ಸಾಮೂಹಿಕ ವಿವಾಹ ಜಾಗೃತ: ಡಾ| ಹೆಗ್ಗಡೆ

ಧರ್ಮಸ್ಥಳ: 48ನೇ ಸಾಮೂಹಿಕ ಉಚಿತ ವಿವಾಹ ಸಮಾರಂಭ

Team Udayavani, May 2, 2019, 6:00 AM IST

MARRIAGE1

ಬೆಳ್ತಂಗಡಿ: ಡಾ| ವೀರೇಂದ್ರ ಹೆಗ್ಗಡೆಯವರು ಮತ್ತು ಗಣ್ಯರು ಮಾಂಗಲ್ಯವನ್ನು ವಧೂವರರಿಗೆ ವಿತರಿಸಿದರು.

ಬೆಳ್ತಂಗಡಿ: ಧರ್ಮಸ್ಥಳದ ಸಾಮೂಹಿಕ ವಿವಾಹದಿಂದ ಪ್ರೇರಣೆ ಗೊಂಡು ನಾಡಿನಾದ್ಯಂತ ಸಾಮೂಹಿಕ ವಿವಾಹಗಳನ್ನು ಸಂಯೋಜಿಸುತ್ತಿರು ವುದು ಶ್ಲಾಘನೀಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 48ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಶುಭಾಶೀರ್ವಾದ ನೀಡಿದರು. ವಿವಾಹದಲ್ಲಿ 102 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಸಮಾಜ ಬಲಿಷ್ಠವಾಗಿದ್ದು, ನಮ್ಮ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರು ಉಳಿತಾಯ ಯೋಜನೆ ಮಾಡಿ ತಮ್ಮ ಆವಶ್ಯಕತೆ ಪೂರೈಸುವುದರ ಜತೆಗೆ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ವಿವಾಹ ಜೋಡಿಗಳ ಸಂಖ್ಯೆ ಕಡಿಮೆಯಾಗು ವುದರ ಮೂಲಕ ತಿಳಿಯುತ್ತಿದೆ. ಇದು ಹರ್ಷದಾಯಕ. 47 ವರ್ಷ ಗಳಲ್ಲಿ ಇಲ್ಲಿ ವಿವಾಹವಾದ ದಂಪತಿಗಳು ಅನ್ಯೋನ್ಯ ಜೀವನ ನಡೆಸುತ್ತಿದ್ದಾರೆ. ಸಹಸ್ರಾರು ಜನರ ಆಶೀರ್ವಾದ, ಸಮಾಜದ ಗುರುಹಿರಿಯರಿಂದ ಸಿಗುವ ಅನುಗ್ರಹದಿಂದ ದಾಂಪತ್ಯ ಜೀವನ ಗಟ್ಟಿಯಾಗುತ್ತದೆ ಎಂದು ಡಾ| ಹೆಗ್ಗಡೆ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಧರ್ಮದ ಇಚ್ಛಾನುಸಾರ ಮತ್ತು ಧಾರ್ಮಿಕ ನೆಲೆಯಲ್ಲಿ ದುಂದು ವೆಚ್ಚವಿಲ್ಲದೆ ಸಮಾಜದ ಮೌಲ್ಯವನ್ನು ಕಾಪಾಡುವ ಧರ್ಮಸ್ಥಳ ಕ್ಷೇತ್ರದ ಸಾಮೂಹಿಕ ಉಚಿತ ವಿವಾಹ ದೇಶಕ್ಕೆ ಮಾದರಿ ಎಂದರು.

ಧರ್ಮಸ್ಥಳದಲ್ಲಿ ಗತ ವೈಭವ ಕಾಣುತ್ತಿದ್ದೇವೆ. ಇದು ಮುಂದೆಯೂ ನಡೆಯುತ್ತದೆ. ಇಲ್ಲಿ ಧರ್ಮ, ಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲ ಧರ್ಮವನ್ನು ಜತೆಯಾಗಿಸಿ ಧರ್ಮ ಜಾಗೃತಿ ಮಾಡುತ್ತಿರುವ ಡಾ| ಹೆಗ್ಗಡೆ ಯವರ ಧರ್ಮವೇ ನಮಗೆ ಮಾದರಿ ಎಂದರು.

ನಟ ಶಿವರಾಜ್‌ಕುಮಾರ್‌ ಮಾತ ನಾಡಿ, ಮಂಜುನಾಥ ಸ್ವಾಮಿಯ ಸಾನ್ನಿಧ್ಯ, ಪೂಜ್ಯ ಹೆಗ್ಗಡೆ ಯವರ ಸಮ್ಮುಖದಲ್ಲಿ ವಿವಾಹವಾಗುತ್ತಿರು ವುದು ನಿಮ್ಮೆಲ್ಲರ ಭಾಗ್ಯ. ಡಾ| ಹೆಗ್ಗಡೆಯವರು ಧಾರ್ಮಿಕ ಮತ್ತು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. 25ನೇ ಸಾಮೂಹಿಕ ವಿವಾಹದಲ್ಲಿ ಅಪ್ಪಾಜಿ ಡಾ| ರಾಜ್‌ ಭಾಗವಹಿಸಿದ್ದರು. ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿರುವ ಪುಣ್ಯ ನನ್ನದು ಎಂದರು. ಧರ್ಮದ ನೆಲೆಯಲ್ಲಿ ವಿವಾಹವಾದ ದಂಪತಿಯನ್ನು ಮಂಜುನಾಥಸ್ವಾಮಿ ಕಾಪಾಡಲಿ ಎಂದು ಶುಭ ಹಾರೈಸಿದರು.

ಬೆಳ್ತಂಗಡಿ ಶಾಸಕ ಹರೀಶ ಪೂಂಜ ಮತ್ತು ಚಲನಚಿತ್ರ ನಿರ್ಮಾಪಕ ಚೆನ್ನೇ ಗೌಡ ಮಾತನಾಡಿ ಡಾ| ಹೆಗ್ಗಡೆಯವರ ಕಾರ್ಯವೈಖರಿಯನ್ನು ಸ್ಮರಿಸಿ ವಧೂವರರಿಗೆ ಶುಭ ಹಾರೈಸಿದರು.

ಶಾಸಕ ಹರೀಶ್‌ ಕುಮಾರ್‌, ಅಭಯಚಂದ್ರ ಜೈನ್‌, ರಾಜ್ಯ ಜಲ ಸಂಪನ್ಮೂಲ ಇಲಾಖೆ ಪ್ರ. ಕಾರ್ಯದರ್ಶಿ ರಾಕೇಶ್‌ ಸಿಂಗ್‌, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ, ಗೀತಾ ಶಿವರಾಜ್‌ ಕುಮಾರ್‌, ನಟ- ನಿರ್ಮಾಪಕ ಗುರುದತ್‌, ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌ ಉಪಸ್ಥಿತ ರಿದ್ದರು. ಜಯಶಂಕರ್‌ ಶರ್ಮ ಸ್ವಾಗತಿಸಿದರು. ದೀಕ್ಷಿತ್‌ ರೈ ನಿರ್ವಹಿಸಿ ಪಿ. ಸುಬ್ರಹ್ಮಣ್ಯ ರಾವ್‌ ವಂದಿಸಿದರು.

48ನೇ ಸಾಮೂಹಿಕ ಉಚಿತ ವಿವಾಹದಲ್ಲಿ 102 ಜೋಡಿಗಳಿದ್ದರು. ಟಿ. ನರಸೀಪುರದ ಸತೀಶ್‌ ಮತ್ತು ಗುಂಡ್ಲುಪೇಟೆಯ ಸಿಂಧೂ ಜಿ. 12,261ನೆಯ ಜೋಡಿಯಾಗಿ ಗಮನ ಸೆಳೆದರು. ಇವರಿಬ್ಬರೂ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸಿಬಂದಿ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸತೀಶ್‌ ಮೇಲ್ವಿಚಾರಕರಾಗಿ, ಸಿಂಧೂ ನಗದು ಸಹಾಯಕಿಯಾಗಿದ್ದಾರೆ.

ಸಮಾರಂಭದಲ್ಲಿ ನಟ ಶಿವರಾಜ್‌ ಕುಮಾರ್‌ ಅವರು ಡಾ| ರಾಜ್‌ ಕಂಠದಲ್ಲಿ ಪ್ರಸಿದ್ಧಿಯಾಗಿರುವ ಎರಡು ಹಾಡುಗಳನ್ನು ಹಾಡಿ ರಂಜಿಸಿದರು. ಮೊದಲಿಗೆ “ಹೊಸಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭಾವಾಗಲಿ…’, ಬಳಿಕ “ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ…’ ಹಾಡಿದರು. ಮೂರನೆಯದಾಗಿ “ಜೋಗಿ’ ಚಿತ್ರದ ಹಾಡನ್ನು ಹಾಡಿದರು.

ಋತ್ವಿಜರಿಂದ ವೇದಘೋಷ ನಡೆಯಿತು. ಬಳಿಕ ವಧೂ-ವರರು ಹಾರವನ್ನು ಬದಲಾಯಿಸಿಕೊಂಡರು. ಬಳಿಕ 6.48ರ ಗೋಧೂಳಿ ಲಗ್ನದಲ್ಲಿ 102 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮುತ್ತೈದೆಯರು ಆರತಿ ಬೆಳಗಿದರು. ವಧೂವರರಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಧರ್ಮಾಧಿಕಾರಿ ಡಾ| ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಸಚಿವ ಶಿವಾನಂದ ಪಾಟೀಲ್‌, ನಟ ಶಿವರಾಜ್‌ ಕುಮಾರ್‌, ಗೀತಾ ಶಿವರಾಜ್‌ ಕುಮಾರ್‌ ಮತ್ತು ಗಣ್ಯರು ಮಾಂಗಲ್ಯವನ್ನು ವಧೂ-ವರರಿಗೆ ವಿತರಿಸಿ, ಆಶೀರ್ವದಿಸಿದರು.

ಟಾಪ್ ನ್ಯೂಸ್

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

11

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Uppinangady: ಮಕ್ಕಳಿಗೆ ಚರಂಡಿ ಕೊಳಚೆಯಿಂದ ಮುಕ್ತಿ ಎಂದು?

1(1)

Puttur: ಸಜ್ಜಾಗುತ್ತಿದೆ ಆನೆಮಜಲು ಕೋರ್ಟ್‌ ಸಂಕೀರ್ಣ

5-belthangady

Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

10

Puttur: ರಸ್ತೆಯಲ್ಲಿ ಕಾರ್ಮಿಕನ ಮೃತದೇಹ; ಮೂವರ ಮೇಲೆ ಪ್ರಕರಣ ದಾಖಲು; ಓರ್ವ ವಶಕ್ಕೆ

SUBHODH

Bantwala: ಕೆದಿಲ: ಸಿಡಿಲಿಗೆ ಮೃತಪಟ್ಟ ಬಾಲಕನಿಗೆ ಕಣ್ಣೀರ ವಿದಾಯ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

11-sagara

Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ

5

Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ

10-hosanagara

Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ

4

Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್‌; ಪ್ರವಾಸಿಗರಿಗೆ ಹೊಸ ಆಕರ್ಷಣೆ

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.