ನಕ್ಸಲ್ ದಾಳಿ: 15 ಪೊಲೀಸರ ಸಾವು
Team Udayavani, May 2, 2019, 6:16 AM IST
ಮುಂಬಯಿ: ಮಹಾರಾಷ್ಟ್ರದ 59ನೇ ರಾಜ್ಯೋತ್ಸವದ ದಿನವಾದ ಬುಧವಾರ ನಕ್ಸಲರು 15 ಪೊಲೀಸರನ್ನು ಹತ್ಯೆಗೈದಿದ್ದಾರೆ.
ನಾಗ್ಪುರದಿಂದ 250 ಕಿ.ಮೀ. ದೂರವಿರುವ ಗಡಿcರೋಲಿ ಜಿಲ್ಲೆಯ ಕುಖೇìಡ ತಾಲೂಕಿನ ದಾದಾಪುರ್ ಎಂಬ ಹಳ್ಳಿಯ ಪಕ್ಕದಲ್ಲೇ ಸಾಗುವ ರಾ.ಹೆ. 136ರಲ್ಲಿ ನಕ್ಸಲರು ಸುಧಾರಿತ ನೆಲಬಾಂಬ್ ಸ್ಫೋಟಿಸಿದ್ದು, ಮಾವೋವಾದಿ ನಿಗ್ರಹ ದಳದ (ಕ್ವಿಕ್ ರೆಸ್ಪಾನ್ಸ್ ಟೀಮ್) 15 ಸಿಬಂದಿ ಸಾವಿಗೀಡಾಗಿದ್ದಾರೆ. ಈ ವಾಹನಗಳನ್ನು ಚಲಾಯಿಸುತ್ತಿದ್ದ ಇಬ್ಬರು ಡ್ರೈವರ್‌ಗಳ ಪೈಕಿ ಓರ್ವ ಅಸುನೀಗಿದ್ದಾರೆ.
ಮೃತಪಟ್ಟವರೆಲ್ಲರೂ ಗಡಿcರೋಲಿ ಜಿಲ್ಲಾ ಪೊಲೀಸ್ ಅಡಿ ಸೇವೆ ಸಲ್ಲಿಸುತ್ತಿದ್ದ ಸಿ-60 ತುಕಡಿಯ ಸಿಬಂದಿ. ಸ್ಫೋಟದ ರಭಸಕ್ಕೆ ಪೊಲೀಸರು ಪ್ರಯಾಣಿಸುತ್ತಿದ್ದ ಎರಡೂ ವಾಹನಗಳು ಚಿಂದಿಯಾಗಿವೆ. ಗಾಯಾಳು ಸಿಬಂದಿಯನ್ನು ಗಡಿcರೋಲಿಯ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
ದಾದಾಪುರ್ ಹಳ್ಳಿಯಲ್ಲಿ ರಾ.ಹೆ. ದುರಸ್ತಿ ಕಾರ್ಯ ನಡೆಯುತ್ತಿದ್ದು, ಆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕೂಲಿಗಳಿಗೆ ಭದ್ರತೆ ಒದಗಿಸಲು ಹಾಗೂ ಅವರ ಕಾರ್ಯಕ್ಕೆ ಸಹಾಯ ಮಾಡುವ ಸಲುವಾಗಿ ಈ ಭದ್ರತಾ ಸಿಬಂದಿ ಸಾಗುತ್ತಿದ್ದರು. ಭದ್ರತಾ ಸಿಬಂದಿ ಇದ್ದ ವಾಹನಗಳು ಆಗಮಿಸಿದ ಕೂಡಲೇ ಹತ್ತಿರದಲ್ಲೇ ಅಡಗಿದ್ದ ನಕ್ಸಲರು ಟ್ರಿಗರ್ ಒತ್ತುವ ಮೂಲಕ ಬಾಂಬ್ ಸ್ಫೋಟಿಸಿದ್ದಾರೆ.
ಪ್ರತೀಕಾರದ ಹೆಜ್ಜೆ ?
ಗಡಿcರೋಲಿ ಜಿಲ್ಲೆಯ ಎಟಾಪಲ್ಲಿ ತಾಲೂಕಿನ ಕಾನ್ಸಾಪುರ ಎಂಬ ಹಳ್ಳಿಯ ಬಳಿ ಕಳೆದ ವರ್ಷ ಎ. 22, 23ರಂದು ಸುಮಾರು 40 ಕೆಂಪು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಇದರ ವರ್ಷಾಚರಣೆ ಹಿನ್ನೆಲೆಯಲ್ಲಿ ಎ. 23ರಿಂದ ಏಳು ದಿನಗಳ ಕಾಲ ಶೋಕ ಸಪ್ತಾಹವನ್ನಾಗಿ ಆಚರಿಸಿದ್ದ ಮಾವೋವಾದಿಗಳು, ಅದಾದ ಮರುದಿನವೇ ಈ ದುಷ್ಕೃತ್ಯ ನಡೆಸಿದ್ದಾರೆ. ನೆಲಬಾಂಬ್ ಸ್ಫೋಟಿಸು ವುದಕ್ಕೂ ಮುನ್ನ ರಸ್ತೆ ಕಂಟ್ರಾಕ್ಟರ್‌ಗಳಿಗೆ ಸೇರಿದ 36ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟು ಹಾಕಿದ್ದರು.
ನಕ್ಸಲರ ಈ ಹೇಯ ಕೃತ್ಯವನ್ನು ನಾನು ಖಂಡಿಸುತ್ತೇನೆ. ಹುತಾತ್ಮ ಭದ್ರತಾ ಸಿಬಂದಿಗೆ ನನ್ನ ಪ್ರಣಾಮಗಳು ಸಲ್ಲುತ್ತವೆ. ಅವರ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಈ ಘಟನೆಯ ಹಿಂದಿರುವವರಿಗೆ ತಕ್ಕ ಶಾಸ್ತಿ ಆಗೇ ಆಗುತ್ತದೆ.
– ನರೇಂದ್ರ ಮೋದಿ, ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.