ಕಲಬುರಗಿ ಪಾಲಿಕೆಗೆ ಕೂಡಿ ಬಾರದ ಚುನಾವಣೆ ಮುಹೂರ್ತ

ಅವಧಿ ಮುಗಿದಿದ್ದರೂ ಚುನಾವಣೆಗೆ ಸಿಗದ ಹಸಿರು ನಿಶಾನೆ

Team Udayavani, May 3, 2019, 9:52 AM IST

3-May-1

ಕಲಬುರಗಿ ಮಹಾನಗರ ಪಾಲಿಕೆ ಕಟ್ಟಡ.

ಕಲಬುರಗಿ: ಕಳೆದ 2013ರಲ್ಲೇ ಪಾಲಿಕೆ ಚುನಾವಣೆ ನಡೆದು ಈಗ 6 ವರ್ಷಗಳಾದರೂ ಕಲಬುರಗಿ ಪಾಲಿಕೆಗೆ ಚುನಾವಣೆ ಮುಹೂರ್ತ ಕೂಡಿ ಬರುತ್ತಿಲ್ಲ.

ಚುನಾವಣೆ 2013ರಲ್ಲಿ ಚುನಾವಣೆ ನಡೆದು ನೂತನ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರೂ 2014ರ ಏಪ್ರಿಲ್ 2ರಂದು ಸದಸ್ಯರ ಆಡಳಿತ ಅಸ್ತಿತ್ವಕ್ಕೆ ಬಂದಿದ್ದರಿಂದ ಇದೀಗ ಐದು ವರ್ಷಗಳು ಪೂರ್ಣಗೊಂಡಿದ್ದರಿಂದ ಚುನಾವಣೆ ಘೋಷಣೆಯಾಗಬೇಕಿತ್ತು. ಆದರೆ ವಾರ್ಡ್‌ ಮೀಸಲಾತಿ ಗೊಂದಲದಿಂದ ಚುನಾವಣೆ ಮುಂದಕ್ಕೆ ಹೋಗಿದೆ. ಹೀಗಾಗಿ ಕಲಬುರಗಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಸ್ಥಳೀಯ ನಗರ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿಲ್ಲ. ಹೀಗಾಗಿ ಸೂರ್ಯನಗರಿ ಮಿನಿ ಎಲೆಕ್ಷನ್‌ ಸಮರದಿಂದ ಕೊಂಚ ದೂರವಿರುವ ಸಾಧ್ಯತೆ ಇದೆ. ಒಂದು ವೇಳೆ ಅಧಿಸೂಚನೆಯೊಳಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್ ತೋರಿಸಿದರೆ ಮಾತ್ರ ನಡೆಯಲಿದೆ. ಆದರೆ ಮೀಸಲಾತಿ ಸಂಬಂಧ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಮುಂದಿನ ತಿಂಗಳು ಮೇ. 28ಕ್ಕೆ ನಿಗದಿಯಾಗಿದೆ.

ರಾಜ್ಯ ಚುನಾವಣಾ ಆಯೋಗ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಚುನಾವಣೆ ಘೋಷಣೆ ಮಾಡಿದೆ. ಆದರೆ, ಅದರೊಟ್ಟಿಗೆ ಅವಧಿ ಮುಗಿದಿರುವ ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ, ಈ ವಾರ್ಡ್‌ಗಳ ಪುನರ್‌ವಿಂಗಡಣೆ ಅವೈಜ್ಞಾನಿಕವಾಗಿ ಮಾಡಲಾಗಿದೆ. ಅಲ್ಲದೇ ಮೀಸಲಾತಿ ನಿಗದಿ ನಿಯಮದಂತೆ ಮಾಡಿಲ್ಲ ಎಂದು ಪಾಲಿಕೆ ಸದಸ್ಯರಾಗಿದ್ದ ಹುಲಿಗೆಪ್ಪ ಕನಕಗಿರಿ, ಪರಶುರಾಮ ನಸಲವಾಯಿ ಇನ್ನಿತರರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆ ಅರ್ಜಿ ಪರಿಗಣಿಸಿ ಗುಲ್ಬರ್ಗ ಹೈಕೋರ್ಟ್‌ ಪೀಠ ಕೆಲವು ದಿನಗಳ ಹಿಂದೆಯೇ ಚುನಾವಣೆಗೆ ತಡೆಯನ್ನು ನೀಡಿ ಸರ್ಕಾರ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮತ್ತಿತರ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿತ್ತು.

ತಡೆಯಾಜ್ಞೆ ಇರುವುದರಿಂದ ಮತ್ತು ವಾರ್ಡ್‌ಗಳ ಪುನರ್‌ವಿಂಗಡನೆ ಮತ್ತು ಮೀಸಲಾತಿ ಸರಿಪಡಿಸುವ ಕುರಿತು ನ್ಯಾಯಪೀಠ ನೀಡುವ ತೀರ್ಪಿನ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಪಾಲಿಕೆಗೆ ಚುನಾವಣೆ ನಡೆಯುವುದಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಅಧಿಸೂಚನೆ ಪ್ರಕಟಿಸುವುದರೊಳಗೆ ಹೈಕೋರ್ಟ್‌ ಅರ್ಜಿಯನ್ನು ವಿಲೇವಾರಿ ಮಾಡಿದರೆ ಮಾತ್ರ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಜಿಲ್ಲೆಯ ಜನರು ಲೋಕಸಭೆ ಚುನಾವಣೆ ಬಳಿಕ ಈಗ ಚಿಂಚೋಳಿ ಉಪಚುನಾವಣೆ ಗುಂಗಿನಲ್ಲಿದ್ದಾರೆ. ಅದರೊಳಗೆ ಪಾಲಿಕೆ ಚುನಾವಣೆ ಮುಗಿದಿದ್ದರೆ ಒಟ್ಟೊತ್ತಿಗೆ ಚುನಾವಣೆ ಮುಗಿದಂತಾಗುತ್ತಿತ್ತು. 2013ರ ರ ಮುಂಚಿನ ಪಾಲಿಕೆ ಸದಸ್ಯರ ಅವಧಿಯೂ ಆರು ವರ್ಷಗಳ ಕಾಲ ಇತ್ತು ಎನ್ನುವುದು ಮತ್ತೂಂದು ವಿಶೇಷ. ಐದು ವರ್ಷಗಳ ಕಾಲ ಪಾಲಿಕೆ ಸದಸ್ಯತ್ವ ಅವಧಿವಿದ್ದರೂ ಚುನಾವಣೆ ನಡೆದ ತಕ್ಷಣ ಮೇಯರ್‌ ಚುನಾವಣೆ ನಡೆಯದೇ ಆರು ತಿಂಗಳು ಇಲ್ಲವೇ ವರ್ಷ ಕಾಲ ಸಮಯದೂಡುವುದರಿಂದ ಮೇಯರ್‌ ಚುನಾವಣೆ ದಿನದಿಂದಲೇ ಅವಧಿ ಪ್ರಾರಂಭವಾಗುವುದರಿಂದ ಹೀಗೆ ಆರೇಳು ವರ್ಷಕ್ಕೊಮ್ಮೆ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

SIddu-Phone

Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್‌ಪಿಗೆ ಕರೆ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.