ಆಸಕ್ತಿ, ಪರಿಶ್ರಮ ಯಶಸ್ಸಿನ ಎರಡು ಗಾಲಿಗಳು

ಪಿಯುಸಿ ಬಳಿಕ ಮುಂದೇನು? ಉಜ್ವಲ ಭವಿಷ್ಯಕ್ಕೊಂದು ಮುನ್ನುಡಿ

Team Udayavani, May 2, 2019, 6:00 AM IST

Uvani-Mundenu30

ಉದಯವಾಣಿಯು ದ್ವಿತೀಯ ಪಿಯುಸಿ ಪಾಸಾಗಿ ಪದವಿಯ ಆಯ್ಕೆಯಲ್ಲಿರುವ ವಿದ್ಯಾರ್ಥಿಗಳಿಗೆ ಕೆರಿಯರ್‌ ಮಾರ್ಗದರ್ಶನ ನೀಡುವ ಸಲುವಾಗಿ ಬುಧವಾರ (ಮೇ 1) ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ “ಪಿಯುಸಿ ಬಳಿಕ ಮುಂದೇನು?’ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರೊಂದಿಗೆ ಎಸ್‌ಎಸ್‌ಎಲ್‌ಸಿ ಪಾಸಾಗಿ ಪ್ರಥಮ ಪಿಯುಸಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೂ ವಿಷಯಗಳು ಹಾಗೂ ಸಾಧ್ಯತೆಗಳ ಕುರಿತು ಕ್ಷೇತ್ರ ಪರಿಣತರು ಮಾರ್ಗದರ್ಶನ ನೀಡಿದರು. ಎಂಎಂಎನ್‌ಎಲ್‌ ಸಿಇಒ ವಿನೋದ್‌ ಕುಮಾರ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಮುನ್ನೂರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದು ವಿಶೇಷ. ತಮ್ಮ ಪ್ರಶ್ನೆ, ಗೊಂದಲಗಳನ್ನು ಪರಿಣಿತರೊಂದಿಗೆ ಕೇಳಿ ಖುಷಿಪಟ್ಟರು ವಿದ್ಯಾರ್ಥಿಗಳು. ಕ್ಷೇತ್ರ ಪರಿಣಿತರ ವಿಷಯವಾರು ಸ್ಥೂಲ ವರದಿ ಇಲ್ಲಿ ನೀಡಲಾಗಿದೆ.

ಕೋರ್ಸ್‌ನ ಆಯ್ಕೆಗಿಂತ ಆಸಕ್ತಿಯೇ ಮುಖ್ಯ !
ನಮ್ಮ ಕೆಲಸ ಬದಲಾಗುತ್ತಾ ಇರುತ್ತದೆ; ಆದರೆ ವೃತ್ತಿ ಹಾಗಲ್ಲ. ಇದಕ್ಕಾಗಿ ನಾವು ನಿರ್ದಿಷ್ಟವಾದ ಕೋರ್ಸ್‌ನ್ನು ಮೊದಲೇ ನಿರ್ಧರಿಸಬೇಕು. ಶಿಕ್ಷಕ, ಪ್ರೊಫೆಸರ್‌, ಡಾಕ್ಟರ್‌ ಸಹಿತ ಯಾವುದೇ ಕೋರ್ಸ್‌ಗೆ ಸೇರುವ ಮುನ್ನ ಅದರಲ್ಲಿ ನಿಮಗೆ ಆಸಕ್ತಿ ಇದೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳಿ. ಇನ್ನೊಬ್ಬರ ಹೇಳಿದ ಮಾತಿಗೆ ಮರುಳಾಗದೆ ನಮ್ಮ ಆಸಕ್ತಿಯ ಕ್ಷೇತ್ರದಲ್ಲೇ ಮುಂದುವರಿಯಬೇಕು.

ವೃತ್ತಿ ಅವಕಾಶಗಳು ಮತ್ತು ಆದಾಯ ನಾವು ಮಾಡಲು ಬಯಸಿರುವ ಕೋರ್ಸ್‌ಗಳಿಗೆ 5 ವರ್ಷದ ಅನಂತರ ಬೇಡಿಕೆ ಇರುತ್ತದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದು ನಿರ್ಧರಿಸಿ. ಆದರೆ ಪ್ರತಿಭಾವಂತ ಮತ್ತು ಪರಿಶ್ರಮಿಗೆ ಎಂದೂ ಅವಕಾಶಗಳಿವೆ. ನೀವು ಸೇರುವ ಕಂಪೆನಿಯ ಮೂಲವನ್ನು ಬೇರೆಯವರಿಂದ ತಿಳಿದುಕೊಳ್ಳಿ.ಕಷ್ಟ ಅನಿಸುವ ವಿಷಯಗಳ ಬಗ್ಗೆಯೂ ಸ್ವಲ್ಪ ಪರಿಶ್ರಮ ಹಾಕಿ ಕಲಿಯುವುದು ಸೂಕ್ತ.

ಕೋರ್ಸ್‌ನ ಅವಧಿ

ಕೋರ್ಸ್‌ ಎಂಬುದು ವಿಮಾನದಂತೆ. ಒಮ್ಮೆ ಹತ್ತಿದ ಅನಂತರ ಇಳಿಯುವಂತಿಲ್ಲ. ಮೂರು, ನಾಲ್ಕು, ಐದು ವರ್ಷಗಳ ಕೋರ್ಸ್‌ಗಳೂ ಇವೆ. ಪಿಯುಸಿ ಬಳಿಕ ಬಿಎಸ್ಸಿ ಅನಂತರ ಪಿಎಚ್‌.ಡಿ. ಮಾಡುವ ಆಸಕ್ತಿಯಿದ್ದರೆ ಹಾಗೆಯೇ ಮುಂದುವರಿಯ ಬಹುದು. ಸ್ಪಷ್ಟತೆ ಎಂಬುದು ನಾವು ಆರಿಸುವ ವಿಷಯದಲ್ಲಿರಬೇಕು.

ಎಂಜಿನಿಯರಿಂಗ್‌ ಸಹಿತ ಕೆಲವು ಕೋರ್ಸ್‌ಗಳಿಗೆ ಬೇರೆ ಊರುಗಳಿಗೆ ತೆರಳಬೇಕು. ಇದು ಸಾಧ್ಯವೇ ಎಂದು ಯೋಚಿಸಿ, ನಿರ್ಧರಿಸಿ. ಈ ಬಗ್ಗೆ ಇರುವ ಅನ್ಯ ಸಾಧ್ಯತೆಗಳ ಬಗ್ಗೆಯೂ ಮಾಹಿತಿ ಹೊಂದಿರಿ.

ಒಂದು ಕ್ಷೇತ್ರದ ಪದವಿ ಪಡೆದವರು ತಮಗಿರುವ ಇತರೆ ಸಾಧ್ಯತೆ ಮತ್ತು ಅವಕಾಶಗಳನ್ನೂ ಬಳಸಿಕೊಳ್ಳ ಬೇಕು. ಎಂಜಿನಿಯರ್‌ ಮಾಡಿದ ಕೂಡಲೇ ಸಾಫ್ಟ್ವೇರ್‌ ಕಂಪೆನಿಯಲ್ಲೇ ಕೆಲಸ ಮಾಡಬೇಕೆಂದೇನೂ ಇಲ್ಲ. ಬ್ಯಾಂಕ್‌ ಮ್ಯಾನೇಜರ್‌ ಕೂಡ ಆಗಬಹುದು. ಇದಕ್ಕೆಲ್ಲ ಆಸಕ್ತಿ ಅತೀ ಅಗತ್ಯ.

ಶ್ರಮ ಅಗತ್ಯ
ಯಾವುದೇ ಕೋರ್ಸ್‌ ತೆಗೆದುಕೊಂಡರೂ ಪರಿಶ್ರಮ ಅಗತ್ಯ. ಹೊಸವಿಚಾರ ಕಲಿಯುವ ಆಸಕ್ತಿಯೂ ಅವಶ್ಯ. ಪಿಯುಸಿ ಅನಂತರ ಸುಮಾರು 200ಕ್ಕೂ ಅಧಿಕ ಕೋರ್ಸ್‌ಗಳಿದ್ದು, ಅಪಾರ ಬೇಡಿಕೆಯಿದೆ.

ಎಂಜಿನಿಯರ್‌ ಆಗಲು ಸಿಇಟಿ, ಎಂಟ್ರೆನ್ಸ್‌ ಪರೀಕ್ಷೆ ಬರೆಯಬೇಕು. ಇದು ಶಿಕ್ಷಣ ಸಂಸ್ಥೆಗಳಿಗೆ ಅನುಗುಣವಾಗಿ ಭಿನ್ನವಾಗಿರುತ್ತದೆ. ವಾಸ್ತುಶಿಲ್ಪಿ ಆಗಬೇಕೆಂದಿದ್ದರೆ ನಾಟಾ (NATA) ಪರೀಕ್ಷೆ ಬರೆಯಬೇಕು. ಇದು 5 ವರ್ಷದ ಕೋರ್ಸ್‌. ಮೆಡಿಕಲ್‌ ಕ್ಷೇತ್ರದಲ್ಲಿ ಎಂಬಿಬಿಎಸ್‌, ಬಿಡಿಎಸ್‌, ಆಯುಷ್‌ ಕೋರ್ಸ್‌ಗಳಿವೆ. ಇವೆಲ್ಲದಕ್ಕೂ ನೀಟ್‌ ಪರೀಕ್ಷೆ ಕಡ್ಡಾಯ. ಪ್ಯಾರಾ ಮೆಡಿಕಲ್‌ನಲ್ಲೂ ಬ್ಯಾಚುಲರ್‌ ಆಫ್ ಫಾರ್ಮಸಿ, ನರ್ಸಿಂಗ್‌, ಲ್ಯಾಬ್‌ ಟೆಕ್ನೀಶಿಯನ್‌ ಕೋರ್ಸ್‌ಗಳಿಗೆ ಬೇಡಿಕೆ ಇದೆ. ಬಿಎಸ್‌ಸಿ ಆ್ಯನಿಮೇಶನ್‌, ಗ್ರಾಫಿಕ್ಸ್‌ ಕೋರ್ಸ್‌ಗಳಿಗೂ ಅವಕಾಶ ಗಳಿವೆ. ಬಿಎ-ಎಲ್‌ಎಲ್‌ಬಿ, ಬಿಎಸ್ಸಿ-ಎಲ್‌ಎಲ್‌ಬಿ, ಆ್ಯನಿಮೇಶನ್‌ ಕೋರ್ಸ್‌ಗಳ ಆಯ್ಕೆಯೂ ಉತ್ತಮ.

ಡಿಎಡ್‌ ಮಾಡುವುದರಿಂದಲೂ ಶಿಕ್ಷಣ ಸಂಸ್ಥೆ ಸಹಿತ ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುವ ಅವಕಾಶವಿದೆ. ನೌಕಾಪಡೆ, ವಾಯುಪಡೆ, ಸೇನಾಪಡೆಗಳಲ್ಲಿಯೂ ಉದ್ಯೋಗಾವಕಾಶ ಲಭಿಸಬಹುದು.

ಇತರ ಕೋರ್ಸ್‌ಗಳು
ಡಿಪ್ಲೋಮಾ ಕೋರ್ಸ್‌, ಫೈರ್‌ ಆ್ಯಂಡ್‌ ಸೇಫ್ಟಿ, ಸಮೂಹ ಮಾಧ್ಯಮ, ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌, ಸಂಶೋಧನೆಯಲ್ಲಿ ಆಸಕ್ತಿಯಿದ್ದರೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ನಲ್ಲಿ ಅವಕಾಶಗಳಿವೆ.
– ಡಾ| ವಾಸುದೇವ
ಪ್ರಾಧ್ಯಾಪಕರು, ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ.

ಪ್ರಶ್ನೆಗಳಿಗೆ ಉತ್ತರಗಳು
ಪ್ಯಾರಾ ಮೆಡಿಕಲ್‌ ಕೋರ್ಸ್‌ನಲ್ಲಿ ಸರಕಾರಿ ಸೀಟುಗಳು ಖಾಸಗಿ ಕಾಲೇಜಿನಲ್ಲೂ ಲಭ್ಯವಿರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಕಾಲೇಜುಗಳಿಂದಲೇ ಮಾಹಿತಿ ಪಡೆಯಿರಿ. ನೌಕಾಸೇನೆಗೆ ಸೇರಲು ಮೆರೈನ್‌ ಎಂಜಿನಿಯರಿಂಗ್‌ ಕಲಿಯಬೇಕು. ಎಂಜಿನಿಯರಿಂಗ್‌ ಮಾಡಿದರೂ ಆಗುತ್ತದೆ. ಪಿಯುಸಿ ಆದ ಅನಂತರ ನೇರ ವಾಗಿಯೂ ಈ ಕೋರ್ಸ್‌ ಆಯ್ಕೆ ಮಾಡಿಕೊಳ್ಳ ಬಹುದು. ವೈದ್ಯಕೀಯ ಪರೀಕ್ಷೆ ಬಳಿಕ ಆಯ್ಕೆ ಇರಲಿದೆ. ಪ್ರತಿ ವರ್ಷ ಆಯಾಯ ಜಿಲ್ಲೆಗಳಲ್ಲಿ ನೌಕಾಪಡೆ, ಸೇನಾಪಡೆಯ ಬಗ್ಗೆ ರ್ಯಾಲಿ ಆಯೋ ಜಿಸುತ್ತಾರೆ. ಕೃಷಿ ಅಧಿಕಾರಿಯಾಗಲು ಕೃಷಿ ವಿಷಯಗಳಿಗೆ ಸಂಬಂಧಪಟ್ಟ ಪರಿಣತರಿಂದ ಸಲಹೆ ಹೆಚ್ಚಿನ ಸಲಹೆ ಪಡೆದುಕೊಳ್ಳಿ. ಅಗ್ರಿ ಬಿಎಸ್ಸಿ ಮಾಡಿದರೆ ಒಳ್ಳೆಯದು.
– ಆ್ಯನಿಮೇಷನ್‌ ಕೋರ್ಸ್‌ಗೆ ಮಾಧ್ಯಮ ಕ್ಷೇತ್ರ, ಫಿಲ್ಮ್ ಮೇಕಿಂಗ್‌ನಲ್ಲಿ ಸಾಕಷ್ಟು ಅವಕಾಶಗಳು ಸೃಷಿಯಾಗುತ್ತಿವೆ.
– ಇಸ್ರೋಗೆ ಸೇರಲು ಆಸ್ಟ್ರೋ ಫಿಸಿಕ್ಸ್‌ ಕೋರ್ಸ್‌ ಮಾಡಿದರೆ ಸೂಕ್ತ.

ವಾಣಿಜ್ಯ ಕ್ಷೇತ್ರ
ತುಸು ಕಷ್ಟವೆಂದು ಬಿಡಬೇಡಿ, ಛಲದಿಂದ ಸಾಧಿಸಿ
ಯಾವ ವಿಷಯ ಸುಲಭ ಎಂದು ವಿದ್ಯಾರ್ಥಿಗಳು ಕೇಳುವುದುಂಟು. ಮುಂದೆ ನೀವಂದುಕೊಂಡಷ್ಟು ವೇತನ ಸಿಗದೇ ಹೋಗಲು ಇದೂ ಒಂದು ಕಾರಣವಾಗಬಹುದು. ಶಿಕ್ಷಣ ಒಂದು ಬಂಡವಾಳ. ಯಶಸ್ವಿಯಾಗುವುದು ಹೇಗೆ ಎಂಬ ಬಗ್ಗೆ ಮೊದಲೇ ನಿರ್ಧರಿಸಿ ಆಯ್ಕೆಯನ್ನು ಮಾಡಬೇಕು. ಸುಲಭ ಇರುವ ವಿಷಯಗಳತ್ತ ವಾಲಿದರೆ ವೃತ್ತಿ ಜೀವನಕ್ಕೂ ತೊಂದರೆಯಾಗಬಹುದು. ತುಸು ಕಷ್ಟವೆನಿಸಿದರೂ ಅದನ್ನು ಬುದ್ದಿವಂತಿಕೆಯಿಂದ ನಿಭಾಯಿಸುವುದನ್ನು ಕಲಿಯಬೇಕು.

ಸಾಧ್ಯತೆಗಳನ್ನು ತಿಳಿದುಕೊಳ್ಳಿ
ದೇಶದಲ್ಲಿ ಇಂದು ಹಲವು ಮಂದಿ ಚಾರ್ಟೆಡ್‌ ಅಕೌಂಟೆಂಟ್‌ಗಳಿದ್ದಾರೆ. ಎಲ್ಲ ವಿಷಯಗಳ ಬಗ್ಗೆ ಇವರು ಪರಿಣತಿ ಹೊಂದಿರಬೇಕು. ವಾಣಿಜ್ಯ ವಿಷಯದಲ್ಲಿ ಬಹುತೇಕ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುವುದುಂಟು. ಅದರ ಅಗತ್ಯ ವಿಲ್ಲ. ಮೊದಲು ಆಯ್ಕೆಗೆ ಇರುವ ಸಾಧ್ಯೆತೆಗಳ ಬಗ್ಗೆ ತಿಳಿದುಕೊಳ್ಳಿ. ಆಮೇಲೆ ನಿರ್ಧರಿಸಿ. ಹೆಚ್ಚಿನವರು ಪಿಯುಸಿ ಬಳಿಕ ಬಿಕಾಂ ಆಯ್ಕೆ ಮಾಡುತ್ತಾರೆ. ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬಿಬಿಎಂ ನಲ್ಲೂ ಹಲವು ಅವಕಾಶಗಳಿವೆ.ಕಾಫೋರೇಟ್‌ ಉದ್ಯಮದಲ್ಲೂ ಐಸಿಡಬ್ಲ್ಯುಎಗೆ ಸಾಕಷ್ಟು ಅವಕಾಶಗಳಿವೆ. ಎಂಬಿಎ, ಸಿಎ ಕೋರ್ಸ್‌ಗಳನ್ನೂ ಮಾಡಬಹುದು. ಎಂಬಿಎ ವಿಷಯದಲ್ಲಿ ಪರಿಣತಿ ಹೊಂದಿದ್ದರೆ ಮಾನವ ಸಂಪನ್ಮೂಲ ವಿಭಾಗ, ಐಟಿ, ಆರೋಗ್ಯ ಕ್ಷೇತ್ರ ಗಳಲ್ಲೂ ಉದ್ಯೋಗ ಲಭ್ಯ. ಹಲವು ವಿವಿಗಳಲ್ಲಿ ಇದಕ್ಕೆಂದೇ ವಿವಿಧ ಕೋರ್ಸ್‌ಗಳಿವೆ ಎಂದರು.

ಗುಂಪು ಚರ್ಚೆ ಅಗತ್ಯ
ಬಿಬಿಎಂ, ಎಂಬಿಎ ಗೆ ಹೋಗುವವರು ಮುಕ್ತ ವಾಗಿ ಚರ್ಚಿಸುವ ಹವ್ಯಾಸ ಬೆಳೆಸಿಕೊಳ್ಳಿ. ಗುಂಪು ಚರ್ಚೆಯಂತಹ ಚಟುವಟಿಕೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು. ಇದು ನಿಮ್ಮಲ್ಲಿ ಕೌಶಲದ ಜತೆಗೆ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಕಾರ್ಯಯೋಜನೆ, ಇಂಗ್ಲಿಷ್‌ ವಿಷಯದಲ್ಲಿ ಉತ್ತಮ ಮಾತುಗಾರಿಕೆ, ಪರಿಣತಿ ಹೊಂದುವುದೂ ಅಗತ್ಯ.

ಕೌಶಲ, ಸಂವಹನ ಗುಣಗಳಿಂದಲೇ ನಾಯಕತ್ವಬೆಳೆಯುತ್ತದೆ. ವಿದ್ಯಾರ್ಥಿಗಳು ಇದನ್ನು ಅಂತರ್ಗತ ಮಾಡಿಕೊಂಡು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು.

ಜಿಎಸ್‌ಟಿಯಿಂದ ಬೇಡಿಕೆ
ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದ ಅನಂತರ ಕರಾವಳಿ ಸೇರಿದಂತೆ ಚಾರ್ಟೆಡ್‌ ಅಕೌಂಟೆಂಟ್‌ಗಳ ಬೇಡಿಕೆ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳು ಸಿಗಲಿವೆ. ಅಟೋನೊಮಸ್‌ ಸಂಸ್ಥೆಗಳಲ್ಲೂ ಇವರಿಗೆ ಅಧಿಕ ಬೇಡಿಕೆಯಿದೆ. ಸಿಎಗೆ ಎಂಟ್ರೆನ್ಸ್‌ ಎಕ್ಸಾಮ್‌ಗಳನ್ನು ಬರೆಯಬೇಕು.

ವೇತನ ಹೇಗೆ?
ಎಂಬಿಎ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಹಲವು ಕಂಪೆನಿಗಳಲ್ಲಿ ಕನಿಷ್ಠ 8 ಸಾವಿರದಿಂದ ಆರಂಭವಾಗಿ ಗರಿಷ್ಠ 1 ಲ.ರೂ.ವರೆಗೂ ವೇತನ ಇರುತ್ತದೆ. ವಿದ್ಯಾರ್ಥಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಿರ್ಧರಿಸಬೇಕು. ಆಸಕ್ತಿಯ ಜತೆಗೆ ಪರಿಶ್ರಮ ಬೆರೆತರೆ ಯಶಸ್ಸು ಸಾಧ್ಯ.
– ಎ. ಮುರಳೀಧರ ಕಿಣಿ
ಚಾರ್ಟೆಡ್‌ ಅಕೌಂಟೆಂಟ್‌

ಕಲಾ ವಿಷಯ
ಕಲಾ ವಿದ್ಯಾರ್ಥಿಗಳಿಗೂ ಅವಕಾಶಗಳಿಗೆ ಕೊರತೆ ಇಲ್ಲ
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮ್ಮ 8, 9 ಹಾಗೂ 10ನೆ ತರಗತಿಯ ಪಠ್ಯಪುಸ್ತಕಗಳನ್ನು ಜತನವಾಗಿ ತೆಗೆದಿಟ್ಟುಕೊಳ್ಳಬೇಕು.

ಲೋಕಸೇವಾ ಆಯೋಗ ನಡೆಸುವ ಕೆಎಎಸ್‌, ಕೆಪಿಎಸ್‌, ಐಎಎಸ್‌, ಐಪಿಎಸ್‌, ಐಎಫ್ಎಸ್‌, ಕಂದಾಯ, ಪೊಲೀಸ್‌, ಆಡಳಿತ ಸೇವಾ ಇಲಾಖೆಗಳಿಗೂ ಸಾಮಾನ್ಯ ಜ್ಞಾನ ವಿಷಯ ಬಹುಪಯೋಗಿ.ಕಲಾ ವಿಷಯ ಆಯ್ಕೆ ಮಾಡಿಕೊಳ್ಳುವವರು ದೈನಂದಿನ ಆಗುಹೋಗುಗಳ ಜತೆಗೆ ಇತರ ಕ್ಷೇತ್ರಗಳ ಬಗ್ಗೆಯೂ ಪರಿಪೂರ್ಣ ಜ್ಞಾನ ಹೊಂದಿರಬೇಕು. ಹಾಗಾಗಿ ಕಲಾ ವಿದ್ಯಾರ್ಥಿ ಗಳಿಗೂ ಅವಕಾಶಗಳಿಗೆ ಕೊರತೆ ಇಲ್ಲ.

ಕಂಪ್ಯೂಟರ್‌ ಜ್ಞಾನ
ಕಲಾ ವಿಷಯ ಪಡೆದವರು ಬ್ಯಾಂಕಿಂಗ್‌ ಪರೀಕ್ಷೆಗಳನ್ನೂ ಬರೆಯಬಹುದು. ಸಾಮಾನ್ಯಜ್ಞಾನ, ಕಂಪ್ಯೂಟರ್‌ ಸೈನ್ಸ್‌ಗಳ ಬಗ್ಗೆ ತಿಳಿದು ಕೊಳ್ಳಿ. ಇಂದು ಬಹುತೇಕ ಬ್ಯಾಂಕಿಂಗ್‌ ಪರೀಕ್ಷೆಗಳು ಆನ್‌ಲೈನ್‌ ಮುಖಾಂತರ ನಡೆಯುತ್ತಿದ್ದು ಬಳಸಿಕೊಳ್ಳಿ.

ಸಮಯ ವಿನಿಯೋಗಿಸಿ
ತಮಗಿರುವ ಅವಕಾಶಗಳನ್ನು ದುಡಿಸಿ ಕೊಳ್ಳುವುದು ಸೂಕ್ತ. ಮುಖ್ಯವಾಗಿ ಸಮಯ. ಇದನ್ನು ಅಚ್ಚುಕಟ್ಟಾಗಿ ನಿರ್ವ ಹಣೆ ಮಾಡಿ ಕಾರ್ಯಯೋಜನೆಗಳ ಬಗ್ಗೆ ರೂಪುರೇಷೆ ಸಿದ್ದಪಡಿಸಿದಷ್ಟೂ ಯಶಸ್ಸು ಖಚಿತ. ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಯಲ್ಲೂ ತೊಡಗಿಕೊಳ್ಳಿ.

ಡಿಗ್ರಿ ಎನ್ನುವಾಗ ಬಿಎ, ಬಿಕಾಂ, ಬಿಎಸ್ಸಿ, ಡಿಸೈನಿಂಗ್‌, ಇಂಟಿರಿಯರ್‌ ಡಿಸೈನಿಂಗ್‌ ನೆನಪಾಗುತ್ತದೆ. ಬಿ.ಎ. ವಿದ್ಯಾರ್ಥಿಗಳೂ ಕಂಪ್ಯೂಟರ್‌ ಸೈನ್ಸ್‌ ತೆಗೆದುಕೊಳ್ಳಬಹುದು. ಬಿಕಾಂ ವಿದ್ಯಾರ್ಥಿ ಇತಿಹಾಸ, ಸಮಾಜಶಾಸ್ತ್ರ ಆಯ್ಕೆ ಮಾಡಿಕೊಳ್ಳಬಹುದು. ಬಿಎ ಮಾಡಿ ದರೆ ಪ್ರಯೋಜನವಿಲ್ಲ ಎಂಬ ಕೀಳರಿಮೆ ಬಿಡಿ. ನಾವು ಪಡುವ ಶ್ರಮದ ಮೇಲೆ ಅವಕಾಶ ನಿಂತಿದೆ.

ಕನ್ನಡದಲ್ಲೂ ಬರೆಯಬಹುದು
ಕೆೆಎಎಸ್‌ ಪರೀಕ್ಷೆಯಲ್ಲಿ ಪೇಪರ್‌ 1 ಜನರಲ್‌ ಸ್ಟಡೀಸ್‌ ಪೇಪರ್‌ 2 ಕೂಡ ಜನರಲ್‌ ಸ್ಟಡೀಸ್‌ ಇರುತ್ತದೆ. ಒಟ್ಟು 400 ಅಂಕಗಳ ಪರೀಕ್ಷೆ. ಪೇಪರ್‌ 1 ನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿಷಯಕ್ಕೆ ಸಂಬಂಧಿಸಿದ 60 ಪ್ರಶ್ನೆಗಳಿರುತ್ತವೆ. ಇಡೀ ವರ್ಷದ ಘಟನೆಯ ಸಂಕ್ಷಿಪ್ತ ಮಾಹಿತಿ ಬಗ್ಗೆ ಪುಸ್ತಕಗಳು ಲಭ್ಯವಿವೆ. ಪತ್ರಿಕೆಗಳ ಅಧ್ಯಯನವೂ ನಮಗೆ ಸಹಕಾರಿಯಾಗ ಬಲ್ಲದು. ಐಎಎಸ್‌ ಇಂಗ್ಲಿಷ್‌ ಕಷ್ಟ ಅಂತಾದರೆ ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯಬಹುದು. ಸಂದರ್ಶನವನ್ನೂ ಕೂಡ ಕನ್ನಡದಲ್ಲಿ ಎದುರಿಸುವ ಅವಕಾಶ ಇದೆ.
– ಪ್ರತಾಪ್‌ ಚಂದ್ರ ಶೆಟ್ಟಿ ಅಳ್ನಾಡು
ವಾಣಿಜ್ಯ ಇಲಾಖೆ ಪರಿವೀಕ್ಷಕ

ಆರಿಸಿಕೊಂಡ ಕ್ಷೇತ್ರದ ಬಗ್ಗೆ ತುಡಿತವಿರಲಿ
ಆಸಕ್ತಿ ಹಾಗೂ ಗುರಿಯ ಆಧಾರದ ಮೇಲೆ ವೃತ್ತಿ ಶಿಕ್ಷಣ ಆರಂಭಿಸಿದರೆ ಯಶಸ್ಸು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ದಿನೇದಿನೆ ಹೊಸ ಸಾಧ್ಯತೆ ಗಳು ತೆರೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಆಯ್ಕೆಗಳು, ಅವಕಾಶಗಳು ಹೇರಳವಾಗಿವೆ. ಮುಂದಿನ ದಾರಿ ಬಗ್ಗೆY ಗೊಂದಲ ಸಹಜ. ಸಹಪಾಠಿ ಗಳು ಸೇರುವ ಕೋರ್ಸ್‌ ಸೇರುವುದೋ ಅಥವಾ ಮನೆ ಹತ್ತಿರದ ಕಾಲೇಜಿಗೆ ಸೇರುವುದೋ? ಎಂಬ ಗೊಂದಲ ವಿದ್ಯಾರ್ಥಿಗಳದ್ದಾದರೆ, ಮಕ್ಕಳಿಗೆ ಯಾವ ಶಿಕ್ಷಣ ಕೊಡಿಸಬೇಕು? ಎನ್ನುವುದು ಪಾಲಕರ ಪ್ರಶ್ನೆ.

ಆಸಕ್ತಿ ಅಗತ್ಯ
ನೀವು ಆರಿಸಿಕೊಂಡ ಕ್ಷೇತ್ರದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂಬ ತುಡಿತ ಇರಬೇಕು. ಜತೆಗೆ ಆ ಕ್ಷೇತ್ರದಲ್ಲಿ ಸಂಭವನೀಯ ಕೌಶಲಗಳನ್ನು ಕರಗತ ಮಾಡಿಕೊಳ್ಳುವ ಆಸಕ್ತಿ ಇರಬೇಕು. ಸಹಜ ಯೋಗ್ಯತೆ, ತುಡಿತ ಇವೆಲ್ಲವುಗಳ ಒಟ್ಟು ಮೊತ್ತವೇ ವೃತ್ತಿ ಜೀವನದ ಯಶಸ್ಸು.

ವೃತ್ತಿಯಲ್ಲಿರುವವರನ್ನೇ ಸಂಪರ್ಕಿಸಿ
ನೀವು ಆಯ್ಕೆ ಮಾಡಿಕೊಳ್ಳುವ ವಿಷಯ ಅಥವಾ ಕೋರ್ಸ್‌ ಕುರಿತು ತಂದೆ, ತಾಯಿ ಹಾಗೂ ಇತರರೊಂದಿಗೆ ಚರ್ಚೆ ಮಾಡಿ. ಜತೆಗೆ ಆ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರ ಮಾರ್ಗದರ್ಶನ ಪಡೆಯಿರಿ. ನೀವು ಸಿವಿಲ್‌ ಇಂಜಿನಿಯರಾಗಬೇಕೆಂದು ನಿರ್ಧರಿಸಿದ್ದಲ್ಲಿ ನೀವು ಆ ಕ್ಷೇತ್ರದವರನ್ನೇ ಸಂಪರ್ಕಿಸಿ ಮಾಹಿತಿ ಪಡೆದುಕೊಂಡರೆ ಅನುಕೂಲ.

ಗುಂಪಿನಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಿಮ್ಮನ್ನು ಹೊಂದಿಸಿಕೊಳ್ಳಬೇಡಿ. ಎಲ್ಲರೂ ಆರಿಸಿ ಕೊಳ್ಳುವ ಕೋರ್ಸ್‌ಗಳನ್ನು ಆಯ್ಕೆ ಮಾಡದೇ ಸ್ವತಂತ್ರ ನಿರ್ಧಾರಕ್ಕೆ ಬನ್ನಿ. ಯಾವ ಕೋರ್ಸ್‌ ಆಯ್ಕೆ ಮಾಡಿಕೊಂಡಿದ್ದೀರಿ ಅನ್ನುವುದಕ್ಕಿಂತಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ ಎನ್ನುವುದು ಮುಖ್ಯ.

ಕೆಲಸಗಳ ಆಯ್ಕೆ ವಿಷಯದಲ್ಲಿ ಪಾಲಕರು ಸಂಬಂಧಿಕರ ತೋರಿಸಿದ ಕೋರ್ಸ್‌ಗಳಿಗೆ ಮಕ್ಕಳನ್ನು ಕಟ್ಟಿಹಾಕುವ ಮೊದಲು, ನಿಮ್ಮ ಆಯ್ಕೆಯನ್ನು ಸ್ಪಷ್ಟವಾಗಿ ತಿಳಿಸಿ.
– ಡಾ| ನಾಗರಾಜ್‌ ಕಾಮತ್‌,
ಸಹಾಯಕ ಪ್ರಾಧ್ಯಾಪಕ, ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ.

ನಿಮಗೆ ತಿಳಿದಿರಲಿ
– ಕೇವಲ ಎಂಜಿನಿಯರ್‌ ಹಾಗೂ ವೈದ್ಯ ವೃತ್ತಿ ಮಾತ್ರ ಒಳ್ಳೆ ಕೆಲಸ-ಸಂಬಳ ಪಡೆಯುತ್ತಾರೆ ಎಂಬುದು ಸುಳ್ಳು. ಇತರರಿಗೂ ಉತ್ತಮ ವೇತನ, ಗೌರವ, ಸ್ಥಾನಮಾನ ಎಲ್ಲವೂ ಸಿಗುತ್ತದೆ.
– ಕೇವಲ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡ ವರಿಗೆ ಮಾತ್ರ ವಾಣಿಜ್ಯ ಹಾಗೂ ಕಲೆ ವಿಭಾಗಗಳಿಗಿಂತ ಹೆಚ್ಚಿನ ಅವಕಾಶವಿದೆಯೆಂಬುದು ಸತ್ಯವಲ್ಲ.

ತಪ್ಪುಗಳನ್ನು ಮಾಡಬೇಡಿ
– ಇನ್ನೊಬ್ಬರ ಆಯ್ಕೆ ನಿಮ್ಮ ಶಿಕ್ಷಣದ ಆಯ್ಕೆ ಆಗದಿರಲಿ.
– ಪ್ರಸ್ತುತ ಔದ್ಯೋಗಿಕ ಅವಕಾಶವನ್ನು ಗಮನಿಸಿ ಆಮಿಷಕ್ಕೆ ಒಳಗಾಗಬೇಡಿ.
– ನಿಮಗೆ ಗುರಿ ಸ್ಪಷ್ಟವಾಗದ ಹೊರತು ಯಾವುದನ್ನು ಕೊನೆಗೊಳಿಸಬೇಡಿ.

ಉಪಯುಕ್ತ ಕಾರ್ಯಕ್ರಮ
ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಉದ್ಯೋಗಾವಕಾಶದ ಮಾಹಿತಿ ನೀಡುವ ಉದಯವಾಣಿಯ ಈ ಕಾರ್ಯಕ್ರಮ ಅತ್ಯುತ್ತಮ. ಭವಿಷ್ಯದ‌ ಶಿಕ್ಷಣದ ಬಗ್ಗೆ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಸಿಕ್ಕಿದೆ. ಇಂಥ ಕಾರ್ಯಕ್ರಮ ಹೆಚ್ಚಲಿ.
– ನಾಗೇಶ್‌, ಹೆತ್ತವರು,ಪಡುಬಿದ್ರಿ,

ತಪ್ಪಿಸಿಕೊಳ್ಳದಂಥ ಕಾರ್ಯಕ್ರಮ
ದ್ವಿತೀಯ ಪಿಯುಸಿ ಮುಗಿದಿದೆ.ಮುಂದೆ ಏನು ಮಾಡುವುದು ಎಂದು ಕೆಲವರು ಪ್ರಶ್ನಿಸುತ್ತಾರೆ.ಈ ಕಾರ್ಯಕ್ರಮದಿಂದ ನಮಗಿರುವ ಅವಕಾಶಗಳ ಬಗ್ಗೆ ಉಪಯುಕ್ತ ಮಾಹಿತಿ ಸಿಕ್ಕಿತು,ತಪ್ಪಿಸಿಕೊಳ್ಳದಂಥ ಇಂತಹ ಕಾರ್ಯಕ್ರಮ ನಮಗೆ ಸಹಕಾರಿ.
ಯಶಸ್‌, ವಿದ್ಯಾರ್ಥಿ,
ಎಂಜಿಎಂ ಪ.ಪೂ.ಕಾಲೇಜು,ಉಡುಪಿ.

ಗೊಂದಲಕ್ಕೆ ಪರಿಹಾರ
ಎಲ್ಲ ಕ್ಷೇತ್ರಗಳಲ್ಲಿರುವ ವಿದ್ಯಾಭ್ಯಾಸ, ಸಾಧ್ಯತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಯಿತು. ಶಿಕ್ಷಣ, ಉದ್ಯೋಗ, ವೇತನ ಸಹಿತ ಇತರ ವಿಚಾರಗಳ ಬಗ್ಗೆಯೂ ಉಪಯುಕ್ತ ಮಾಹಿತಿ ಸಿಕ್ಕಿತು.
-ಸಂಜಯ್‌,ವಿದ್ಯಾರ್ಥಿ,ಎಂಜಿಎಂ ಪ.ಪೂ.ಕಾಲೇಜು ವಿದ್ಯಾರ್ಥಿ,ಉಡುಪಿ

ಸ್ಪಷ್ಟ ನಿಲುವಿಗೆ ಸಹಕಾರಿ
ವಿಶೇಷ ಮಾಹಿತಿ ಶಿಬಿರದ ಮೂಲಕ ಪಿಯುಸಿ ನಂತರ ಮುಂದೆ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಸ್ಪಷ್ಟ ನಿಲುವು ದೊರಕಿದೆ. ಹಲವು ಗೊಂದಲಗಳಿಂದ ಬಂದಿದ್ದೆ, ಅದು ಬಗೆಹರಿದಿದೆ.
– ತೃಪ್ತಿ ಡಿ.ನಾಯಕ್‌,ವಿದ್ಯಾರ್ಥಿನಿ,ವಳಕಾಡು ಸ. ಪ್ರೌಢಶಾಲೆ, ಉಡುಪಿ.

ಮಕ್ಕಳನ್ನು ಕರೆತರಬೇಕು
ಇಂಥ ಕಾರ್ಯಕ್ರಮಗಳನ್ನು ಉದಯವಾಣಿಯು ಪ್ರತಿ ವರ್ಷ ಹಮ್ಮಿಕೊಂಡರೆ ಪ್ರಯೋಜನವಾಗಲಿದೆ. ಜತೆಗೆ ವಿದ್ಯಾರ್ಥಿಗಳ ಗೊಂದಲ ಬಗೆಹರಿಸುವಂಥ ಈ ಕಾರ್ಯಕ್ರಮಗಳಿಗೆ ಪೋಷಕರೂ ತಮ್ಮ ಮಕ್ಕಳನ್ನು ಕರೆತಂದರೆ ಹೆಚ್ಚು ಅನುಕೂಲ.
-ಹೇಮಲತಾ,ಪೋಷಕರು,ಉಚ್ಚಿಲ

ಪ್ರತಿಯೊಬ್ಬರೂ ಬಳಸಿಕೊಳ್ಳಿ
ಎಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು ? ಉದಯವಾಣಿ ಕಾರ್ಯಕ್ರಮದಿಂದ ಪೋಷಕರಾದ ನಮಗೂ ಸಾಕಷ್ಟು ಮಾಹಿತಿ ಸಿಕ್ಕಿದೆ. ಇದೊಂದು ಬಹುಪಯೋಗಿ ಅವಕಾಶ, ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು.
-ಬಿ.ಎ.ಆಚಾರ್ಯ,ಮಣಿಪಾಲ

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.