ಮರುಳ ಸಿದ್ಧೇಶ್ವರ ಮಹಾ ರಥೋತ್ಸವ
Team Udayavani, May 4, 2019, 6:00 AM IST
ಮೇ 4ರ ಅಕ್ಷಯ ತದಿಗೆ ಅಮವಾಸ್ಯೆಯಂದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗೆ ಕಂಕಣಧಾರಣೆ ಮಾಡುವುದರೊಂದಿಗೆ ಪ್ರತಿ ದಿವಸದ ವಾಹನೋತ್ಸವಗಳು ಜರುಗುತ್ತವೆ. 9ನೇ ತಾರೀಖು ಗುರುವಾರದಂದು ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಲಿದೆ. ಮಾರನೆ ದಿನ ತೈಲಾಭಿಷೇಕ.
ವೀರಶೈವ ಧರ್ಮ ಪ್ರವರ್ತಕರೆಂದು ಹೆಸರಾದ ಪಂಚಪೀಠಗಳಲ್ಲಿ ಪೀಠವೇ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠ ಒಂದು. ಶ್ರೀ ಜಗದ್ಗುರು ಮರುಳಾರಾಧ್ಯರು ಇದರ ಸ್ಥಾಪಕರು. ಈಗ ಪರಂಪರೆಯನ್ನು ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮಿಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಇತಿಹಾಸ
ಈ ಪರಂಪರೆಯ ಶ್ರೀ ದಾರುಕರು ಹಿಂದುಳಿದ ಜಾತಿಯ ಕೀಲಿಗನಾದ ದಧೀಚಿಗೆ ಶಿವಾದ್ವೆ„ತವನ್ನು ಭೋದಿಸಿ, ಕುಲ ಹದಿನೆಂಟು ಜಾತಿಯನ್ನು ಉದ್ದರಿಸಿದ ಸಮಾಜ ಪರಿವರ್ತನ ಮಹಾಪ್ರವರ್ತಕರು.
ಶ್ರೀ ಮರುಳಾರಾಧ್ಯ ಭಗತ್ಪಾದರು ಉಜ್ಜಯನಿಯ ಮಹಾರಾಜ ಶೌÅ$›ತಪಾಲ ಹಾಗೂ ರಾಣಿ ಭಾನುಮತಿ ಇವರಿಗೆ ಇಷ್ಟಲಿಂಗ ಧೀಕ್ಷೆ ಅನುಗ್ರಹಿಸಿ ಶಕ್ತಿ ವಿಶಿಷ್ಟಾದ್ವೆ„ತವನ್ನು ಉಪದೇಶಿಸಿದ್ದಾರೆ.
ಕಾಲಾಂತರದಲ್ಲಿ ಉಜ್ಜಯಿನಿ ಸಾಮ್ರಾಜ್ಯದ ಅಂದಿನ ರಾಜರುಗಳ ಉಪಟಳ, ಅನ್ಯಧರ್ಮಿಯರ ಕಿರುಕುಳ ಹಾಗೂ ಜಾತಿ ನಿಂದನೆಗಳನ್ನು ಸಹಿಸಲಾಗದೆ ಶ್ರೀ ಮರುಳಸಿದ್ದ ಶಿವಾಚಾರ್ಯರು ಶಿಷ್ಯ ಸಮೇತರಾಗಿ ದಕ್ಷಿ$ಣ ಭಾರತದ ಈಗಿನ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲ್ಲೂಕು ಪ್ರದೇಶಕ್ಕೆ ಬಂದು ಶ್ರೀಪೀಠವನ್ನು ಪುನರ್ ಪ್ರತಿಷ್ಟಾಪಿಸಿದರು.
ತೈಲಾಭಿಷೇಕ
ಮಹಾರಾಜ ವಿಕ್ರಮಾದಿತ್ಯನಿಗೆ ಬಂದೊದಗಿದ ಕಷ್ಟದ ನಿವಾರಣೆಗೆ ತಮ್ಮ ಇಷ್ಟಲಿಂಗ ತೈಲಾಭಿಷೇಕದ ಮೂಲಕ ಕಷ್ಟ ಪರಿಹಾರ ಮಾಡಿದರು. ಇಂಥ ವಿಶಿಷ್ಟ ಧಾರ್ಮಿಕ ತತ್ವ-ಸಿದ್ದಾಂತಗಳನ್ನೂ ಒಳಗೊಂಡಿರುವ ಶ್ರೀಪೀಠವು ವರ್ಷ ದುದ್ದಕ್ಕೂ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ರಥೋತ್ಸವ ಹಾಗೂ ತೈಲಾಭಿಷೇಕದ ಸಂದರ್ಭದಲ್ಲಿ ಅನೇಕ ಧರ್ಮಸಭೆ, ಸಮಾರಂಭ, ಸಮ್ಮೇಳನ ಹಾಗೂ ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಂಡು ಮಾನವೀಯ ಮೌಲ್ಯಗಳನ್ನು ಪರಿಚಯಿಸುವ, ಸಾಮರಸ್ಯ, ಭಾವೈಕ್ಯತೆ ಹಾಗೂ ಸದ್ಭಾವನೆಗಳನ್ನು ಬೆಳೆಸುವ ಕೆಲಸ ಮಾಡುತ್ತದೆ.
ಮೇ 4ರ ಅಕ್ಷಯ ತದಿಗೆ ಅಮವಾಸ್ಯೆಯಂದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗೆ ಕಂಕಣಧಾರಣೆ ಮಾಡುವುದರೊಂದಿಗೆ ಪ್ರತಿ ದಿವಸದ ವಾಹನೋತ್ಸವಗಳು ಜರುಗುತ್ತವೆ. 9ನೇ ತಾರೀಖು ಗುರುವಾರದಂದು ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಲಿದೆ. 10ರ ಸಂಜೆ 4 ಗಂಟೆಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಾಲಯದ ಗೋಪುರದ ಶಿಖರಕ್ಕೆ ತೈಲಾಭೀಷೇಕವನ್ನು ನೆರವೇರಿಸಲಾಗುತ್ತದೆ.
ನಿರಂಜನ ದೇವರಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.