ಕುಂಜಿಬೆಟ್ಟು: ಮಕ್ಕಳ ಬೇಸಗೆ ಶಿಬಿರ
Team Udayavani, May 4, 2019, 6:19 AM IST
ಉಡುಪಿ: ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಕುಂಜಿಬೆಟ್ಟಿನ ಶ್ರೀ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಕ್ಕಳ ಬೇಸಗೆ ಶಿಬಿರ ಎ.23ರಿಂದ 27ರ ತನಕ ಜರಗಿತು.
5ನೇ ತರಗತಿಯಿಂದ 10ನೇ ತರಗತಿಯವರೆಗಿನ 80 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಡಾ| ಟಿ.ಎಂ.ಎ.ಪೈ ಆಸ್ಪತ್ರೆಯ ಮಕ್ಕಳ ತಜ್ಞ ಡಾ| ದಿನೇಶ್ ಎಂ. ನಾಯಕ್ ಶಿಬಿರ ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ದಿವಾಕರ ವಿ. ಆಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ರವಿ ಆಚಾರ್ಯ ಮುಖ್ಯ ಅತಿಥಿಯಾಗಿದ್ದರು.
ನಿವೃತ್ತ ಪ್ರಾಧ್ಯಾಪಕ ಬಿ. ಎ.ಆಚಾರ್ಯ ಮಣಿಪಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ್ ಆಚಾರ್ಯ ನಿರ್ವಹಿ ಸಿದರು. ಕಾರ್ಯದರ್ಶಿ ಸುರೇಶ ಆಚಾರ್ಯ ವಂದಿಸಿದರು.
ಶಿಬಿರದಲ್ಲಿ ಸಾವಿತ್ರಿ ಎಚ್.ಆಚಾರ್ಯ (ಸಂಗೀತ), ರಾಜೀವಿ ಆಚಾರ್ಯ (ಭಗವದ್ಗೀತೆ),ನಳಿನಿ ಸುಂದರ ಆಚಾರ್ಯ (ಯೋಗಾಭ್ಯಾಸ),ಸವಿತಾ, ಲಕ್ಷ್ಮಿ (ರಸಪ್ರಶ್ನೆ ),ವಿದ್ಯಾ ವಿಶ್ವೇಶ್ (ರಂಗೋಲಿ), ಜಯಂತ್ ಪುರೋಹಿತ್ (ಚಿತ್ರಕಲೆ),
ಬಾಲಚಂದ್ರ ಅಂಬಾಗಿಲು (ಆವೆ ಮಣ್ಣಿನ ರಚನೆ),ಜಗದೀಶ್ ಆಚಾರ್ಯ ( ಪೇಪರ್ ಕ್ರಾಪ್ಟ್ ), ಗಣಪತಿ ಆಚಾರ್ಯ ಬೆಳ್ಮಣ್(ಭಾಷಣಕಲೆ) , ಬಿ. ಎ. ಆಚಾರ್ಯ (ಶಿಕ್ಷಣ ಮಾಹಿತಿ) ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಎ.27ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಡಾ| ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶು ಪಾಲ ಡಾ| ಮಹಾಬಲೇಶ್ವರ ರಾವ್, ಟಿ. ಎ. ಪೈ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಾಪಕ ಯೋಗೀಶ್ ಆಚಾರ್ಯ ಮುಖ್ಯ ಅತಿಥಿಯವರಾಗಿದ್ದರು.
ಲಕ್ಷ್ಮೀ ಶಿಬಿರದ ವರದಿ ಮಂಡಿಸಿದರು. ಶ್ರೀನಿಧಿ ಹಾಗೂ ಶಾಲಿನಿ ಗಂಗಾಧರ್ ನಿರ್ವಹಿಸಿದರು. ಸ್ವಾತಿ ಕಟಪಾಡಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.