ಮೈತ್ರಿ ತರಲಿದೆಯೇ ಕೈ ಅಭ್ಯರ್ಥಿಗೆ ವರ?

ಅಭಿವೃದ್ಧಿ-ಮೋದಿ ಅಲೆ ಮೇಲೆ ಬಿಜೆಪಿಗೆ ವಿಶ್ವಾಸ•ಮೈತ್ರಿ ಲಾಭದ ನಿರೀಕ್ಷೆಯಲ್ಲಿ ಉಭಯ ಪಕ್ಷಗಳು

Team Udayavani, May 3, 2019, 1:08 PM IST

3-May-18

ಹರಪನಹಳ್ಳಿ ಕ್ಷೇತ್ರ

ದಾವಣಗೆರೆ: ದಾವಣಗೆರೆಯಿಂದ ಜಿಲ್ಲೆಯಿಂದ ಬೇರ್ಪಟ್ಟು ತನ್ನ ಮೂಲ ಜಿಲ್ಲೆ ಬಳ್ಳಾರಿ ತೆಕ್ಕೆಗೆ ಸೇರಿದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಇರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2014ರ ಚುನಾವಣೆಗಿಂತ ಈ ಬಾರಿ ಮತದಾನ ಪ್ರಮಾಣದಲ್ಲಿ ಹೇಳಿಕೊಳ್ಳುವಷ್ಟೇನೂ ವ್ಯತ್ಯಾಸ ಆಗಿಲ್ಲ.

ರಾಜ್ಯದ ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಒಂದಾಗಿರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಶೇ. 75.89 ಮತದಾನ ಆಗಿದ್ದರೆ, ಈ ಬಾರಿ ಶೇ. 75.78 ಮತದಾನ ಆಗಿದೆ.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಒಟ್ಟು 191,177 ಮತದಾರರ ಪೈಕಿ ಒಟ್ಟು 1,45,845 ಮಂದಿ ಮತದಾನ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ 1,04,356 ಪುರುಷರು, 99,739 ಮಹಿಳೆಯರು ಹಾಗೂ 18 ಮಂದಿ ಇತರರು ಒಳಗೊಂಡಂತೆ 2,04,113 ಮತದಾರರು ಇದ್ದರು. ಕಳೆದ ಚುನಾವಣೆಗಿಂತ ಈ ಬಾರಿ 12,936 ಮತದಾರರು ಹೆಚ್ಚಾಗಿದ್ದಾರೆ.

ಕಳೆದ ಏ.23ರಂದು ನಡೆದ ಚುನಾವಣೆಯಲ್ಲಿ 1,04,356 ಪುರುಷ ಮತದಾರರಲ್ಲಿ 80,613 ಹಾಗೂ 99,739 ಮಹಿಳಾ ಮತದಾರರ ಪೈಕಿ 74,073 ಮಂದಿ ಮತದಾನ ಮಾಡಿದ್ದಾರೆ. ಇತರೆ 18 ಮಂದಿಯಲ್ಲಿ ಒಬ್ಬರೂ ಕೂಡ ಮತ ಚಲಾಯಿಸಿಲ್ಲ. ಈ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಒಟ್ಟು 1,54,686 ಮಂದಿ ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದವರು 8,841 ಮತದಾರರು ಹೆಚ್ಚಾಗಿದ್ದರೂ ಮತದಾನ ಪ್ರಮಾಣ .11% ಇಳಿಕೆ ಆಗಿದೆ.

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಭಾರತೀಯ ಜನತಾ ಪಕ್ಷದ ಜಿ.ಕರುಣಾಕರ ರೆಡ್ಡಿ ಶಾಸಕರು. 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಎಂ.ಪಿ.ರವೀಂದ್ರರನ್ನು 9,647 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆ ಚುನಾವಣೆಯಲ್ಲಿ ಜಿ.ಕರುಣಾಕರ ರೆಡ್ಡಿ 67,603 ಮತ ಪಡೆದಿದ್ದರೆ, ಎಂ.ಪಿ.ರವೀಂದ್ರ 57,956 ಮತ ಗಳಿಸಿದ್ದರು. ಬಿಜೆಪಿ ಟಿಕೆಟ್ ಸಿಗದೇ ಜೆಡಿಎಸ್‌ ಸೇರಿ ಆ ಪಕ್ಷದಿಂದ ಸ್ಪರ್ಧಿಸಿದ್ದ ಅರಸೀಕರೆ ಕೊಟ್ರೇಶ್‌ಗೆ 37,685 ಮತ ದೊರೆತಿದ್ದವು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಕಷ್ಟಸಾಧ್ಯ ಎಂಬ ಮಾತು ಆ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ಗಿಂತ 19 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದರು.

ಈಗ ಸದ್ಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಏ.23ರಂದು ನಡೆದ ಲೋಕಸಭಾ ಮತದಾನ ಕುರಿತು ಜಾತಿವಾರು ಲೆಕ್ಕಾಚಾರ ನಡೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪರ ಪರ ದಿವಂಗತ ಮಾಜಿ ಶಾಸಕ ಎಂ.ಪಿ.ರವೀಂದ್ರರ ಸಹೋದರಿ ಎಂ.ಪಿ.ಲತಾ ಹಾಗೂ ಜೆಡಿಎಸ್‌ನ ಅರಸೀಕೆರೆ ಎನ್‌.ಕೊಟ್ರೇಶ್‌ ಪ್ರಚಾರ ನಡೆಸಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ ಪರ ಶಾಸಕ ಜಿ.ಕರುಣಾಕರರೆಡ್ಡಿ ಕ್ಷೇತ್ರದಲ್ಲಿ ಸಂಚರಿಸಿ ಬಡ ಜನರಿಗೆ ಅಕ್ರಮ ಸಕ್ರಮದಡಿಯಲ್ಲಿ ಪಟ್ಟಾ ವಿತರಣೆ, ಅಭಿವೃದ್ಧಿ ಕಾರ್ಯಗಳ ಆಧರಿಸಿ ಮತಯಾಚಿಸಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಮತ್ತು ಯುವ ಮತದಾರರ ಒಲವು ಕಂಡು ಬರುತ್ತಿರುವುದರಿಂದ ಈ ಬಾರಿಯೂ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಮುನ್ನಡೆ ಸಾಧಿಸಲಿದ್ದಾರೆ ಎಂಬುದು ಕಮಲ ಪಾಳೆಯದ ಲೆಕ್ಕಾಚಾರ.

ಆದರೆ, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ಬಿಟ್ಟರೆ ಸಿದ್ದೇಶ್ವರ್‌ ಪರ ಸ್ಟಾರ್‌ ಪ್ರಚಾರಕರ್ಯಾರು ಆಗಮಿಸಲಿಲ್ಲ. ಇನ್ನೊಂದೆಡೆ ಶಾಸಕ ಜಿ.ಕರುಣಾಕರರೆಡ್ಡಿ ಜೊತೆ ಮುನಿಸಿಕೊಂಡಿರುವ ಕ್ಷೇತ್ರದ ಬಿಜೆಪಿ ಪ್ರಭಾವಿ ಮುಖಂಡರು ಪ್ರತ್ಯೇಕವಾಗಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಬೇಟೆ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಕಾಂಗ್ರೆಸ್‌ ಸಂಪ್ರದಾಯಿಕ ಮತಗಳ ಜೊತೆಗೆ ಜೆಡಿಎಸ್‌ ಮತಗಳು ಸೇರುವುದರಿಂದ ಎಚ್.ಬಿ. ಮಂಜಪ್ಪರಿಗೆ ಹೆಚ್ಚು ಲೀಡ್‌ ದೊರೆಯಲಿದೆ ಎಂಬುವುದು ಮೈತ್ರಿ ಪಾಳೆಯದ ಮುಖಂಡರ ಅಭಿಪ್ರಾಯ. ಯಾವ ಅಭ್ಯರ್ಥಿಗೆ ಲೀಡ್‌ ಬರಬಹುದು ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆಯೇ ಹೊರತು ಬೆಟ್ಟಿಂಗ್‌ ಮಾತು ಕೇಳಿ ಬರುತ್ತಿಲ್ಲ.

ಎನ್‌.ಆರ್‌. ನಟರಾಜ್‌

ಟಾಪ್ ನ್ಯೂಸ್

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

4

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

13

Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.