ಕಣ್ಮನ ಸೆಳೆದ ಕನಕ ಮೃಗ
ಗೀತ ರೂಪಕವಾದ ಕವನ
Team Udayavani, May 3, 2019, 6:03 AM IST
ಡಾ| ಉಪ್ಪಂಗಳ ರಾಮ ಭಟ್ ವಿರಚಿತ “ಹೊಂಗಿರಣ’ ದೀರ್ಘ ಕವನವನ್ನು “ಕನಕ ಮೃಗ’ ಹೆಸರಿನಲ್ಲಿ ಉಡುಪಿಯ ನೃತ್ಯ ನಿಕೇತನದವರು ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಗೀತ ರೂಪಕವಾಗಿ ಪ್ರದರ್ಶಿಸಿದರು.
ಶ್ರೀ ರಾಮನ ವನವಾಸದ ಕಾಲದಲ್ಲಿ ಪಂಚವಟಿಯಲ್ಲಿ ರಾವಣನು ಸೀತೆಯನ್ನು ಅಪಹರಿಸಲು ಮಾರೀಚ ಚಿನ್ನದ ಜಿಂಕೆಯಾಗಿ ಸೀತೆಯ ಮನಸೆಳೆದು ರಾಮ ಲಕ್ಷ್ಮಣರು ಹೊರಹೋಗುವಂತೆ ಮಾಡಿ ತನ್ನ ಕಾರ್ಯಸಾಧನೆ ಮಾಡಿಕೊಂಡ ಕತೆಯನ್ನೊಳಗೊಂಡ “ಕನಕ ಮೃಗ’ ಲಕ್ಷ್ಮೀಗುರುರಾಜ ಅವರ ನಿರ್ದೇಶನದಲ್ಲಿ ಮೂಡಿಬಂದು ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಆರಂಭದಲ್ಲಿನ ಪ್ರಕೃತಿ ವರ್ಣನೆ ಸ್ಪಷ್ಟ ಪಡಿಸಲು ಸಮೂಹ ನೃತ್ಯದಲ್ಲಿ ಸುಪ್ರಿಯಾ, ಸುಪ್ರೀತಾ, ಅನನ್ಯಾ, ಸುಶ್ಮಿತಾ, ನಿಹಾರಿಕಾಹಾಗೂ ಜಿಂಕೆಗಳಾಗಿ ಮೇದಿನಿ, ಪ್ರತಿಮಾ ಭರವಸೆ ಮೂಡಿಸಿದರು. ಶ್ರೀರಾಮನಾಗಿ ಲಕ್ಷ್ಮೀಗುರುರಾಜ್ ಎಲ್ಲಾ ದೃಶ್ಯಗಳಲ್ಲೂ ತಮ್ಮ ಪ್ರೌಢಿಮೆಯನ್ನು ಮನದಟ್ಟು ಮಾಡಿಸಿದರು. ಸೀತೆಯಾಗಿ ವಿ|ಮಿಥಿಲಾ ಉಪಾಧ್ಯ ಜಿಂಕೆಗೆ ಆಕರ್ಷಿತಳಾಗುವಾಗ ಹಾಗೂ ಲಕ್ಷ್ಮಣನನ್ನು ಅಪಾಯ ತಿಳಿದುಕೊಳ್ಳಲು ಕಳುಹಿಸುವಾಗ ವಿಶೇಷ ಮೆಚ್ಚುಗೆ ಪಡೆದರು. ಮಯೂರಿ ಗುರುರಾಜ್ ಲಕ್ಷ್ಮಣನಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಬೇಬಿ ಶ್ರೀಲಕ್ಷ್ಮಿಯ ಮಾಯಾ ಜಿಂಕೆ ಲವಲವಲವಿಕೆಯಿಂದ ನೆನಪಿನಲ್ಲುಳಿಯುವಂತೆ ಮಾಡಿತು. ವಿ| ವಿದ್ಯಾ ಸಂದೇಶ್ ಅವರ ರಾವಣ ರೂಪಕಕ್ಕೆ ಹೊಸ ರೂಪ ನೀಡಿತಲ್ಲದೆ ಮಾಯಾ ರಾವಣನಾಗಿಯೂ ಅವರೇ ಅಭಿನಯಿಸಿ ಸೀತೆಯನ್ನು ಅಪಹರಿಸುವಲ್ಲಿ ಪ್ರಭಾವ ಬೀರಿದರು.
ಸಂಗೀತಾ ಬಾಲಚಂದ್ರರವರ ಹಾಡುಗಾರಿಕೆ, ಲಕ್ಷ್ಮೀಗುರುರಾಜ್, ಶ್ರೀವಿದ್ಯಾ ಸಂದೇಶ್‌ರವರ ನಟುವಾಂಗಂ, ಬಾಲಚಂದ್ರ ಭಾಗವತರ ಮೃದಂಗ, ಶ್ರೀಧರ ಆಚಾರ್ಯರ ವಯೋಲಿನ್, ಮುರಳೀಧರ ಕೆ. ಅವರ ಕೊಳಲು “ಕನಕ ಮೃಗ’ ಮರೆಯದಂತೆ ಮಾಡಲು ಕಾರಣವಾಗಿತ್ತು. ಕೇವಲ ಒಂದು ತಾಸಿನ ಕಡಿಮೆ ಅವಧಿಯ ಈ ಗೀತರೂಪಕವು ಹಿಮ್ಮೇಳದವರ ಹಾಗೂ ಕಲಾವಿದೆಯರ ಶ್ರಮದಿಂದ ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡಿತು.
– ಬಾ. ಸಾಮಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.