ನ್ಯೂಜಿಲ್ಯಾಂಡ್ ಓಪನ್ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್‌ಗೆ ಆಘಾತಕಾರಿ ಸೋಲು
ವಿಶ್ವದ 212ನೇ ರ್‍ಯಾಂಕಿಂಗ್ ಆಟಗಾರ್ತಿಗೆ ಶರಣು
Team Udayavani, May 2, 2019, 9:51 AM IST
ಆಕ್ಲೆಂಡ್: ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ “ನ್ಯೂಜಿಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ’ಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ತನಗಿಂತ 10 ವರ್ಷ ಕಿರಿಯಳಾದ, ವಿಶ್ವ ರ್‍ಯಾಂಕಿಂಗ್‌ನಲ್ಲಿ 212ರಷ್ಟು ಕೆಳಗಿನ ಸ್ಥಾನದಲ್ಲಿರುವ ಚೀನದ 19ರ ಹರೆಯದ ವಾಂಗ್ ಜಿಹಿ 21-16, 21-23, 21-4 ಅಂತರದಿಂದ ಸೈನಾಗೆ ಸೋಲಿನ ಬಲೆ ಬೀಸಿದರು.
29ರ ಹರೆಯದ, ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮೊದಲ ಗೇಮ್ ಕಳೆದುಕೊಂಡ ಬಳಿಕ ಉತ್ತಮ ಹೋರಾಟ ನಡೆಸಿ ಸ್ಪರ್ಧೆಯನ್ನು ಸಮಬಲಕ್ಕೆ ತಂದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಮಂಕಾದರು. ಇಲ್ಲಿ ಸೈನಾಗೆ ಗಳಿಸಲು ಸಾಧ್ಯವಾದದ್ದು 4 ಅಂಕ ಮಾತ್ರ! ಇವರಿಬ್ಬರ ಹೋರಾಟ ಒಂದು ಗಂಟೆ, 7 ನಿಮಿಷಗಳ ಕಾಲ ಸಾಗಿತು. ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಸ್ಪರ್ಧಿಸದ ಕಾರಣ ಸೈನಾ ಮೇಲೆ ಹೆಚ್ಚಿನ ಭರವಸೆ ಇಡಲಾಗಿತ್ತು.
ವನಿತಾ ಸಿಂಗಲ್ಸ್ ವಿಭಾಗದ ಮತ್ತೂಂದು ಪಂದ್ಯದಲ್ಲಿ ಅನುರಾ ಪ್ರಭುದೇಸಾಯಿ ಕೂಡ ಸೋಲನುಭವಿಸಿದ್ದಾರೆ. ಅವರನ್ನು ವಿಶ್ವದ 15ನೇ ರ್‍ಯಾಂಕಿಂಗ್ ಆಟಗಾರ್ತಿ ಲೀ ಕ್ಸುರುಯಿ 21-9, 21-10 ಅಂತರದಿಂದ ಹಿಮ್ಮೆಟ್ಟಿಸಿದರು.
ಲಕ್ಷ್ಯ ಸೇನ್‌ಗೂ ಸೋಲು
ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಆರಂಭಿಕ ಸುತ್ತಿನಲ್ಲೇ ಎಡವಿದ್ದಾರೆ. ತೈವಾನ್‌ನ ವಾಂಗ್ ಜು ವೀ ವಿರುದ್ಧ ದಿಟ್ಟ ಹೋರಾಟ ನೀಡಿದ ಲಕ್ಷ್ಯ ಸೇನ್ 21-15, 18-21, 10-21 ಅಂತರದಿಂದ ಪರಾಭವಗೊಂಡರು. ಮೊದಲ ಗೇಮ್ ಗೆದ್ದರೂ ಇದೇ ಓಟ ಮುಂದುವರಿಸಲು ಸೇನ್ ವಿಫಲರಾದರು.
ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಜೋಡಿಯ ಆಟವೂ ಮುಗಿದಿದೆ. ಚೀನದ ಲಿಯು ಕ್ಸುವಾನ್‌ಕುÕವಾನ್-ಕ್ಸಿಯಾ ಯುಟಿಂಗ್ ವಿರುದ್ಧ 70 ನಿಮಿಷಗಳ ಹೋರಾಟ ನಡೆಸಿದ ಭಾರತೀಯ ಜೋಡಿ 14-21, 23-21, 14-21 ಅಂತರದಿಂದ ಸೋಲನುಭವಿಸಿತು.
ಅತ್ರಿ-ರೆಡ್ಡಿ ಮುನ್ನಡೆ
ಭಾರತದ ಪಾಲಿನ ಮೊದಲ ದಿನದ ಸಮಾಧಾನಕರ ಸಂಗತಿಯೆಂದರೆ, ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ-ಬಿ. ಸುಮೀತ್ ರೆಡ್ಡಿ ಜೋಡಿ ಗೆಲುವು ಸಾಧಿಸಿದ್ದು. ಇವರು ಆತಿಥೇಯ ನಾಡಿನ ಜೋಶುವ ಫೆಂಗ್- ಜಾಕ್ ಜಿಯಾಂಗ್ ವಿರುದ್ಧ 21-17, 21-10 ಅಂತರದಿಂದ ಮೇಲುಗೈ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.