ಪುರಾಣ ಕಥೆಗಳನ್ನು ಸಾರುವ ಕ್ಷೇತ್ರ ನಾಗರನವಿಲೆ


Team Udayavani, May 2, 2019, 11:30 AM IST

tour1

ನವಿಲು ಹಾಗೂ ಹಾವುಗಳು ಒಂದೇ ಕಡೆ ಇರುವುದಿಲ್ಲ. ಆದರೆ, ಈ ಕ್ಷೇತ್ರದಲ್ಲಿ ಹಿಂದೊಮ್ಮೆ ಹಾವು ಮತ್ತು ನವಿಲು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದವಂತೆ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ನಾಗರ ನವಿಲೆ ಎಂಬ ಹೆಸರು ಬಂದಿದೆ ಎನ್ನುತ್ತಾರೆ ಸ್ಥಳೀಯರು.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಬಳಿ ಶ್ರೀ ಕ್ಷೇತ್ರ ನಾಗರನವಿಲೆ ಇದೆ. ಸರ್ಪ ಸಂಬಂಧಕ್ಕೆ ಕುರಿತಂತೆ ಏನೇ ಸಮಸ್ಯೆಗಳಿದ್ದರೂ ನಾಗರನವಿಲೆಗೆ ಕಾಲಿಟ್ಟರೆ ಎಲ್ಲವೂ ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನವರ ನಂಬಿಕೆ. ಹೀಗಾಗಿ ಈ ಕ್ಷೇತ್ರಕ್ಕೊಮ್ಮೆ ಭೇಟಿ ನೀಡಬೇಕು, ದೇವರ ದರ್ಶನ ಪಡೆಯಬೇಕು ಎಂಬ ಇಚ್ಚೆಯಿಂದ ಮನೆಮಂದಿಯೊಂದಿಗೆ ಹೊರಟೆವು.

ಸೋಮವಾರವಾದ್ದರಿಂದ ದೇವಸ್ಥಾನದಲ್ಲಿ ಕಾಲಿಡಲೂ ಸ್ಥಳವಿರಲಿಲ್ಲ. ಅಷ್ಟು ಮಂದಿ ಭಕ್ತರು. ತುಮಕೂರು, ಚಿತ್ರದುರ್ಗ, ಮಂಡ್ಯ, ಬೆಂಗಳೂರು ಹಾಗೂ ಹಾಸನ ಜಿಲ್ಲೆಯಿಂದ ಬಂದ ಸಹಸ್ರಾರು ಭಕ್ತರು ಇಲ್ಲಿ ಸರ್ಪದೋಷ, ಕಂಕಣ ಭಾಗ್ಯ, ಪುತ್ರ ಸಂತಾನ ಭಾಗ್ಯಕ್ಕಾಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು.

ಪುರಾಣಗಳ ಪ್ರಕಾರ ಈ ಸ್ಥಳವನ್ನು ಮೊದಲು ಉರಗ ಮಯೂರಪುರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತಂತೆ. ಕಾಲಾಂತರದಲ್ಲಿ ಈ ಪ್ರದೇಶದಲ್ಲಿ ನಾಗರ ಹಾವು ಮತ್ತು ನವಿಲು ಹೆಚ್ಚು ವಾಸ ಮಾಡುತ್ತಿದ್ದರಿಂದ ನಾಗರನವಿಲೆ ಎಂಬ ಹೆಸರು ಬಂತು. ನವಿಲು ಹೆಚ್ಚು ವಾಸವಾಗಿರುವ ಕಡೆ ಹಾವುಗಳು ಇರುವುದಿಲ್ಲ. ಆದರೆ ನವಿಲು ಮತ್ತು ಹಾವು ಒಟ್ಟಿಗೆ ವಾಸ ಮಾಡುತ್ತಿದ್ದುದರಿಂದ ಇದೊಂದು ಪುಣ್ಯ ಕ್ಷೇತ್ರವಾಗಿ ಬದಲಾಗಿದೆ ಎನ್ನುತ್ತದೆ ಇತಿಹಾಸ.

ಜಮದಗ್ನಿ ಋಷಿ ಈ ಕ್ಷೇತ್ರಕ್ಕೆ ಎರಡು ಕಿ.ಮೀ. ದೂರದ ರೇಚಿನಹಳ್ಳಿಯಲ್ಲಿ ತನ್ನ ಮಡದಿ ರೇಣುಕೆ ಮತ್ತು ಪುತ್ರ ಪರಶುರಾಮನೊಂದಿಗೆ ಆಶ್ರಮವಾಸಿಯಾಗಿ ನೆಲೆಸಿದ್ದರಂತೆ. ಅವರು ಉರಗ ಮಯೂರಪುರದಲ್ಲಿನ ದೇವಾಲಯಕ್ಕೆ ಆಗಮಿಸಲು ಸುರಂಗ ಮಾರ್ಗವನ್ನು ಮಾಡಿಕೊಂಡಿದ್ದರಂತೆ. ಈಗಲೂ ದೇವಾಲಯದ ಗರ್ಭಗುಡಿಯೊಳಗೆ ಸುರಂಗ ಮಾರ್ಗವಿದೆ.

ಈ ಊರಿನ ಇನ್ನೊಂದು ವಿಶೇಷವೆಂದರೆ, ಇಲ್ಲಿ ಈಶ್ವರ ಹಾಗೂ ವಿಷ್ಣು ದೇವರು ಒಂದೇ ದೇವಾಲಯದಲ್ಲಿವೆ. ಈ ದೇವತೆಗಳು ಪ್ರತ್ಯೇಕ ಗರ್ಭಗುಡಿಯಲ್ಲಿ ನೆಲೆಸಿರುವುದು ಇಲ್ಲಿನ ವಿಶೇಷ. ಇಲ್ಲಿ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿವಸ ವಿಶೇಷ ಪೂಜೆ ನಡೆಯುತ್ತದೆ.

ಶ್ರೀ ಕ್ಷೇತ್ರದಲ್ಲಿ ನಾಗೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿಲ್ಲ. ಬದಲಾಗಿ ಅದು ಉದ್ಬವ ಮೂರ್ತಿಯಾಗಿದೆ. ಆನಂತರ ಈ  ಕ್ಷೇತ್ರವನ್ನು ಪಂಚಲಿಂಗೇಶ್ವರ ಕ್ಷೇತ್ರವನ್ನಾಗಿ ಮಾಡಲಾಗಿದೆ. ಹೀಗಾಗಿ, ಸೋಮೇಶ್ವರ, ಚಂಡಿಕೇಶ್ವರ, ಬ್ರಹ್ಮಲಿಂಗೇಶ್ವರ, ಸಿದ್ದಲಿಂಗೇಶ್ವರ ಹಾಗೂ ನಾಗೇಶ್ವರ ಸ್ವಾಮಿ ದೇವಾಲಯಗಳಿವೆ. ಸ್ವಲ್ಪ ದೂರದಲ್ಲಿ ಪಾರ್ವತಮ್ಮನವರ ದೇವಾಲಯವೂ ಇದೆ.

ನಾಗದೋಷ ನಿವಾರಣೆಯ ಪ್ರಸಿದ್ದ ಕ್ಷೇತ್ರವಾಗಿರುವ ಇಲ್ಲಿ ಮಜ್ಜನಬಾವಿ ಇದೆ. ಚರ್ಮರೋಗ ಇರುವವರು ಹರಕೆ ಹೊತ್ತು ಜನ್ಮನಕ್ಷತ್ರದ ಪ್ರಕಾರ ಪ್ರತಿವಾರ ಶ್ರೀಕ್ಷೇತ್ರಕ್ಕೆ ಆಗಮಿಸಿ ಮಜ್ಜನಬಾವಿಯಿಂದ ಮೂರು ಕೊಡ ನೀರನ್ನು ಮೈಮೇಲೆ ಹಾಕಿಸಿಕೊಂಡು ಉರುಳು ಸೇವೆ ಮಾಡುವುದು ಇಲ್ಲಿನ ವಿಶೇಷ.

ಇಲ್ಲವೇ ಹೆಜ್ಜೆ ಸೇವೆ ಮಾಡಿ ಹಣ್ಣು ಕಾಯಿ ಅರ್ಪಿಸಿ, ದೇವಾಲಯದಲ್ಲಿ ನೀಡುವ ಹುತ್ತದ ಮಣ್ಣು ಮತ್ತು ಗಂಧವನ್ನು ಲೇಪಿಸಿಕೊಂಡರೆ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ.

ಕ್ಷೇತ್ರದ ಇತಿಹಾಸ
ಈ ಊರಿಗೂ ರಾಮಾಯಣಕ್ಕೂ ನಂಟಿದೆ ಎಂಬ ನಂಬಿಕೆ ಇದೆ. ತ್ರೇತಾಯುಗದಲ್ಲಿ ಶ್ರೀ ರಾಮ ಇಲ್ಲಿಗೆ ಬಂದು ಹೋಗಿರುವುದಕ್ಕೆ ಕುರುಹುಗಳು ಇವೆ. ದ್ವಾಪರಯುಗದಲ್ಲಿ ಪಾಂಡವರು ಅಜ್ಞಾತವಾಸ ಮಾಡಿದ ಪುಣ್ಯ ಕ್ಷೇತ್ರವೂ ಇದೆಂದು ಹೇಳಲಾಗುತ್ತಿದೆ. ವಿಷ್ಣು ಭಕ್ತನಾದ ಚಂದ್ರಹಾಸನು ಈ ಕ್ಷೇತ್ರದಲ್ಲಿ ನೆಲೆಸಿದ್ದರಂತೆ ಎಂಬ ವಿಚಾರ ಸ್ಥಳ ಪುರಾಣದಲ್ಲಿದೆ.

ರೂಟ್‌ ಮ್ಯಾಪ್‌
·  ಮಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ 207 ಕಿ.ಮೀ. ದೂರ.
·  ಚನ್ನರಾಯಪಟ್ಟಣ ದಿಂದ ನುಗ್ಗೇಹಳ್ಳಿ ಮಾರ್ಗವಾಗಿ ಸಾಗಿದರೆ 27 ಕಿ.ಮೀ., ಬಾಗೂರು ಮಾರ್ಗವಾಗಿ 18 ಕಿ.ಮೀ.
·  ಚನ್ನರಾಯಪಟ್ಟಣ ಹತ್ತಿರವೇ ಇರುವುದರಿಂದ ಊಟ, ವಸತಿಗೆ ಸಮಸ್ಯೆಯಿಲ್ಲ.
·  ಸಾಕಷ್ಟು ಬಸ್‌ ಸೌಲಭ್ಯವಿದೆ.
·  ಖಾಸಗಿ ವಾಹನ ಮಾಡಿಕೊಂಡು ಹೋದರೆ ದಾರಿಯಲ್ಲಿ ಹಲವು ದೇವಾಲಯ, ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು.

   ಶಾಮಸುಂದರ್‌ ಕೆ.

ಟಾಪ್ ನ್ಯೂಸ್

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

18ನೇ ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ

Odisha: ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

7-

UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

3

Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ

2

Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು

6-mahadevapura

Mahalingpur: ಹೊಸ ಬಸ್‌ ನಿಲ್ದಾಣದಲ್ಲಿ ಹಳೆ ಸಮಸ್ಯೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.