ಉಪಕಾರ ಮಾಡದಿದ್ದರೂ, ಅಪಕಾರ ಮಾಡಬೇಡಿ
ದೇಹ ದಂಡಿಸಿ-ದುಡಿದು ಜೀವನ ನಡೆಸುವುದೇ ನಿಜವಾದ ಕಾಯಕ: ಕಲ್ಲುಕಂಡ ಪಂಪಾಪತಿ
Team Udayavani, May 2, 2019, 5:08 PM IST
ಬಳ್ಳಾರಿ: ಮುಂಡ್ಲೂರು ರಾಮಪ್ಪ ಸ್ನೇಹ ಸಂಪುಟ ಸಭಾಂಗಣದಲ್ಲಿ ಅಮ್ಮ ಆಟೋ ಚಾಲಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಕಲ್ಲುಕಂಬ ಪಂಪಾಪತಿ ಮಾತನಾಡಿದರು.
ಬಳ್ಳಾರಿ: ದೇಹ ದಂಡಿಸಿ, ದುಡಿದು ಜೀವನ ಮಾಡುವುದೇ ನಿಜವಾದ ಕಾಯಕ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಲ್ಲುಕಂಡ ಪಂಪಾಪತಿ ಹೇಳಿದರು.
ನಗರದ ಮುಂಡ್ಲೂರು ರಾಮಪ್ಪ ಸ್ನೇಹಸಂಪುಟ ಸಭಾಂಗಣದಲ್ಲಿ ಅಮ್ಮ ಆಟೋ ಚಾಲಕರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಎಂದರೆ ದೇಹ ದಂಡಿಸಿ, ನಮಗೆ ಬೇಕಾದದ್ದನ್ನು ಖುದ್ದು ಗಳಿಸುವುದು ಆಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಇದನ್ನು ಸ್ಪಷ್ಟವಾಗಿ ಹೇಳಿದರು. ನಾವು ಮಾಡುವ ಕೆಲಸವನ್ನು ಕಾಯಕಕ್ಕೆ ಹೋಲಿಸಿದರು. ಕಾಯಕ ಎಂದರೆ ದೇಹದ ದಂಡಿಸುವುದು. ಬಸವಣ್ಣ ಹೇಳಿದಂತೆ ನಾವೆಲ್ಲಾ ಕಾಯಕದಲ್ಲಿಯೇ ಕೈಲಾಸ ಕಾಣಬೇಕು ಎಂದು ಸಲಹೆ ನೀಡಿದರು.
ನೀವೆಲ್ಲಾ ಸಾರ್ವಜನಿಕರ ಒಳಿತಿಗಾಗಿ ದುಡಿಯುವವರು. ಎಂದಿಗೂ ಇತರರಿಗೆ ಕೆಡುಕ ಬಯಸಬಾರದು. ಇನ್ನೊಬ್ಬರಿಗೆ ಉಪಕಾರ ಮಾಡುವುದು ಸಾಧ್ಯವಿಲ್ಲದಿದ್ದರೂ ಸರಿ ಅಪಕಾರ ಮಾತ್ರ ಮಾಡಬಾರದು. ಇನ್ನೊಬ್ಬರಿಗೆ ಕೆಡುಕು ಬಯಸದೆ ನಮ್ಮ ಬದುಕು ಸಾಗಿಸುವವನೇ ನಿಜವಾದ ದೇವರು ಎಂದು ಅವರು ಕಾರ್ಮಿಕರ ಬಗ್ಗೆ ಗುಣಗಾನ ಮಾಡಿದರು.
ಭೂಮಿ ಮೇಲೆ ಹುಟ್ಟಿದ ಯಾವುದೇ ವ್ಯಕ್ತಿ, ಜೀವಿ ಪರಿಪೂರ್ಣ ಅಲ್ಲ. ಒಂದಿಲ್ಲೊಂದು ಕೆಟ್ಟ ಗುಣ ಇದ್ದೇ ಇರುತ್ತವೆ. ಇದನ್ನೇ ತತ್ವಜ್ಞಾನಿ ಅರಿಸ್ಟಾಟಲ್ ಹೇಳಿದ್ದಾರೆ. ನಾವುಗಳು ಸಾಮಾನ್ಯರು. ನಮ್ಮ ಜೀವನ ರೂಪಿಸಿಕೊಳ್ಳುವಾಗ ಇತರರನ್ನು ನೋಡಿ ಕಲಿಯಬೇಕು. ಆ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಮಾತನಾಡಿ, ಆಟೋ ಚಾಲಕರು ನಿತ್ಯ ಜನರ ಒಳಿತಿಗಾಗಿ ದುಡಿಯುತ್ತಾರೆ. ಅವರ ಸೇವೆ ಮಾಡುವುದು ಒಳ್ಳೆಯದು. ನಾವು ನಮ್ಮ ಸಂಘಟನೆಯಿಂದ ಆಟೋ ಚಾಲಕರ ಸೇವೆ ಮಾಡಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಆಟೋ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ ನೀಡಲಾಗುವುದು ಎಂದರು.
ಅಮ್ಮ ಆಟೋ ಚಾಲಕರ ಸಂಘದ ಅಧ್ಯಕ್ಷ ಜಾನ್ ಬಾಸ್ಕೊ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಪುರುಷೋತ್ತಮ ಹಂದ್ಯಾಳ್, ಲೋಕೇಶ, ತಿಪ್ಪಾರೆಡ್ಡಿ ಇತರರು ವೇದಿಕೆಯಲ್ಲಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.