ಕಾರ್ಮಿಕರ ಹಕ್ಕುಗಳಿಗೆ ಕಾನೂನು ಬಲ: ನ್ಯಾ.ಕೋರಡ್ಡಿ
Team Udayavani, May 2, 2019, 3:00 AM IST
ಚಿಕ್ಕಬಳ್ಳಾಪುರ: ದೇಶದಲ್ಲಿಂದು ಕಾರ್ಮಿಕರಿಗೆ ಮೊದಲಿನಂತೆ ಮಾಲೀಕರ ಶೋಷಣೆ, ದಬ್ಟಾಳಿಕೆ ಇಲ್ಲ. ಕನಿಷ್ಟ ವೇತನ ಕಾನೂನು ಜಾರಿಯಿಂದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವ ಕಾನೂನುಗಳ ಬಲ ಇದ್ದು, ಬಸವಣ್ಣನವರು ಹೇಳಿರುವಂತೆ ಕಾಯಕವೇ ಕೈಲಾಸ ಎಂಬುದನ್ನು ಅರ್ಥ ಮಾಡಿಕೊಂಡು ಕಾರ್ಮಿಕರು ದುಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ತಿಳಿಸಿದರು.
ನಗರದ ಹೊರ ವಲಯದ ಕೈಐಎಡಿಬಿ ವಲಯದ ಟೈಟಾನ್ ಕಂಪನಿ ಆವರಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಮತ್ತು ಟೈಟಾನ್ ಕಂಪನಿ ಲಿಮಿಟೆಡ್ ಐವೇರ್ ಡಿವಿಷನ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಶ್ರಮ ಅಪಾರ: ಕಾರ್ಮಿಕರ ನೆರವಿಲದೇ ದೇಶದಲ್ಲಿನ ಯಾವುದೇ ಕ್ಷೇತ್ರವು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕಾರ್ಮಿಕರು ಇಲ್ಲದ ದೇಶವನ್ನು ನಾವು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ದೇಶದ ಆರ್ಥಿಕ, ಸಾಮಾಜಿಕ ಕ್ಷೇತ್ರಗಳ ಪ್ರಗತಿಯಲ್ಲಿ ಕಾರ್ಮಿಕರ ಶ್ರಮ ಅಪಾರವಾಗಿದೆ ಎಂದರು.
ಕಾರ್ಯಕ್ರಮ ರೂಪಿಸಬೇಕಿದೆ: ಸಮಾಜದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಸಮರ್ಪಕವಾಗಿ ಕಾನೂನು ಅರಿವು ಇಲ್ಲದೇ ಅವರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಹಕ್ಕುಗಳು ಇನ್ನೂ ಸಿಗುತ್ತಿಲ್ಲ. ಕಾರ್ಮಿಕರ ಹಕ್ಕುಗಳ ಹಾಗೂ ಅವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಕಾರ್ಮಿಕ ಇಲಾಖೆ ಇನ್ನುಷ್ಟು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದರು.
ಸಮಾಜದಲ್ಲಿ ಕಾರ್ಮಿಕರ ಶಕ್ತಿ ಆಗಾದವಾದದ್ದು. ಮಾಲೀಕರು ಕೂಡ ಅವರ ದುಡಿಮಗೆ ತಕ್ಕ ಕೂಲಿ ಕೊಡಬೇಕಿದೆ. ಕಾರ್ಮಿಕರ ಬದುಕು ಚೆನ್ನಾಗಿದ್ದಾರೆ ಮಾತ್ರ ಮಾಲೀಕರ ಉದ್ದಾರ ಆಗುತ್ತಾರೆ. ಆದ್ದರಿಂದ ಕಾರ್ಮಿಕರಿಗೆ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೈಗಾರಿಕೆಗಳ ಮಾಲೀಕರು ವಂಚಿಸದೇ ಕೊಡಬೇಕಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ದೇವರಾಜ್ ಮಾತನಾಡಿ, ರೈತರಷ್ಟೇ ಕಾರ್ಮಿಕರು ಕೂಡ ದೇಶದ ಬೆನ್ನಲುಬಾಗಿದ್ದಾರೆ. ಆದರೆ ನಾವು ಎಲ್ಲಿ ಕೂಡ ಕಾರ್ಮಿಕರು ದೇಶದ ಬೆನ್ನಲುಬು ಎನ್ನುವುದಿಲ್ಲ. ದೇಶದ ಪ್ರಗತಿಗೆ ಭುನಾದಿಯಾಗಿರುವ ಕಾರ್ಮಿಕರನ್ನು ಸಮಾಜ ಕಡೆಗಣಿಸಬಾರದು ಎಂದರು.
ಅಭದ್ರತೆಯಲ್ಲಿ ಜೀವನ: ನಾಗರಿಕ ಸಮಾಜದ ಪ್ರಗತಿಗೆ ಕಾರಣವಾಗಿರುವ ಕಾರ್ಮಿಕರ ಬದುಕು ಕೂಡ ಹಸನಾಗಬೇಕಿದೆ. ಕಾರ್ಮಿಕರು ಯಾವುದೇ ಮೋಸ, ವಂಚನೆ, ಅನ್ಯಾಯ, ಅಕ್ರಮಗಳಲ್ಲಿ ತೊಡಗಿಸಿಕೊಳ್ಳದೇ ಇತರರಿಗೆ ಮಾದರಿಯಾಗಿ ಸ್ವಂತ ದುಡಿಮೆಯಲ್ಲಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಕಾರ್ಮಿಕರ ಶ್ರಮ, ದುಡಿಮೆ ಇತರರಿಗೆ ಮಾದರಿಯಾಬೇಕಿದೆ ಎಂದರು.
ಇಂದಿಗೂ ದೇಶದ ಕಾರ್ಮಿಕರ ಸ್ಥಿತಿ ಬದಲಾಗಿಲ್ಲ. ಲಕ್ಷಾಂತರ ಕಾರ್ಮಿಕ ಕುಟುಂಬಗಳ ಅಭದ್ರತೆಯಲ್ಲಿ ಜೀವನ ನಡೆಸುತ್ತಿವೆ. ಕಾನೂನು ಅರಿವು ಪಡೆದು ಸರ್ಕಾರಗಳು ರೂಪಿಸಿರುವ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.
ಜಿಲ್ಲಾ ಕಾರ್ಮಿಕ ಇಲಾಖೆ ನಿರೀಕ್ಷಕ ಎಚ್.ಎಂ.ಸೋಮಶೇಖರ್ ಮಾತನಾಡಿ, ಕಾರ್ಮಿಕರ ಕಾನೂನುಗಳು ಇರುವುದು ಯಾರ ಪರವಾಗಿಯು ಅಲ್ಲ. ಮಾಲೀಕರ ಹಾಗೂ ಕಾರ್ಮಿಕರ ನಡುವಿನ ಸಂಬಂಧವನ್ನು ಉತ್ತಮ ಪಡಿಸಲಿಕ್ಕೆ ಕಾನೂನುಗಳು ಇವೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುಮಾರು 10 ರಿಂದ 15 ಕೈಗಾರಿಕೆಗಳಿದ್ದು, 4 ರಿಂದ 5 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದರು.
ವಕೀಲರಾದ ಶ್ರೀನಾಥ್, ಟೈಟಾನ್ ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ರಾಜಶೇಖರ್ ಸೇರಿದಂತೆ ಟೈಟಾನ್ ಕಂಪನಿಯ ಕಾರ್ಮಿಕರು, ಜಿಲ್ಲಾ ನ್ಯಾಯಾಲಯದ ವಕೀಲರು, ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಮಿಕರನ್ನು ನಿರ್ಲಕ್ಷಿಸುವ ಯಾವ ಸಮಾಜ ಕೂಡ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಜಗತ್ತಿನ ಮುಂದುವರಿದ ದೇಶಗಳು ಎಲ್ಲಾ ರಂಗಗಳಲ್ಲಿ ಇಂದು ಪ್ರಗತಿ ಕಂಡಿದ್ದರೆ ಅದಕ್ಕೆ ಕಾರ್ಮಿಕರ ಶ್ರಮವೇ ಹೊರತು ಬೇರೆ ಏನು ಅಲ್ಲ. ಸಮಾಜವು ಕಾರ್ಮಿಕರನ್ನು ಗೌರಿವಿಸಬೇಕು. ಕಾರ್ಮಿಕರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರಗಳು, ಸಂಘ ಸಂಸ್ಥೆಗಳು ಜೊತೆಯಾಗಿ ಮಾಡಬೇಕು.
-ಎಸ್.ಎಚ್.ಕೋರಡ್ಡಿ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.