ಅಖಿಲಾ ನಿರೀಕ್ಷೆಯ ರತ್ನಮಂಜರಿ
ಫ್ಯಾಷನ್ ಡಿಸೈನರ್ ಗೌರಿಯಾಗಿ ನಟನೆ
Team Udayavani, May 3, 2019, 6:25 AM IST
ಅನಿವಾಸಿ ಕನ್ನಡಿಗರು ಸೇರಿ ನಿರ್ಮಿಸುತ್ತಿರುವ “ರತ್ನಮಂಜರಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಮೇ. 17ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಚಿತ್ರದ ನಾಯಕಿ ಅಖಿಲಾ ಪ್ರಕಾಶ್, “ರತ್ನಮಂಜರಿ’ಯ ಜರ್ನಿಯ ಬಗ್ಗೆ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ.
“ನನ್ನ ಹಿಂದಿನ ನಾಲ್ಕು ಚಿತ್ರಗಳಿಗೆ ಹೋಲಿಸಿದರೆ “ರತ್ನಮಂಜರಿ’ ಸಾಕಷ್ಟು ಅನುಭವಗಳನ್ನು ತಂದುಕೊಟ್ಟಂತಹ ಚಿತ್ರ. ನನ್ನ ಸಿನಿಮಾ ಕೆರೆಯರ್‌ನಲ್ಲಿ “ರತ್ನಮಂಜರಿ’ ಒಂದು ವಂಡರ್‌ಫುಲ್ ಜರ್ನಿ. ಆರಂಭದಲ್ಲಿ ಸಿನಿಮಾ ಯಾವಾಗ ಮುಗಿಯುತ್ತದೆಯೋ, ಅಂತ ಅನಿಸುತ್ತಿತ್ತು. ಆದ್ರೆ ಈಗ ಸಿನಿಮಾ ಇಷ್ಟು ಬೇಗ ಮುಗಿದು ಹೋಯಿತಾ ಅಂತ ಅನಿಸುತ್ತಿದೆ.
ದೊಡ್ಡ ಪ್ರಾಜೆಕ್ಟ್‌ನ ಹೇಗೆ ಪ್ಲಾನಿಂಗ್ ಮಾಡಬೇಕು, ಅದನ್ನು ಹೇಗೆ ಎಕ್ಸಿಕ್ಯೂಟ್ ಮಾಡಬೇಕು. ಸಮಯಕ್ಕೆ ಸರಿಯಾಗಿ ತುಂಬಾ ಪ್ರೊಫೇಷನಲ್ ಆಗಿ ಹೇಗೆ ಮುಗಿಸಬೇಕು ಅನ್ನೋದನ್ನ ಈ ಸಿನಿಮಾ ಕಲಿಸಿಕೊಟ್ಟಿದೆ. ಒಟ್ಟಿನಲ್ಲಿ ಸಿನಿಮಾ ಮುಗಿದಿದ್ದೇ ಗೊತ್ತಾಗಲಿಲ್ಲ’ ಎನ್ನುತ್ತಾರೆ ಅಖಿಲಾ ಪ್ರಕಾಶ್.
ಇನ್ನು “ರತ್ನಮಂಜರಿ’ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರಂತೆ. ಚಿತ್ರದಲ್ಲಿ ಅಖಿಲಾ, ಫ್ಯಾಷನ್ ಡಿಸೈನರ್ ಗೌರಿ ಎನ್ನುವ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಚಿತ್ರದಲ್ಲಿ ನಿಜವಾದ “ರತ್ನಮಂಜರಿ’ ಯಾರು ಅನ್ನೋದು ಸಸ್ಪೆನ್ಸ್ ಅದನ್ನ ಸಿನಿಮಾದಲ್ಲೇ ನೋಡಬೇಕು ಅಂತಾರೆ ಅಖಿಲಾ.
ಇತ್ತೀಚೆಗೆ ಹಂಸಲೇಖ, ಡಾ. ನಾಗತಿಹಳ್ಳಿ ಚಂದ್ರಶೇಖರ್ ಮೊದಲಾದ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ “ರತ್ನಮಂಜರಿ’ ಚಿತ್ರದ ಆಡಿಯೋ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಹರ್ಷವರ್ಧನ್ ಸಂಗೀತ ಸಂಯೋಜನೆಯ ಈ ಹಾಡುಗಳಿಗೆ ಪುನೀತ್ ರಾಜಕುಮಾರ್, ವಸಿಷ್ಠ ಸಿಂಹ, ಟಿಪ್ಪು ಮೊದಲಾದವರು ಧ್ವನಿಯಾಗಿದ್ದಾರೆ. ಸದ್ಯ ಬಿಡುಗಡೆಯಾಗಿರುವ “ರತ್ನಮಂಜರಿ’ ಹಾಡುಗಳ ಬಗ್ಗೆಯೂ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವುದು ಅಖೀಲಾಗೆ ಖುಷಿ ತಂದಿದೆಯಂತೆ.
“ರತ್ನಮಂಜರಿ’ ಬಿಡುಗಡೆಗೂ ಮೊದಲೇ ಕೆಲವು ಚಿತ್ರಗಳ ಆಫರ್ ಬರುತ್ತಿದ್ದರೂ, ಸದ್ಯ “ರತ್ನಮಂಜರಿ’ ಚಿತ್ರದ ಪ್ರಮೋಷನ್ ಕಾರ್ಯಗಳಲ್ಲಿ ನಿರತರಾಗಿರುವ ಅಖೀಲಾ, “ರತ್ನಮಂಜರಿ’ ರಿಲೀಸ್ ಆದ ಮೇಲೆ ಬೇರೆ ಚಿತ್ರಗಳ ಬಗ್ಗೆ ಯೋಚನೆ ಮಾಡುತ್ತೇನೆ ಎನ್ನುತ್ತಾರೆ.
ವಿದೇಶಿ ಕನ್ನಡಿಗರಾದ ಸಂದೀಪ್ ಕುಮಾರ್, ನಟರಾಜ್ ಹಳೆಬೀಡು ಹಾಗೂ ಇತರರು ಸೇರಿ ನಿರ್ಮಿಸಿರುವ “ರತ್ನಮಂಜರಿ’ ಚಿತ್ರಕ್ಕೆ ನಿರ್ದೇಶಕ ಪ್ರಸಿದ್ಧ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಒಟ್ಟಾರೆ ಬಿಡುಗಡೆಗೂ ಮೊದಲೇ ಒಂದಷ್ಟು ಸದ್ದು ಮಾಡುತ್ತ, ಸುದ್ದಿಯಲ್ಲಿರುವ “ರತ್ನಮಂಜರಿ’ ಕನ್ನಡ ಸಿನಿಪ್ರಿಯರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ, “ರತ್ನಮಂಜರಿ’ ಅಖಿಲಾ ಪ್ರಕಾಶ್ ಎಂಬ ಭರವಸೆಯ ನಾಯಕಿಗೆ ಬ್ರೇಕ್ ತಂದುಕೊಡುತ್ತದೆಯಾ ಅನ್ನೋದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.