ದೇಶಭಕ್ತಿಯ ಪುಳಕ ನೃತ್ಯ ರಸಾಭಿವರ್ಷ

Team Udayavani, May 3, 2019, 6:00 AM IST

nrityabhivarsha-2

ಕುದಿಯುತ್ತಿರುವ ಬೇಸಿಗೆಯಲ್ಲಿಯೂ ಕಿವಿಗಳಿಗೆ ತಂಪೆರೆದದ್ದು ರಾಷ್ಟ್ರಭಕ್ತಿ, ಗೋಭಕ್ತಿ, ಮಾತೃಭಕ್ತಿಯನ್ನು ಉದ್ದೀಪಿಸುವ ಯಶಸ್ವೀ ಪ್ರಯತ್ನದ ಫ‌ಲವಾದ ಸೊಗಸಾದ ಗಾಯನ, ಅದಕ್ಕೆ ತಕ್ಕಂತೆ ವೈವಿಧ್ಯಮಯವಾದ ಭಾರತೀಯ ಸಂಸ್ಕೃತಿಯ ದರ್ಶನ ಮಾಡಿಸುವ ನೃತ್ಯ ಕಲಾಭಿಷೇಚನ.

ಕುಡುಪು ಅನಂತ ಪದ್ಮನಾಭ ದೇವಾಲಯದ ಸಭಾಂಗಣದಲ್ಲಿ ಎ.26ರಂದು ಮಂಗಳೂರಿನ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳ ನೃತ್ಯ ವೈಭವದಿಂದ ಸಂಪನ್ನಗೊಂಡಿತು. ಕರ್ನಾಟಕ ಕಲಾಶ್ರೀ ವಿ| ಶಾರದಾಮಣಿ ಶೇಖರ್‌, ವಿ| ಶ್ರೀಲತಾ ನಾಗರಾಜ್‌ ನಿರ್ದೇಶಿಸಿ ರೂಪಿಸಿದ ಪುಣ್ಯಭೂಮಿ ಭಾರತ ಎಂಬ ನೃತ್ಯ ಪರಿಕಲ್ಪನೆಯ ಹಿನ್ನೆಲೆಯನ್ನು ಪ್ರತಿಯೊಂದು ನೃತ್ಯ ಆರಂಭವಾಗುವ ಮೊದಲು ರೂಪಿಸಿದವರು ಆದರ್ಶ ಗೋಖಲೆ. ಇಲ್ಲಿ ನಡೆದದ್ದು ಈ ನೃತ್ಯ ಪ್ರಕಾರದ 50ನೆಯ ಪ್ರಯೋಗ. ಚಂದ್ರಶೇಖರ ಶೆಟ್ಟಿಯವರ ಮಾರ್ಗದರ್ಶನವೂ ಕಾರ್ಯಕ್ರಮದ ಯಶಸ್ಸಿನಲ್ಲಿ ಎದ್ದು ಕಾಣುತ್ತಿತ್ತು.

ಈ ನೃತ್ಯ ತಂಡ ಈ ವರ್ಷ ಕೈಗೊಂಡ ಈ ಹೊಸ ನೃತ್ಯ ಪರಿಕಲ್ಪನೆಯಲ್ಲಿಯೂ ರಾಷ್ಟ್ರಭಕ್ತಿಯ ಜೀವಜಾಲವನ್ನೇ ಪ್ರತೀ ಹೆಜ್ಜೆಯಲ್ಲಿಯೂ ಗೆಜ್ಜೆಯ ನಾದವಾಗಿ ಹೊರಹೊಮ್ಮಿಸಿದ್ದು ವೀಕ್ಷಕರ ಭಾವಾಂತರಂಗದಲ್ಲಿ ರೋಮಾಂಚನದ ಸೆಲೆಯನ್ನು ಹರಿಸಿಬಿಟ್ಟಿತು.ನಮೋ ನಮೋ ಭಾರತಾಂಬೆ ಸರ್ವತೀರ್ಥ ಸ್ವರೂಪಿಣಿ ಎಂಬ ಹಾಡು ಹಿನ್ನೆಲೆಯಲ್ಲಿ ತೇಲಿ ಬರುವಾಗ ಭಾರತ ಕೀರ್ತಿ ಪತಾಕೆಯ ಜೈತ್ರ ಯಾತ್ರೆಯನ್ನು ಕಣ್ಮುಂದೆ ತಂದ ನೃತ್ಯ ಕಲಾವಿದೆಯರು ಚುರುಕಿನ ಹೆಜ್ಜೆಗಳು ಮಾತಿಲ್ಲದ ಭಾವ, ಲಾಸ್ಯಗಳಲ್ಲಿಯೇ ದೇಶದ ಮಹೋನ್ನತ ಸ್ಥಾನವನ್ನು ಮುಖಮುದ್ರೆಯಲ್ಲಿ ಅಭಿವ್ಯಕ್ತಗೊಳಿಸಿದರು. ಎರಡನೆಯದು ತಾಯಿ ಎಂಬ ದೈವ ಸ್ವರೂಪಿಣಿಯು ನಮ್ಮ ಬದುಕಿನ ಉನ್ನತಿಗಾಗಿ ವಹಿಸುವ ಶ್ರಮವನ್ನು ಒಂದು ರೂಪಕವಾಗಿ ಪ್ರಸ್ತುತಪಡಿಸಿತು. ಅನ್ನಪೂರ್ಣೆ ಸದಾಪೂರ್ಣೆಯಾಗಿ ತುತ್ತು ಕೊಡುವ, ಕರಮಧ್ಯೆ ಸರಸ್ವತಿಯಾಗಿ ವಿದ್ಯೆ ನೀಡುವ ತಾಯಿಯ ಭಾವೋತ್ಕರ್ಷ ಕ್ಷಣಗಳಲ್ಲಿ ಮಿಂದೆದ್ದ ವೀಕ್ಷಕರ ಕಂಗಳಲ್ಲಿ ಭಾಷ್ಪಬಿಂದುಗಳು ಮೂಡಿದವು.

ಮೈ ನವಿರೇಳಿಸುವ ಅನುಭವ ತಂದದ್ದು ಮೂರನೆಯ ನೃತ್ಯ. ಉಸ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ನಿಬೋಧತ ಎಂಬ ಘೋಷಣೆ ಮಾಡಿ ಮಲಗಿರುವ ಯುವ ಸಮೂಹವನ್ನು ಎದ್ದೇಳಲು ಕರೆ ನೀಡಿದ ವಿಶ್ವ ವಿಜೇತ ಸ್ವಾಮಿ ವಿವೇಕಾನಂದರ ನೂರಾ ಇಪ್ಪತ್ತೈದನೆಯ ಜಯಂತಿಗೆ ಸಲ್ಲುವ ಈ ಸ್ಮರಣಾಂಜಲಿ ನಮ್ಮೊಳಗಿನ ಜಡತ್ವವನ್ನು ಬಡಿದೆಬ್ಬಿಸುವ ಜೊತೆಗೆ ವಿವೇಕಾನಂದರನ್ನೇ ಹೋಲುವ ಮುಖಮುದ್ರೆಯ ಕಲಾವಿದರೂ ರಂಗವನ್ನು ಸಂಪನ್ನಗೊಳಿಸಿದ್ದು ಭಕ್ತಿ ಭಾವವನ್ನು ಸು#ರಿಸಿತು. ಅಮರ ಆತ್ಮನೇ ಅಮರ ಪುತ್ರನೇ ಎಂಬ ಹಿನ್ನೆಲೆ ಗೀತೆ ಈ ದೃಶ್ಯಕ್ಕೆ ಪೂರಕವಾಗಿತ್ತು.

ವೈವಿಧ್ಯಮಯವಾಗಿ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ದೃಶ್ಯರೂಪಕವಾಗಿ ಚಿತ್ರಿಸುತ್ತಲೇ ಹೋದ ಕಲಾವಿದರು ಪುಣ್ಯಕ್ಷೇತ್ರಗಳಾದ ಅಯೋಧ್ಯೆ, ಮಥುರೆ, ಕಾಶಿಗಳ ಮಹಿಮೆಯನ್ನು ಕಣ್ಮುಂದೆ ತಂದರು. ಗಾವೋ ವಿಶ್ವಸ್ಯ ಮಾತರಃ ಎಂದು ಸಾರಿದ ದೇಶದಲ್ಲಿ ಗೋವಿನ ದುಸ್ಥಿತಿಗೆ ಕನ್ನಡಿ ಹಿಡಿಯಿತು ಪುಣ್ಯಕೋಟಿ ಎಂಬ ನೃತ್ಯ ವೈಭವ. ಪುಣ್ಯಪುರುಷರೆನಿಸಿಕೊಂಡ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜರು, ವ್ಯಾಸರಾಯರು, ಬಸವಣ್ಣ, ನಾರಾಯಣ ಗುರುಗಳ ಕೊಡುಗೆಯನ್ನೂ ಸ್ಮರಿಸಿದ್ದು ನೃತ್ಯದ ಮೂಲಕವೇ. ಜೀವಜಲ ಗಂಗೆಯ ಶೋಚನೀಯ ಸ್ಥಿತಿಗೂ ಕನ್ನಡಿ ಹಿಡಿಯುವ ಸಮರ್ಥ ಕಾರ್ಯ ನೃತ್ಯದಷ್ಟೇ ಪರಿಪಕ್ವವಾಗಿ ಆದರ್ಶ ಗೋಖಲೆಯವರ ನಿರೂಪಣಾ ಶೈಲಿಯಲ್ಲಿಯೂ ಅನುರಣಿಸಿತು.

ಎಲ್ಲ ಕಲಾವಿದರೂ ನೃತ್ಯ ಮತ್ತು ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಕಲೆಯಲ್ಲಿ ಪಾರಂಗತರು. ವಿ| ದೀಪ್ತಿ ಭರಣೇಕರ್‌, ವಿ| ಭಾಗ್ಯಶ್ರೀ ಶೆಟ್ಟಿ, ನೇಹಾ, ಕವನಶ್ರೀ, ಹರ್ಷಿತಾ ಗಟ್ಟಿ, ಅನನ್ಯಾ ಆಚಾರ್ಯ, ನಿಖೀತಾ, ಶಿವಲೀಲಾ, ಛಾಯಾಶ್ರೀ, ವಿಜಿತಾ ಶೆಟ್ಟಿ, ಸಂಗೀತಾ ಮಯ್ಯ, ಶ್ರುತಿ, ಕ್ಷವಾರಾ ರಾಜ್‌, ಸಿಂಚನಾ ಕುಲಾಲ್‌, ಗಗನಾ, ಮೇಧಾ, ಆಳ್ವಾಸ್‌ ಕಾಲೇಜಿನ ಉಪನ್ಯಾಸಕರಾದ ಸುಧೀಂದ್ರ ಜೆ. ಶಾಂತಿ, ವಿದ್ಯಾರ್ಥಿ ಸುಮನ್‌ ಶೆಟ್ಟಿ, ಮೇಘಾಲಯದ ಪುಟಾಣಿ ಡಕಾರು, ಪ್ರಸಾಧನ ಕಲೆಯ ಮೂಲಕ ರಂಗವೈಭವವನ್ನು ಪರಿಪೂರ್ಣಗೊಳಿಸಿದ ಸುನಿಲ್‌ ಉಚ್ಚಿಲ ಇವರಲ್ಲದೆ ಗೀತೆಗಳನ್ನು ರಚಿಸಿದ ವಿ. ವಿ. ಗೋಪಾಲ್‌, ಸಂಗೀತ ಸಂಯೋಜಿಸಿದ ಶಂಕರ ಶಾನುಭಾಗ್‌ ಇವರ ದುಡಿಮೆ ಹೃದಯಂಗಮವಾದ ನೃತ್ಯ ರಸಾಭಿಷೇಚನದ ಜೊತೆಗೆ ಪುಣ್ಯಭೂಮಿಯ ಬಗೆಗೆ ವೀಕ್ಷಕರ ಹೃದಯದಲ್ಲಿಯೂ ಭಕ್ತಿಭಾವದ ತರಂಗಗಳನ್ನು ಬಡಿದೆಬ್ಬಿಸಲು ಸಫ‌ಲವಾಯಿತು.

-ಪ.ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.