಪಕ್ಷಿಗಳು, ಈಗ ಸ್ವಚ್ಛಂದವಾಗಿ ಹಾರಾಡುತ್ತಿವೆ. ಇದರಿಂದ ಪಕ್ಷಿಗಳ ಸಂಖ್ಯೆ ರಂಗನತಿಟ್ಟಿನಲ್ಲಿ ಗಣನೀಯವಾಗಿ ಹೆಚ್ಚಳವಾಗಿವೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ ಬೇಸಿಗೆ ರಜೆ ಪ್ರವಾಸಿಗರ ಆಗಮನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಅಭಿವೃದ್ಧಿ ಕಾಮಗಾರಿ: ರಂಗನತಿಟ್ಟು ಪಕ್ಷಿಧಾಮದಲ್ಲಿ 35 ದ್ವೀಪಗಳಿವೆ. ಹಾನಿಗೊಳಗಾಗಿದ್ದ ದ್ವೀಪಗಳಲ್ಲಿ ಮರಳು ಚೀಲಗಳಿಂದ ಕಟ್ಟೆ ಮಾಡಿ ದ್ವೀಪಗಳ ಸುತ್ತಲೂ ಇಟ್ಟು ಸಮತಟ್ಟುಗೊಳಿಸಲಾಗಿದೆ. ಇದರಿಂದ ಪ್ರವಾಸಿಗರ ವಿಹಾರಕ್ಕೆ ಅನುಕೂಲವಾಗಿದೆ. ಇದರಿಂದ ಪೋಷಕರು ಮಕ್ಕಳೊಂದಿಗೆ ಪೋಷಕರು ಪಕ್ಷಿಧಾಮಕ್ಕೆ ಆಗಮಿಸಿ ಇಲ್ಲಿನ ಸೌಂದರ್ಯ ವೀಕ್ಷಣೆ ಮಾಡುತ್ತಿದ್ದಾರೆ. ಪ್ರವಾಸಿಗರು ಕುಳಿತುಕೊಳ್ಳಲು ವಿಶಾಲವಾದ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ.
ಶುಲ್ಕ ಹೆಚ್ಚಳ: ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವೇಶ ಶುಲ್ಕ ಹಾಗೂ ದೋಣಿ ವಿಹಾರದ ಶುಲ್ಕ ಕಳೆದ ಬಾರಿಗಿಂತ ಈ ಬಾರಿ ದರ ಏರಿಕೆ ಮಾಡಲಾಗಿದೆ. 60 ರೂ. ಇದ್ದ ಪ್ರವೇಶ ಶುಲ್ಕವನ್ನು 70 ರೂ.ಗಳಿಗೆ ಏರಿಸಲಾಗಿದೆ. ವಿದೇಶಿಯರಿಗೆ 300 ರೂ. ಇದ್ದ ಪ್ರವೇಶ ಶುಲ್ಕ 400 ರೂ.ಗೆ ಹೆಚ್ಚಿಸಿದೆ. ವಿಶೇಷ ದೋಣಿ ವಿಹಾರಕ್ಕೆ 1000 ರೂ ನಿಂದ 1500 ರೂ.ಗಳಿಗೆ ಶುಲ್ಕ ಹೆಚ್ಚಳ ಮಾಡಿದ್ದರೆ, ವಿದೇಶಿಯರಿಗೂ 2000 ರೂ.ನಿಂದ 3000 ಸಾವಿರ ರೂ.ಗೆ ಏರಿಕೆ ಮಾಡಿದೆ.
ಲೋಕಸಭೆ ಚುನಾವಣೆ ನಿಗದಿಯಾದ ಸಂಧರ್ಭದಲ್ಲಿ ಒಂದು ತಿಂಗಳಿಂದ ಎಲ್ಲಾ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದುವು. ಈಗ ರಾಜ್ಯ ಮತ್ತಿತತರ ಪ್ರದೇಶದಲ್ಲಿ ಚುನಾವಣೆಗಳು ಮುಗಿದಿರುವುದರಿಂದ ಪೋಷಕರೊಂದಿಗೆ ಮಕ್ಕಳು ಮೈಸೂರು ಭಾಗದ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಕಂಡು ಬಂದಿದೆ. ಇನ್ನು ಎರಡು ತಿಂಗಳು ರಂಗನತಿಟ್ಟು ಪರಿಸರ ಹಾಗೂ ಪಕ್ಷಿಪ್ರಿಯರಿಗೆ ಪಕ್ಷಿಗಳ ಕಲರವ ಮುದ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.