ಗಂಗೊಳ್ಳಿ- ಕೋಡಿ ಅಳಿವೆ ಪ್ರದೇಶದಲ್ಲಿ ತಡೆಯಾದ ಮರಳು ದಿಬ್ಬ
ಮೀನುಗಾರಿಕಾ ದೋಣಿ, ಬೋಟುಗಳ ಸಂಚಾರಕ್ಕೆ ಅಡಚಣೆ ; ಮುಂಗಾರಿಗೂ ಮುನ್ನ ಹೂಳೆತ್ತಲು ಆಗ್ರಹ
Team Udayavani, May 3, 2019, 6:00 AM IST
ಪಂಚಗಂಗಾವಳಿ ಹೊಳೆಯಲ್ಲಿ ಸಂಗ್ರಹವಾಗಿರುವ ಮರಳು ದಿಬ್ಬ.
ಗಂಗೊಳ್ಳಿ: ಗಂಗೊಳ್ಳಿ – ಕೋಡಿ ಅಳಿವೆ ಪ್ರದೇಶದಲ್ಲಿ ನಡೆದ ಬ್ರೇಕ್ ವಾಟರ್ ಕಾಮಗಾರಿ ವೇಳೆ ರಾಶಿ ಹಾಕಲಾದ ಮರಳನ್ನು ಅಲ್ಲಿಂದ ತೆಗೆಯದೇ ಹಾಗೇ ಬಿಟ್ಟಿದ್ದರಿಂದ ಈಗ ಪಂಚಗಂಗಾವಳಿ ಹೊಳೆಯಲ್ಲಿ ಮರಳು ದಿಬ್ಬ ಸಂಗ್ರಹವಾಗಿದೆ. ಇದರಿಂದ ಗಂಗೊಳ್ಳಿ ಬಂದರು ಹಾಗೂ ಕೋಡಿಯಿಂದ ಮೀನುಗಾರಿಕೆಗೆ ತೆರಳುವ ದೋಣಿ ಹಾಗೂ ಬೋಟುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕೋಡಿ – ಗಂಗೊಳ್ಳಿ ನಡುವಿನ ಪಂಚಗಂಗಾವಳಿ ಹೊಳೆಯಲ್ಲಿರುವ ಮರಳು ನೇರವಾಗಿ ಗಂಗೊಳ್ಳಿ ಅಳಿವೆ ಬಾಗಿಲನ್ನು ಸೇರಿಕೊಳ್ಳುವುದರ ಜತೆಗೆ ನದಿಯಲ್ಲಿ ಅಲ್ಲಲ್ಲಿ ಶೇಖರಣೆಯಾಗುತ್ತಾ ದಿಬ್ಬಗಳಾಗಿವೆ. ಇದು ನದಿ ಪಾತ್ರವನ್ನೇ ಬದಲಿಸಿ ಬಿಡುವ ಆತಂಕ ಕೂಡ ಎದುರಾಗಿದೆ.
ಏನು ಸಮಸ್ಯೆ?
ಸಮುದ್ರದ ಅಲೆಗಳ ಇಳಿತದ ಸಮಯದಲ್ಲಿ ಬೋಟುಗಳು ಸಂಚರಿಸುವುದು ಕಷ್ಟವಾಗುತ್ತಿದೆ. ಭರತದ ಸಮಯ ನೋಡಿ ಬೋಟುಗಳು ಬಂದರು ಒಳಗೆ ಬರುವುದು ಮತ್ತು ಹೊರಗೆ ಹೋಗಬೇಕಾಗಿದೆ. ಇದರಿಂದ ಮೀನುಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅದಲ್ಲದೆ ಮುಂದಿನ ಮುಂಗಾರಿನ ಬಳಿಕ ಆರಂಭವಾಗುವ ಮೀನುಗಾರಿಕಾ ಋತುವಿನಲ್ಲಿ ಬೋಟುಗಳು ಹಾಗೂ ದೋಣಿಗಳ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಗಳೂ ಇವೆ.
ಶೀಘ್ರ ಹೂಳೆತ್ತಬೇಕಾಗಿದೆ
ಗಂಗೊಳ್ಳಿ ಹಾಗೂ ಕೋಡಿ ಅಳಿವೆ ಪ್ರದೇಶದಲ್ಲಿ ಅನುಷ್ಠಾನಗೊಂಡ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತುವ ಬಗ್ಗೆ ಅನುದಾನ ಮೀಸಲಿರಿಸಲಾಗಿದೆ. ಆದರೆ ಈವರೆಗೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಇನ್ನೇನು 1 ತಿಂಗಳಿನಲ್ಲಿ ಮಳೆಗಾಲ ಆರಂಭವಾಗಲಿದ್ದು, ಹೂಳೆತ್ತುವ ಕಾಮಗಾರಿಯನ್ನು ಅದಕ್ಕೂ ಮೊದಲು ಅಂದರೆ ಶೀಘ್ರ ಕೈಗೆತ್ತಿಕೊಳ್ಳಬೇಕಾದ ಅವಶ್ಯಕತೆ ಇದೆ. ಮಳೆಗಾಲ ಆರಂಭವಾಗುವುದರ ಮೊದಲು ಹೂಳೆತ್ತಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಕೋಡಿ ಹಾಗೂ ಗಂಗೊಳ್ಳಿ ಭಾಗದ ಮೀನುಗಾರರು ಒತ್ತಾಯಿಸಿದ್ದಾರೆ.
ಪರಿಶೀಲನೆ ನಡೆಸಲಾಗುವುದು
ಈಗಾಗಲೇ ಯೋಜನೆ ಪ್ರಕಾರ ಏನಿದೆಯೋ ಆ ರೀತಿಯಲ್ಲಿ ಹೂಳೆತ್ತಲಾಗಿದೆ. ಬೋಟು ಹಾಗೂ ದೋಣಿಗಳ ಸಂಚಾರಕ್ಕೆ ಅನುವು ಮಾಡಿಕೊಡುವಷ್ಟು ದಾರಿ ಮಾಡಿಕೊಡಲಾಗಿದೆ. ಈ ಬಾರಿ ಹೂಳೆತ್ತುವ ಸಂಬಂಧ ಪರಿಶೀಲನೆ ನಡೆಸಿದ ಬಳಿಕ ಹೊಸದಾಗಿ ಯೋಜನೆ ಸಿದ್ಧಪಡಿಸಲಾಗುವುದು.
-ಉದಯ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್,
ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ
ಕೂಡಲೇ ಗಮನಹರಿಸಲಿ
ಪಂಚಗಂಗಾವಳಿ ಹೊಳೆಯಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯಬೇಕು ಎಂದು ನಾವು ಈ ವರ್ಷ ಎರಡೆರಡು ಬಾರಿ ಸಂಬಂಧಪಟ್ಟ ಸಂಸದರು, ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದ್ದೇವು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಶಾಸಕರು ಕೂಡ ಹೂಳೆತ್ತಲು ಅಧಿಕಾರಿಗಳಿಗೆ ಸೂಚನೆ ನೀಡಿದರೂ, ಅವರು ಮೀನಾಮೇಷ ಎಣಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಲಿ.
-ಭಾಸ್ಕರ ಪುತ್ರನ್ ಕೋಡಿ, ಮೀನುಗಾರರು
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.