ಋಣಾತ್ಮಕ ಅಭಿಪ್ರಾಯವನ್ನು ಧನಾತ್ಮಕವಾಗಿಸೋಣ!
Team Udayavani, May 3, 2019, 6:00 AM IST
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಪ್ರಯತ್ನಪಡುತ್ತಿರುತ್ತಾನೆ. ಪ್ರಯತ್ನ ಗೆಲುವಿನ ಪ್ರಥಮ ಹೆಜ್ಜೆ. ಯಾವುದೇ ಒಬ್ಬ ವ್ಯಕ್ತಿ ಪ್ರಯತ್ನ ಮಾಡದೆ ಗೆಲುವನ್ನು ಸಾಧಿಸುವುದು ಅಸಾಧ್ಯ. ಹೀಗೆ ತನ್ನ ಪ್ರಯತ್ನದಲ್ಲಿ ತೊಡಗಿರುವ ವ್ಯಕ್ತಿಯ ಬಗ್ಗೆ ಬೇರೆಯವರು ಮಾತನಾಡುವುದು ಸಹಜ. ಇದು ಮಾನವನ ಸಹಜ ಗುಣ. ತನಗೆ ಏನೂ ಸಾಧಿಸಲು ಸಾಧ್ಯವಾಗದಿದ್ದರೂ ಬೇರೆಯವರ ಬಗ್ಗೆ ಮಾತನಾಡಬೇಕು. ನಮ್ಮ ಬಗ್ಗೆ ಒಳ್ಳೆಯದಾಗಿ ಮಾತನಾಡಿದರೆ, ನಮಗೆ ಖುಷಿಯಾಗುತ್ತದೆ. ಆದರೆ, ನೆಗೆಟಿವ್ ಕಮೆಂಟ್ಸ್‌ಗಳು ಬಂದರೆ ತುಂಬಾ ಬೇಸರ ಪಡುತ್ತೇವೆ.
ನೆಗೆಟಿವ್ ಕಮೆಂಟ್ಸ್‌ಗಳಿಗೆ ತಲೆಕೆಡಿಸಿಕೊಂಡು ತಮ್ಮ ಪ್ರಯತ್ನವನ್ನು ನಿಲ್ಲಿಸುವವರು ಹಲವರು. ಅಂತಹವರಲ್ಲಿ ಬಹುಶಃ ನಾನೂ ಒಬ್ಬಳು. ಯಾಕೆಂದರೆ, ನಾನು ಜೀವನದಲ್ಲಿ ಕಂಡ ಅನೇಕ ಜನರು ಹೇಗೆ ಎಂದರೆ ಏನು ಮಾಡಿದರೂ ತಪ್ಪನ್ನು ಹುಡುಕುವವರು. ಮೊಸರಲ್ಲೂ ಕಲ್ಲನ್ನು ಹುಡುಕುವಂತೆ ಪ್ರತಿ ಪ್ರಯತ್ನದಲ್ಲೂ ತಪ್ಪನ್ನು ಹುಡುಕುತ್ತಾರೆ. ತಮ್ಮ ಜೀವನದಲ್ಲಿ ನಡೆಯುವ ವಿಚಾರಗಳು, ತಾವು ಮಾಡುವ ತಪ್ಪುಗಳನ್ನು ಕಂಡುಕೊಳ್ಳುವ ಬದಲು ಬೇರೆಯವರ ಜೀವನದ ಬಗ್ಗೆ ಮಾತನಾಡುವ ಆ ಜನರ ಬಗ್ಗೆ ಏನು ಹೇಳಬೇಕು!
ನಾನು ಕೂಡ ಅನೇಕ ನೆಗೆಟಿವ್ ಕಮೆಂಟ್ಸ್‌ಗಳನ್ನು ಕೇಳಿ ನನ್ನ ಕೆಲವೊಂದು ಭಾಗವಹಿಸುವಿಕೆಯ ಕ್ಷೇತ್ರವನ್ನು ಬಿಟ್ಟುಬಿಟ್ಟೆ. ಅನೇಕ ಅವಕಾಶಗಳು ಬಂದರೂ ಅದನ್ನು ತಿರಸ್ಕರಿಸು ತ್ತಿದ್ದೆ. ನಾನು ಯಾವ ವಿಷಯದಲ್ಲೂ ಭಾಗವಹಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದೆ. ಆದರೆ, ಕೊನೆಗೆ ನನಗೆ ಅರಿವಾಯಿತು ಈ ಕಮೆಂಟ್ಸ್‌ಗಳ ಬಗ್ಗೆ ಯೋಚಿಸುವುದರಿಂದ ಏನೂ ಪ್ರಯೋಜನವಿಲ್ಲ. ಅದೇ ನೆಗೆಟಿವ್ ಕಮೆಂಟ್ಸ್ ಗಳನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಲು ನಿರ್ಧರಿಸಿದೆ. ನನ್ನ ಬಗ್ಗೆ ಯಾರೂ ಏನೂ ಹೇಳುವರೋ, ಅವರ ಎದುರು ನಾನು ಅದೇ ವಿಷಯದಲ್ಲಿ ಸಾಧಿಸಿ ತೋರಿಸಬೇಕೆಂದು ಪಣತೊಟ್ಟೆ. ಇಂದಿಗೂ ಕೂಡ ನಾನು ಅದೇ ಸಾಧನೆಯ ಪ್ರಯತ್ನದಲ್ಲಿದ್ದೇನೆ.
ಆದ್ದರಿಂದ ಸ್ನೇಹಿತರೇ, ಏನೇ ಆದರೂ ನೆಗೆಟಿವ್ ಕಮೆಂಟ್ಸ್‌ಗಳನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ. ಆ ನೆಗೆಟಿವ್ ಕಮೆಂಟ್ಸ್‌ಗಳಲ್ಲಿಯೇ ಪಾಸಿಟಿ ವಿಟಿ ಯನ್ನು ಕಂಡುಕೊಳ್ಳಿ. ಆ ಪಾಸಿಟಿವಿಟಿ ನಮ್ಮ ಜೀವನದಲ್ಲಿ ಸಾಧಿಸಲು ಅವಕಾಶ ಮಾಡಿಕೊಡುತ್ತದೆ. ನೆಗೆಟಿವ್ ಕಮೆಂಟ್ಸ್‌ಗಳ ಬಗ್ಗೆ ಯೋಚಿಸುತ್ತ ಹೋದರೆ ನಮ್ಮ ಜೀವನವೇ ಹಾಳಾಗಿ ಹೋಗುತ್ತದೆ.
-ಶ್ರಾವ್ಯಾ ಎನ್.ಕೆ.
ದ್ವಿತೀಯ ಬಿ.ಕಾಂ.ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು, ಸವಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.