ಎಲ್ಲದ್ದಕ್ಕೂ ರೈತ, ಕಾರ್ಮಿಕರ ಸಂಘಟಿತ ಹೋರಾಟವೇ ಪರಿಹಾರ
Team Udayavani, May 2, 2019, 3:00 AM IST
ಹುಣಸೂರು: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಬುಧವಾರ ನಗರದಲ್ಲಿ ಸಿಐಟಿಯು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಜಾಗೃತಿ ಜಾಥಾ ನಡೆಸಿ, ಸಾರ್ವಜನಿಕರ ಗಮನ ಸೆಳೆದವು.
ನಗರದ ಕಲ್ಕುಣಿಕೆ ವೃತ್ತದಿಂದ ಆರಂಭಗೊಂಡ ರೈತ-ಕಾರ್ಮಿಕರ ಮೆರೆವಣಿಗೆಯು ಹಳೇ ಸೇತುವೆ, ರೋಟರಿ ವೃತ್ತ, ಕಲ್ಪತರು ವೃತ್ತದ ಮೂಲಕ ತೆರಳಿ ಮುನೇಶ್ವರ ಕಾವಲ್ ಮೈದಾನದಲ್ಲಿ ಸಮಾವೇಶಗೊಂಡಿತು.
ಬೇಡಿಕೆ ಈಡೇರಿಸಿ: ಮೆರವಣಿಗೆ ಉದ್ದಕ್ಕೂ ಕಾರ್ಮಿಕ ದಿನಾಚರಣೆ ಜಿಂದಾಬಾದ್, ರೈತ-ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ಗುತ್ತಿಗೆ ಪದ್ಧತಿ ರದ್ದಾಗಲಿ, ಕನಿಷ್ಠ ವೇತನ 18 ಸಾವಿರ ರೂ. ನಿಗದಿಗೊಳಿಸಬೇಕು. ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾಗಲಿ ಎಂಬಿತ್ಯಾದಿ ಘೋಷಣೆ ಮೊಳಗಿಸಲಾಯಿತು.
ಹೋರಾಟದ ಫಲ: ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಮಿಕರ ಸಭೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಮಾತನಾಡಿ, 1886ರ ಮೇ 1ರಂದು ಎಂಟು ಗಂಟೆಗಳ ಕೆಲಸದ ಅವಧಿಗಾಗಿ ಹಾಗೂ ಸಂಘ ಕಟ್ಟಿಕೊಳ್ಳುವ ಹಕ್ಕಿಗಾಗಿ ನಡೆದ ಹೋರಾಟದ ಫಲವಾಗಿ ಇಂದು ವಿಶ್ವಾದ್ಯಂತ ಕಾರ್ಮಿಕರು ಈ ದಿನವನ್ನು ಕಾರ್ಮಿಕ ದಿನವಾಗಿ ಆಚರಿಸುತ್ತಿದ್ದಾರೆ ಎಂದು ಸ್ಮರಿಸಿದರು.
ಮಾಲೀಕರ ಪರ ಕಾನೂನು: ಹಿಂದೆ ನಿರಂತರ ಹೋರಾಟದ ಫಲವಾಗಿ ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಯಿತು. ಆದರೆ, ಇಂದು ಕಾರ್ಮಿಕರ ಹಿತಾಸಕ್ತಿಯನ್ನು ಕಾಯಬೇಕಾದ ಸರ್ಕಾರಗಳೇ ಶ್ರೀಮಂತರ ಪರವಾಗಿ ನಿಂತು ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರ ತಿದ್ದುಪಡಿ ಮಾಡುತ್ತಿವೆ.
ಕಾರ್ಮಿಕರಿಗೆ ಕೆಲಸದ ಭದ್ರತೆಯನ್ನು ನೀಡಬೇಕಾದ ಸರ್ಕಾರ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದು ಕಾರ್ಮಿಕರನ್ನು ಮಾಲೀಕರ ಗುಲಾಮರನ್ನಾಗಿಸಿದೆ. ಅಲ್ಲದೇ ದುಡಿದು ತಿನ್ನುವ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿ ಮಾಡದೆ ಮಾಲೀಕರನ್ನು ಕೊಬ್ಬಿಸುತ್ತಿದ್ದಾರೆ.
ಮತ್ತೂಂದೆಡೆ ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ಇಲ್ಲದೆ ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ಎಲ್ಲದ್ದಕ್ಕೂ ರೈತ-ಕಾರ್ಮಿಕರ ಸಂಘಟಿತ ಹೋರಾಟವೇ ಪರಿಹಾರ ಎಂದರು.
ಸ್ಥಳೀಯ ಸಮಿತಿ ಕಾರ್ಯದರ್ಶಿ ಜಗದೀಶ್ ಸೂರ್ಯ, ಸಿಐಟಿಯು ಜಿಲ್ಲಾ ಮುಖಂಡರಾದ ವಿ.ಬಸವರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಿಕ್ಕಣ್ಣೇಗೌಡ ಮಾತನಾಡಿದರು.
ಜಾಥಾದಲ್ಲಿ ಹುಣಸೂರು ಪ್ಲೆ„ವುಡ್ ಕಾರ್ಖಾನೆಯ ಕಾರ್ಮಿಕ ಮುಖಂಡರಾದ ಶ್ರೀಪತಿಗೌಡ, ಅಶೋಕ, ಜಗದೀಶ್, ರಾಜೇಂದ್ರ, ಲಕ್ಷ್ಮೀಕಾಂತ, ಮಾರಿಸ್ ಕಾರ್ಖಾನೆಯ ಕಾರ್ಮಿಕ ಮುಖಂಡರಾದ ಹಂಸ,
ಗ್ರಾಮ ಪಂಚಾಯ್ತಿ ನೌಕರ ಸಂಘದ ಮುಖಂಡರಾದ ದಿನೇಶ್, ತ್ಯಾಗರಾಜ್, ರಾಮಚಂದ್ರರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ಲೋಕೇಶ್, ಸಿದ್ದಯ್ಯ, ಸುಬ್ಬೇಗೌಡ, ಯುವ ಮುಖಂಡ ಮಹೇಶ್‌ಕುಮಾರ್, ಮನೋಜ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.