ತುರ್ತು ಕ್ರಮಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಸೂಚನೆ
ಬಂಟ್ವಾಳ: 21 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ
Team Udayavani, May 2, 2019, 6:16 AM IST
ಬಂಟ್ವಾಳ: ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದ್ದು, ಬಂಟ್ವಾಳ ತಾಲೂಕಿನ 58 ಗ್ರಾ.ಪಂ. ಪೈಕಿ 21 ಗ್ರಾಮಗಳಲ್ಲಿ ತೀವ್ರಗೊಳ್ಳುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಜಿ.ಪಂ. ಸಿ.ಇ.ಒ. ಸೆಲ್ವಮಣಿ ಸೂಚಿಸಿದ್ದಾಗಿ ತಾ.ಪಂ. ಇ.ಒ. ರಾಜಣ್ಣ ತಿಳಿಸಿದ್ದಾರೆ.
ನೀರಿನ ಪೂರೈಕೆಯೇ ಇಲ್ಲದ ಬಾಳೆಪುಣಿ, ನರಿಂಗಾನ ಗ್ರಾ.ಪಂ. ವ್ಯಾಪ್ತಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಕ್ರಮ ಕೈಗೊಂಡಿದೆ. ನೀರಿನ ಸಮಸ್ಯೆ ಸುಧಾರಣೆ ಸಾಧ್ಯವಿಲ್ಲದ ಗ್ರಾ.ಪಂ. ವ್ಯಾಪ್ತಿಗೆ ಕೊಳವೆ ಬಾವಿ ಕೊರೆಯಲು 25 ರೂ. ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಅದನ್ನು ಅಗತ್ಯ ಇರುವಲ್ಲಿಗೆ ತತ್‌ಕ್ಷಣದ ಬೇಡಿಕೆಯಂತೆ ಒದಗಿಸು ವುದಾಗಿ ಕಾ.ನಿ. ಅಧಿಕಾರಿ ರಾಜಣ್ಣ ತಿಳಿಸಿದ್ದಾರೆ.
ಹೆಚ್ಚುವರಿ ಬೇಡಿಕೆ ಯನ್ನು 14ನೇ ಹಣಕಾಸು ಯೋಜನೆಯಲ್ಲಿ ಅನು ದಾನ ಒದಗಿಸಲಾಗುತ್ತದೆ. ಪ್ರಸ್ತುತ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ತಾಲೂಕಿನ ಒಟ್ಟು 21 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗೆ ಪರಿಹಾರ ನೀಡಲು ಪಿ.ಡಿ.ಒ.ಗಳು ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಇ.ಒ. ರಾಜಣ್ಣ ತಿಳಿಸಿದ್ದಾರೆ.
ನೀರಿನ ಸಮಸ್ಯೆ ಇರುವ ಗಾ.ಪಂ.
ಅಮಾrಡಿ ಗ್ರಾ.ಪಂ. ವ್ಯಾಪ್ತಿಯ ಅಮಾrಡಿ, ಅಜೆಕಲ, ಬಡಗಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಮಚ್ಚಿಲ, ಕರೋ ಪಾಡಿ ಗ್ರಾ.ಪಂ. ವ್ಯಾಪ್ತಿಯ ಆನೆಕಲ್ಲು, ಶಂಕರಮೂಲೆ, ಗಡಿಜಾಲ, ಮದನಮಾಲಕ, ಕಾವಳ ಪಡೂರು ಗ್ರಾ.ಪಂ. ವ್ಯಾಪ್ತಿಯ ಮಧ್ವ, ಕಾಡಬೆಟ್ಟು, ಕೇಪು ಗ್ರಾ.ಪಂ. ವ್ಯಾಪ್ತಿಯ ಕುಕ್ಕಬೆಟ್ಟು, ಕೊಳ್ನಾಡು ಗ್ರಾ.ಪಂ.ನ ದೇವಸ್ಯ, ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಸಿದ್ದಕಟ್ಟೆ, ಕುದೊRàಳಿ, ಬದ್ಯಾರು, ಬಂಗ್ಲೆಗುಡ್ಡೆ., ಮೇರೆಮಜಲು ಗ್ರಾ.ಪಂ. ವ್ಯಾಪ್ತಿಯ ಕುಟ್ಟಿಕಲ, ಮೇರೆಮಜಲು, ನರಿಂಗಾನ ಗ್ರಾ.ಪಂ. ವ್ಯಾಪ್ತಿಯ ಪೊಟ್ಟೊಳಿಕೆ, ಆಳ್ವರಬೆಟ್ಟು, ಮೊಂಟೆಪದವು, ನಾವೂರ ಗ್ರಾ.ಪಂ. ವ್ಯಾಪ್ತಿಯ ನಾವೂರು, ಪಜೀರು ಗ್ರಾ.ಪಂ. ವ್ಯಾಪ್ತಿಯ ಬೇಂಗೋಡಿಪದವು, ಪುಣಚ ಗ್ರಾ.ಪಂ. ವ್ಯಾಪ್ತಿಯ ಅಜೇರು, ದೇವಿನಗರ, ಕೊಲ್ಲಪದವು, ದಂಡ್ಯತ್ತಡ್ಕ, ರಾಯಿ ಗ್ರಾ.ಪಂ. ವ್ಯಾಪ್ತಿಯ ಪಡ್ರಾಯಿ, ರಾಯಿ, ಸಜೀಪಮೂಡ ಗ್ರಾ.ಪಂ. ವ್ಯಾಪ್ತಿಯ ಕೋಮಾಲಿ, ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮಾಲ್ದಾಡು ಗಾಡಿಪಲ್ಕೆ, ಕೆರೆಬಳಿ, ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ನ್ಯಾಯದ ಕಟ್ಟೆ, ಅಲ್ಲಿಪಾದೆ, ವೀರಕಂಭ ಗ್ರಾ.ಪಂ. ವ್ಯಾಪ್ತಿಯ ಮಂಗಿಲಪದವು ಪಾಟ್ರಕೋಡಿ, ಮಣಿನಾಲ್ಕೂರು ಗ್ರಾ.ಪಂ. ವ್ಯಾಪ್ತಿಯ ಕೈಯಾಳ, ಅಮ್ಮುಂಜೆ ಗ್ರಾ.ಪಂ. ವ್ಯಾಪ್ತಿಯ ಬೆಂಜನಪದವು ಶಾಂತಿನಗರ, ಅರಳ ಗ್ರಾ.ಪಂ. ವ್ಯಾಪ್ತಿಯ ನವಗ್ರಾಮ, ಶುಂಠಿಹಿತ್ಲು, ಸಾಲೆತ್ತೂರು ಗ್ರಾ.ಪಂ. ವ್ಯಾಪ್ತಿಯ ಬೊಮ್ಮಾರಿನಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿದೆ. ಇಲ್ಲಿಗೆ ಹೆಚ್ಚುವರಿ ಕೊಳವೆ ಬಾವಿ /ಟ್ಯಾಂಕರ್ ನೀರು ಒದಗಿಸುವ ಬಗ್ಗೆ ಪಿಡಿಒಗಳಿಗೆ ಸೂಚಿಸಿದ್ದಾಗಿ ತಾ.ಪಂ. ಇ.ಒ. ರಾಜಣ್ಣ ತಿಳಿಸಿದ್ದಾರೆ.
ಅಮಾrಡಿ: ಧರಣಿಗೆ ಸಿದ್ಧತೆ
ಅಮಾrಡಿ ನಾಗರಿಕರು ತೀರಾ ಬಡವರು. ಒಂದು ಹೊತ್ತು ಊಟ ಮಾಡುವುದು ಕಷ್ಟದ ಪರಿಸ್ಥಿತಿಯಲ್ಲಿದ್ದು, ಪರಿಸರದ ನಿವಾಸಿಗಳು ವಿಧಿ ಇಲ್ಲದೆ ಟ್ಯಾಂಕರ್ ಮೂಲಕ ನೀರು ತರಿಸುತ್ತಿದ್ದಾರೆ. ಇನ್ನು ಕೇವಲ ಎರಡು ದಿನ ಕಾಯುತ್ತೇವೆ. ಆದರೂ ಪಂ. ವ್ಯವಸ್ಥೆ ಮಾಡದಿದ್ದರೆ ಅಮಾrಡಿ ಗ್ರಾಮ ಪಂಚಾಯತ್‌ನಲ್ಲಿ ಧರಣಿ ಕುಳಿತು ಕೊಳ್ಳುತ್ತೇವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಡಿಕೆ ಈಡೇರಿಕೆ
ಅಮಾrಡಿ ಗ್ರಾ.ಪಂ. ವ್ಯಾಪ್ತಿಯ ಕೆಂಪುಗುಡ್ಡೆಯಲ್ಲಿ ಕಳೆದ 22 ದಿನಗಳಿಂದ ಕುಡಿಯುವ ನೀರು ಪೂರೈಕೆ ಇಲ್ಲದೆ ಪಂ.ಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂಬ ಸ್ಥಳೀಯರ ದೂರನ್ನು ಗಮನಿಸಿದೆ. ಇಲ್ಲಿಗೆ ಒಂದು ಬಾರಿ ಟ್ಯಾಂಕರ್ ನೀರು ಸರಬರಾಜು ಮಾಡಿದೆ. ಪಿಡಿಒ ಅವರಿಂದ ಇನ್ನಷ್ಟು ಬೇಡಿಕೆ ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ.
– ರಾಜಣ್ಣ ತಾ.ಪಂ. ಇ.ಒ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.