ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಗೆ ಅಪಾರ ನಷ್ಟ

ಧರೆಗುರುಳಿದ ಮರಗಳಿಂದ ಸಂಚಾರ ಅಸ್ತವ್ಯಸ್ತ • ರಸ್ತೆಯಲ್ಲಿ ಕೊಳಚೆ ನೀರು ••ಪಾದಚಾರಿಗಳ ಪರದಾಟ • ನೆಲಕ್ಕುರುಳಿದ ತೆಂಗು ಅಡಕೆ, ಬಾಳೆ

Team Udayavani, May 2, 2019, 12:16 PM IST

tumkur-2..

ತುಮಕೂರು ನಗರದಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸಿದರು.

ತುಮಕೂರು: ಬಿಸಿಲಿನ ಬೇಗೆಯಿಂದ ಬಸವಳಿದು ಹೋಗಿದ್ದ ಕಲ್ಪತರು ನಾಡಿನ ಜನರಿಗೆ ಸಂತಸ ಉಂಟಾಗುವಂತೆ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಧಾರಕಾರವಾಗಿ ಮಂಗಳವಾರ ಸಂಜೆಯಿಂದ ರಾತ್ರಿಯಿಡೀ ಸುರಿದಿದೆ. ವರುಣನ ಆರ್ಭಟದ ಜೊತೆಗೆ ಗುಡುಗು, ಸಿಡಿಲು ಬಿರುಗಾಳಿಯಿಂದ ಕೂಡಿದ್ದ ಬಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿ ರೈತರ ತೆಂಗು, ಬಾಳೆ, ಅಡಿಕೆ ಮರಗಳು ಧರೆಗುರುಳಿ ಲಕ್ಷಾಂತರ ನಷ್ಟ ಉಂಟಾಗಿದೆ.

ಮಂಗಳವಾರ ಸಂಜೆಯಿಂದಲೇ ಮೋಡ ಮುಸುಕಿದ ವಾತಾವರಣ ಉಂಟಾಗಿ ನಂತರ 4 ಗಂಟೆಯ ವೇಳೆಗೆ ಮಿಂಚು ಗುಡಿಗಿನಿಂದ ತುಂತುರು ಮಳೆಯೊಂದಿಗೆ ಆರಂಭವಾಯಿತು. ನಂತರ ಮಳೆಯ ಆರ್ಭಟ ತೀವ್ರಗೊಂಡು ಬಿರುಗಾಳಿ, ಗುಡುಗು, ಸಿಡಿಲು ಹಾಗೂ ಬಾರಿ ಗಾಳಿಗೆ ಜಿಲ್ಲೆಯ ಹಲವು ಕಡೆ ಮರಗಳು, ವಿದ್ಯುತ್‌ ಕಂಬಗಳು ಧರೆ ಗುರುಳಿದವು. ಸುಮಾರು 8 ಗಂಟೆಗೂ ಹೆಚ್ಚುಕಾಲ ಸುರಿದ ಈ ಧಾರಾಕಾರ ಮಳೆಯಿಂದ ನಗರದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗ ಲಾರದೇ, ರಸ್ತೆಯ ತುಂಬ ಮಳೆಯ ನೀರು ಹರಿದ ಪರಿಣಾಮ ಪಾದಚಾರಿಗಳು ವಾಹನ ಸವಾರರು ಕೆಲಹೊತ್ತು ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟಕರವಾಗಿ ಹೋಗಿತ್ತು.

ರಸ್ತೆಯಲ್ಲೇ ಹರಿದ ನೀರು: ನಗರದ ವಾಣಿಜ್ಯ ಪ್ರದೇಶವಾಗಿರುವ ಎಂ.ಜಿ. ರಸ್ತೆಯಲ್ಲಿ ಒಳಚರಂಡಿ ಯಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯಿತು. ಇದರ ಜೊತೆಗೆ ಇಲ್ಲಿಯ ಚರಂಡಿ

ಗಳನ್ನು ಸ್ವಚ್ಛಪಡಿಸದ ಹಿನ್ನೆಲೆಯಲ್ಲಿ ನೀರು ಚರಂಡಿಗಳಲ್ಲಿ ಸರಾಗವಾಗಿ ಹೋಗಲು ಅವಕಾಶ ವಿಲ್ಲ. ಇದರಿಂದ ರಸ್ತೆಯ ಮಧ್ಯದಲ್ಲಿ ಹಳ್ಳದಲ್ಲಿ ನೀರು ಹೋಗುವಂತೆ ಮೊಣ ಕಾಲುದ್ದ ನೀರು ಹರಿದುಹೋಗುತ್ತಿತ್ತು.

ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು: ನಗರದಲ್ಲಿ ಮಂಗಳ ವಾರ ಬಿದ್ದ ಬಾರಿ ಮಳೆಯಿಂದ ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ನಗರದ ಕೆಲವು ಬಡಾವಣೆಗಳಾದ ಸಿದ್ಧಗಂಗಾ ಬಡಾವಣೆ, ಸೋಮೇಶ್ವರ ಪುರಂ, ಸದಾಶಿವನಗರ ಸೇರಿದಂತೆ ಡ್ರೈನೇಜ್‌ ವ್ಯವಸ್ಥೆ ಸರಿಯಾಗಿ ಇಲ್ಲದೇ ಇರುವುದ ರಿಂದ ಕೆಲವು ಮನೆಗಳಿಗೂ ಮಳೆ ನೀರು ನುಗ್ಗಿ ಸಂಕಷ್ಟ ಅನುಭವಿಸಿದ್ದಾರೆ.

ವಿದ್ಯುತ್‌ ಸಂಪರ್ಕ ಕಡಿತ: ಜಿಲ್ಲೆಯಾಂದ್ಯತ ಸುರಿದ ಬಾರೀ ಬಿರುಗಾಳಿ ಮಳೆಯ ಹಿನ್ನೆಲೆಯಲ್ಲಿ ವಿವಿಧ ಕಡೆಗಳಲ್ಲಿ ಮರಗಳು, ಕಂಬಗಳು ನೆಲಕ್ಕೆ ಉರುಳಿದ ಪರಿಣಾಮ ನಗರವೂ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯುತ್‌ ಕಡಿತ ಉಂಟಾಗಿತ್ತು.

ಧರೆಗುರುಳಿದ ಮರ, ಕಂಬಗಳು: ಜಿಲ್ಲೆಯಲ್ಲಿ ಸುರಿದ ಬಿರುಗಾಳಿ ಮಳೆಗೆ ಬರಗಾಲದಲ್ಲಿಯೂ ಕಷ್ಟ ಪಟ್ಟು ಬೆಳೆದ ಬಾಳೆ, ಅಡಕೆ, ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ಜಿಲ್ಲೆಯ ತಿಪಟೂರು ತಾಲೂಕಿನ ಗೊರ ಗುಂಡನಹಳ್ಳಿಯ ರೈತ ಶಿವಕುಮಾರ್‌ ಎಂಬುವವರು ಬೆಳೆದಿದ್ದ, ಬಾಳೆ ತೋಟ ಬಿರುಗಾಳಿಗೆ ನೆಲ ಸಮವಾಗಿದೆ.

ಸುಮಾರು 2 ಎಕರೆ ವಿಸ್ತೀರ್ಣದ ಬಾಳೆ ತೋಟದಲ್ಲಿ ಕೊಯ್ಲಿನ ಹಂತಕ್ಕೆ ಬಾಳೆ ಬಂದಿದ್ದ ವೇಳೆಗೆ ನೆಲಸಮ ವಾಗಿದ್ದು, ರೈತನಿಗೆ ಭಾರೀ ನಷ್ಟ ಉಂಟಾಗಿದೆ. ಅದೇ ರೀತಿಯಲ್ಲಿ ಹೊಳವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದುಗ್ಗೇನಹಳ್ಳಿಗೆ ಗಾಳಿ ಮಳೆಗೆ ತೋಟದ ಮನೆಯ ಶೀಟುಗಳು ಹಾರಿ ಹೋಗಿ ಅಲ್ಲಿಯೂ ಬಾಳೆ ತೋಟ ನಾಶವಾಗಿದೆ.

ತುಮಕೂರು ತಾಲೂಕು ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಇದೇ ರೀತಿ ಬಿರುಗಾಳಿ ಸಹಿತ ಧಾರಕಾರ ಮಳೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಭೀಕರ ಬರಗಾಲದಲ್ಲಿಯೂ ಲಕ್ಷಾಂತರ ರೂ. ಖರ್ಚು ಮಾಡಿ ಕೊಳವೆಬಾವಿ ಕೊರಸಿ ಈ ಬೋರ್‌ವೆಲ್ಗಳ ಆಶ್ರಯದಲ್ಲಿ ತಮ್ಮ ತೋಟಗಳನ್ನು ಉಳಿಸಿಕೊಂಡದ್ದ, ರೈತರಿಗೆ ಈ ಬಿರುಗಾಳಿ ಮಳೆ ನಷ್ಟ ಉಂಟುಮಾಡಿದೆ. ಜಿಲ್ಲೆಯಲ್ಲಿ ಈ ಮಳೆಯಿಂದ ರೈತರಿಗೆ ಉಂಟಾಗಿರುವ ನಷ್ಟವನ್ನು ಅಂದಾಜಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವತ್ತಾ, ಜಿಲ್ಲಾಡಳಿತ ಮುಂದಾಗ ಬೇಕಾಗಿದೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal: ಗೆಳತಿಯರ ಜೊತೆ ಆಟವಾಡುವ ವೇಳೆ ಹಾವು ಕಚ್ಚಿ ಬಾಲಕಿ ಮೃತ್ಯು

Kunigal: ಗೆಳತಿಯರ ಜೊತೆ ಆಟವಾಡುವ ವೇಳೆ ಹಾವು ಕಚ್ಚಿ ಬಾಲಕಿ ಮೃತ್ಯು

Pavagada; ವಾಹನ ಸಹಿತ ವ್ಯಕ್ತಿ ಸಜೀವದಹನ

Pavagada; ವಾಹನ ಸಹಿತ ವ್ಯಕ್ತಿ ಸಜೀವದಹನ

Tumakur

Wage Workers: ತುಮಕೂರಿನ ಶುಂಠಿ ಕ್ಯಾಂಪ್‌ನಲ್ಲಿ ಜೀತ ಪದ್ಧತಿ ಜೀವಂತ!

1-kunigal

Kunigal: ಕೌಟುಂಬಿಕ ಕಲಹ; ಗೃಹಣಿ ಆತ್ಮಹತ್ಯೆ

Laxmi-Minister

Reality Check: ʼನಮ್ಮ ಅತ್ತೆ ಹೊಡೆಯುತ್ತಿದ್ದಾರೆ ಸಹಾಯ ಮಾಡುವಿರಾʼ ಎಂದ ಸಚಿವೆ ಲಕ್ಷ್ಮೀ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.