ಪಿಯುಸಿ ಬಳಿಕ ಮುಂದೇನು ?
ಕೋರ್ಸ್ ಆಯ್ಕೆಗಿಂತ ಆಸಕ್ತಿ ಮುಖ್ಯ
Team Udayavani, May 2, 2019, 11:47 AM IST
‘ಉದಯವಾಣಿ’ಯು ದ್ವಿತೀಯ ಪಿಯುಸಿ ಪಾಸಾಗಿ ಪದವಿಯ ಆಯ್ಕೆಯಲ್ಲಿರುವ ವಿದ್ಯಾರ್ಥಿಗಳಿಗೆ ಕೆರಿಯರ್ ಮಾರ್ಗದರ್ಶನ ನೀಡುವ ಸಲುವಾಗಿ ಬುಧವಾರ (ಮೇ 1) ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ‘ಪಿಯುಸಿ ಬಳಿಕ ಮುಂದೇನು?’ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ ಎಸ್‌ಎಸ್‌ಎಲ್ಸಿ ಪಾಸಾಗಿ ಪ್ರಥಮ ಪಿಯುಸಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೂ ವಿಷಯಗಳು ಹಾಗೂ ಸಾಧ್ಯತೆಗಳ ಕುರಿತು ಕ್ಷೇತ್ರ ಪರಿಣಿತರು ಮಾರ್ಗದರ್ಶನ ನೀಡಿದರು. ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಮುನ್ನೂರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದು ವಿಶೇಷ. ತಮ್ಮ ಪ್ರಶ್ನೆ, ಗೊಂದಲಗಳನ್ನು ಪರಿಣಿತರೊಂದಿಗೆ ಕೇಳಿ ಖುಷಿಪಟ್ಟರು ವಿದ್ಯಾರ್ಥಿಗಳು.
ಉಡುಪಿ, ಮೇ 1: ‘ಉದ್ಯೋಗಕ್ಕೂ ವೃತ್ತಿ (ಕೆರಿಯರ್)ಗೂ ವ್ಯತ್ಯಾಸವಿದೆ. ಅದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಹಾಗಾಗಿ: ಕೋರ್ಸ್ ಅಥವಾ ವಿಷಯ ಯಾವುದೇ ಆಗಿರಲಿ. ಆದರೆ ಅದು ನಿಮ್ಮ ಇಷ್ಟದ್ದಾಗಿರಲಿ’ ಎಂಬ ಸಲಹೆ ಕ್ಷೇತ್ರ ಪರಿಣತರಿಂದ ವಿದ್ಯಾರ್ಥಿಗಳಿಗೆ ನೀಡಿದ್ದು ‘ಪಿಯುಸಿ ಮುಂದೇನು?’ ಕಾರ್ಯಕ್ರಮದಲ್ಲಿ.
ಉದಯವಾಣಿಯು ದ್ವಿತೀಯ ಪಿಯುಸಿ ಪೂರ್ಣಗೊಳಿಸಿ ಪದವಿ ಕೋರ್ಸ್‌ಗಳ ಆಯ್ಕೆಯಲ್ಲಿ ಮುಳುಗಿ ರುವ ವಿದ್ಯಾರ್ಥಿಗಳಿಗೆ ಕೆರಿಯರ್ ಮಾರ್ಗದರ್ಶನ ನೀಡುವ ಸಲುವಾಗಿ ಬುಧವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ‘ಪಿಯುಸಿ ಮುಂದೇನು?’ ಕಾರ್ಯ ಕ್ರಮವನ್ನು ಹಮ್ಮಿಕೊಂಡಿತ್ತು. ಎಲ್ಲ ವಿಷಯಗಳ ತಜ್ನರು ವಿದ್ಯಾರ್ಥಿಗಳಿಗೆ ನೀಡಿದ ಅನುಪಮ ಸಲಹೆಯೆಂದರೆ, “ನಿಮ್ಮ ಇಷ್ಟದ ಕೋರ್ಸ್ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಿ. ಇನ್ನೊಬ್ಬರ ಮಾತಿಗೆ ಮರುಳಾಗಬೇಡಿ’ ಎಂದು.
ವಿಜ್ನಾನ ಕ್ಷೇತ್ರದಲ್ಲಿನ ಸಾಧ್ಯತೆ ಗಳನ್ನು ತೆರೆದಿಟ್ಟ ಬಂಟಕಲ್ಲು ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಪ್ರಾಧ್ಯಾಪಕ ಡಾ| ವಾಸುದೇವ ಅವರು, ‘ನಮ್ಮ ಕೆಲಸಬದಲಾಗುತ್ತಾ ಇರುತ್ತದೆ. ಆದರೆ ವೃತ್ತಿ ಹಾಗಲ್ಲ. ಇದಕ್ಕಾಗಿ ನಾವು ನಿರ್ದಿ ಷ್ಟವಾದ ಕೋರ್ಸ್ ಅನ್ನು ಮೊದಲೇ ನಿರ್ಧರಿಸಬೇಕು ಎಂದರು.
ಯಾವುದೇ ಕೋರ್ಸ್ ತೆಗೆದು ಕೊಂಡರೂ ಅದಕ್ಕೆ ನಿಮ್ಮ ಶ್ರಮ ಅಗತ್ಯ. ಹೊಸವಿಚಾರಗಳನ್ನು ಕಲಿಯುವ ಆಸಕ್ತಿ ನಿಮಗಿರಬೇಕು. ಪಿಯುಸಿ ಅನಂತರ ಸುಮಾರು 200ಕ್ಕೂ ಅಧಿಕ ಕೋರ್ಸ್‌ಗಳಿದ್ದು, ಅಪಾರ ಬೇಡಿಕೆಯಿದೆ ಎಂದರಲ್ಲದೇ, ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಇದ್ದೇ ಇರುತ್ತದೆ. ಅದು ನಮ್ಮ ಪ್ರತಿಭೆ ಮತ್ತು ಪರಿಶ್ರಮವನ್ನು ಅವಲಂಬಿಸಿರುತ್ತದೆ.
ಪ್ರತಿಭಾವಂತ ಪರಿಶ್ರಮಗಳಿಗೆ ಎಂದಿಗೂ ಅವಕಾಶ ಇದ್ದೇ ಇದೆ ಎಂದು ಸ್ಪಷ್ಟಪಡಿಸಿದರು.
ಕಲಾ ವಿಷಯದ ಬಗ್ಗೆ ಬೆಳಕು ಚೆಲ್ಲಿದ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಪರಿವೀಕ್ಷಕರಾದ ಪ್ರತಾಪ್‌ಚಂದ್ರ ಶೆಟ್ಟಿ, ಕಲಾ ವಿಷಯದಲ್ಲೂ ಸಾಕಷ್ಟು ಅವಕಾಶಗಳಿವೆ. ಜತೆಗೆ ಕೆಎಎಸ್, ಐಎಎಸ್ ಪರೀಕ್ಷೆ ಬರೆದು ಮಹೋನ್ನತ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಆ ವಿಷಯ, ಈ ವಿಷಯ ಎಂದು ಯೋಚಿಸುತ್ತಾ ಕುಳಿತುಕೊಳ್ಳಬೇಡಿ ಎಂದು ಹೇಳಿದರು.
ಎಸ್‌ಎಸ್‌ಎಲ್ಸಿ ಪಾಸಾಗಿ ಪ್ರಥಮ ಪಿಯುಸಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಎಂಐಟಿಯ ಡಾ| ನಾಗರಾಜ್ ಕಾಮತ್, ದಿನೇ ದಿನೆ ಕೋರ್ಸ್ ಮತ್ತು ಆಯ್ಕೆಯ ಅವಕಾಶಗಳು ಹೆಚ್ಚುತ್ತಿವೆ. ಹಾಗಾಗಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು ಉತ್ತಮ ಎಂದು ಸಲಹೆ ಕೊಟ್ಟರು.
ಉದ್ಘಾಟನಾ ಸಮಾರಂಭದಲ್ಲಿ ಡಾ| ವಾಸುದೇವ, ಉದಯವಾಣಿ ಸಿಇಒ ವಿನೋದ್ ಕುಮಾರ್ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.