“ಧಾರ್ಮಿಕ ಚಟುವಟಿಕೆ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಪೂರಕ’
Team Udayavani, May 2, 2019, 6:22 AM IST
ಮಣಿಪಾಲ: ನಿರಂತರ ಧಾರ್ಮಿಕ ಚಟುವಟಿಕೆ ಮತ್ತು ಆಚರಣೆಗಳಿಂದ ಜನರು ಸಂಘಟಿತರಾಗಿ ಭಾವೈಕ್ಯತೆಯು ಪರಿಣಾಮಕಾರಿಯಾಗಿ ಬೆಳೆದು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಗೋವಾ ರಾಜ್ಯದ ಸಚಿವ ಹಾಗೂ ಗೋವಾ ಕುಡಾಳ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಉನ್ನತಿ ಮಂಡಲದ ಉಪಾಧ್ಯಕ್ಷ ದೀಪಕ್ ಪ್ರಭು ಪಾವುಸ್ಕರ್ ಹೇಳಿದರು.
ಸೋಮವಾರ ಮಣಿಪಾಲ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಹೆರ್ಗ ವಿದ್ವಾನ್ ರಾಘವೇಂದ್ರ ತಂತ್ರಿ ಅವರ ನೇತೃತ್ವದಲ್ಲಿ ನಡೆದ ಶ್ರೀ ದೇವರ ವರ್ಧಂತಿ ಉತ್ಸವ ಹಾಗೂ ರಂಗಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಸಚಿವರನ್ನು ಸಮ್ಮಾನಿಸಲಾಯಿತು. ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಠಾಕೂರ್, ಆಡಳಿತ ಮೊಕ್ತೇಸರ
ಶುಭಾಕರ ಸಾಮಂತ್, ದಿನೇಶ್ ಪ್ರಭು, ಶಾಶ್ವತ ಟ್ರಸ್ಟಿ , ದಿನೇಶ್ ಸಾಮಂತ್, ಪದಾಧಿಕಾರಿಗಳಾದ ಅಶೋಕ್ ಪ್ರಭು, ಸುರೇಶ ಶಾನಭೋಗ್, ಕೃಷ್ಣರಾಯ ಪಾಟೀಲ್, ನಿತ್ಯಾನಂದ ಪಾಟೀಲ್, ಚಂದ್ರಕಾಂತ್ ಪ್ರಭು, ಬಾಲಕೃಷ್ಣ ನಾಯಕ್, ರಾಮ ಪ್ರಭು, ರಾಮದಾಸ್ ಪ್ರಭು, ರಮಾನಂದ ಸಾಮಂತ್, ಅಶೋಕ್ ಸಾಮಂತ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ , ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ ನಾಯಕ್, ಯುವ ಮೋರ್ಚಾ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ದ.ಕ. ಬಿಜೆಪಿ ಕೋಶಾಧಿಕಾರಿ ಸಂಜಯ್ ಪ್ರಭು, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ರೋಷನ್ ಕುಮಾರ್ ಶೆಟ್ಟಿ , ಸ್ಥಳೀಯ ನಗರಸಭಾ ಸದಸ್ಯೆ ವಿಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ಕಾರ್ಯಕ್ರಮ ಸಂಯೋಜಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.