ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರು ತರುವ ಮಕ್ಕಳು

ವಲಸೆ ಕಾರ್ಮಿಕರಿಗೂ ನೀರಿನ ಸಮಸ್ಯೆ ;ಚರಂಡಿಯಿಂದಾಗಿ ಬಾವಿ ನೀರೂ ಉಪಯೋಗಿಸದ ಸ್ಥಿತಿ

Team Udayavani, May 4, 2019, 10:00 AM IST

Water-a

ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ತರುತ್ತಿರುವ ಮಕ್ಕಳು.

ತೆಂಕಪೇಟೆ ವಾರ್ಡ್‌ನಲ್ಲೂ ನೀರಿನ ಸಮಸ್ಯೆ ತೀವ್ರವಾಗಿದೆ. ಚರಂಡಿ ಸಮಸ್ಯೆಯಿಂದಾಗಿ ಇದ್ದ ಬಾವಿ ನೀರನ್ನೂ ಉಪಯೋಗಿಸಲಾರದ ಸಂಕಷ್ಟ ಇಲ್ಲಿನ ನಿವಾಸಿಗಳದ್ದು.

ಉಡುಪಿ: ಪ್ಲಾಸ್ಟಿಕ್‌ ಬಾಟಲುಗಳನ್ನು ಮನೆಗೆ ನೀರು ತರುತ್ತಿರುವ ಮಕ್ಕಳು. ಈ ದೃಶ್ಯ ಕಂಡು ಬಂದಿದ್ದು ನಗರದ ತೆಂಕಪೇಟೆ ವಾರ್ಡ್‌ನಲ್ಲಿ!

ಕುಡಿಯೋಕ್‌ ನೀರು ಸಿಕ್ರೆ ಸಾಕು ಬಾಗಲಕೋಟೆಯಿಂದ ವಲಸೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಅವರು ನೀರು ಕೊಂಡೊಯ್ಯುತ್ತಿದ್ದರು. ಈ ಬಗ್ಗೆ ಮನೆಯವರಲ್ಲಿ ವಿಚಾರಿಸಿದಾಗ ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಗರಸಭೆಯ ನೀರು ಸಂಪರ್ಕ ನಮಗಿಲ್ಲ. ದೂರದಲ್ಲಿರುವ ಮನೆಯವರು ನಳ್ಳಿ ನೀರು ಕೊಡುತ್ತಾರೆ. ಅದನ್ನೇ ತರುತ್ತೇವೆ ಎನ್ನುತ್ತಾರೆ ಅವರು. ನೀರು ಚೆನ್ನಾಗಿದೆಯಾ ಎಂದು ಕೇಳಿದ ಪ್ರಶ್ನೆಗೆ “ನಾವು ಅದೆಲ್ಲ ನೋಡೋಕೊಗೋದಿಲಿÅà. ಕುಡಿಯೋಕ್‌ ನೀರು ಸಿಕ್ರೆ ಸಾಕು’ ಎನ್ನುತ್ತಾರೆ ಶಾಂತಾ.

ಇನ್ನು ಕೃಷ್ಣಮಠ ಪರಿಸರದಲ್ಲಿಯೂ 3 ದಿನಕ್ಕೊಮ್ಮೆಯೇ ನೀರು ಪೂರೈಕೆ ಆಗುತ್ತಿದೆ. ನೀರಿನ ಸಮಸ್ಯೆ ಇದ್ದರೂ ಕೂಡ ಟ್ಯಾಂಕರ್‌ ನೀರು ಕೂಡ ಪೂರೈಸುತ್ತಿಲ್ಲ. ಒಂದರಿಂದ ಎರಡು ಗಂಟೆಗೊಮ್ಮೆ ನೀರು ಪೂರೈಕೆ ಮಾಡುತ್ತಾರೆ ಎನ್ನುತ್ತಾರೆ ಇಲ್ಲಿನ ನಿವಾಸಿ ವಿಜಯಾ.

ಬಾವಿ ನೀರು ಕುಡಿಯಲು ಅಯೋಗ್ಯ
ಬಾವಿ ನೀರು ಇದ್ದರೂ ಕೂಡ ಉಪಯೋಗ ಮಾಡಲಾಗದಂತಿದೆ. ಇದಕ್ಕೆ ಕಾರಣ ಡ್ರೈನೇಜ್‌ ನೀರು. ಮಳೆಗಾಲದಲ್ಲಿ ನೀರು ತುಂಬಿ ಡ್ರೈನೇಜ್‌ ನೀರು ನಮ್ಮ ಬಾವಿಗೆ ಹರಿಯುತ್ತಿದೆ. ಈ ಕಾರಣಕ್ಕಾಗಿಯೇ ಇದನ್ನು ಕುಡಿಯಲು ಉಪಯೋಗಿಸುತ್ತಿಲ್ಲ. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಮಾತ್ರ ಸದ್ಯಕ್ಕೆ ಈ ನೀರು ಬಳಕೆಯಾಗುತ್ತಿದೆ ಎನ್ನುತ್ತಾರೆ ರೇಖಾ.

ಚುನಾವಣೆ ಸಮಯ ನಿರಂತರ ನೀರು
ಚುನಾವಣೆ ಸಮಯದಲ್ಲಿ ನಿರಂತರ ನೀರು ಲಭ್ಯವಾಗುತ್ತಿತ್ತು. ಇದು ಚುನಾವಣೆ ಸಮಯಕ್ಕೆ ಮಾತ್ರವೇ ಎಂದು ನಾವೇ ಮತಪ್ರಚಾರಕ್ಕೆ ಬಂದವರಲ್ಲಿ ಕೇಳಿದ್ದುಂಟು. ಈಗ ಹಾಗೆಯೇ ಆಗಿದೆ. ಚುನಾವಣೆ ಮುಗಿದ ಮರುದಿನದಿಂದಲೇ ಮತ್ತೆ 3 ದಿನಕ್ಕೊಮ್ಮೆ ನೀರು ಎಂದು ತಿಳಿಸಲಾಯಿತು ಎಂದು ವಾಸ್ತವ ಘಟನೆಯನ್ನು ವಿವರಿಸಿದವರು ಶ್ಯಾಂ ಭಟ್‌.

ಚರಂಡಿ ನೀರಿಗೆ ಕೊರತೆ ಇಲ್ಲ!
ಬಾದ್ಯಾಸ್‌ ಕಾಂಪೌಂಡ್‌, ಪಿಪಿಸಿ ಸಂಸ್ಕೃತ ಕಾಲೇಜಿನ ಹಿಂಭಾಗದಲ್ಲಿರುವ 5ರಿಂದ 10 ಮನೆಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಡ್ರೈನೇಜ್‌ ನೀರು ಓವರ್‌ಫ್ಲೋ ಆಗಿ ಕುಡಿಯುವ ಬಾವಿ ನೀರು ಕೂಡ ಕಲುಷಿತಗೊಂಡಿವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಬಾದ್ಯಾಸ್‌ ಕಾಂಪೌಂಡ್‌ ನಿವಾಸಿಗಳು ಸ್ವಂತ ಖರ್ಚಿನಿಂದ ಟ್ಯಾಂಕರ್‌ ನೀರು ಕೂಡ ತರಿಸಿದ್ದಾರಂತೆ. ಕೆಲವೆಡೆ ಟ್ಯಾಂಕರ್‌ ಹೋಗುವಷ್ಟು ಜಾಗ ಕೂಡ ಇಲ್ಲದಿರುವುದು ಸಮಸ್ಯೆಯಾಗಿದೆ.

ಜನರ ಬೇಡಿಕೆಗಳು
– ದಿನಕ್ಕೊಮ್ಮೆಯಾದರೂ ಟ್ಯಾಂಕರ್‌ ನೀರಾದರೂ ಪೂರೈಸಿ
– ಎತ್ತರ ಪ್ರದೇಶಕ್ಕೂ ನೀರು ತಲುಪುವಂತಿರಲಿ
– ನಳ್ಳಿ ನೀರು ಸಂಪರ್ಕ ಇಲ್ಲದ ಮನೆಗಳಿಗೆ ನೀರು ಒದಗಿಸಿ
– ಲಭ್ಯವಿರುವ ಬಾವಿಗಳ ನೀರು ಪೂರೈಸಿದರೂ ಸಮಸ್ಯೆ ಪರಿಹಾರ ಸಾಧ್ಯ
– ನೀರು ಪೂರೈಕೆಯ ನಿಗದಿತ ಅವಧಿ ತಿಳಿಸಿ

ಎತ್ತರ ಪ್ರದೇಶಕ್ಕೆ ನೀರಿಲ್ಲ
ನಮ್ಮ ವಾರ್ಡ್‌ ವ್ಯಾಪ್ತಿಯ ಒಂದೆರಡು ಕಡೆ ನೀರಿನ ಸಮಸ್ಯೆ ಇದೆ. ಒಂದು ಬಾರಿ 3-4 ಮನೆಗಳಿಗೆ ಟ್ಯಾಂಕರ್‌ ನೀರು ಒದಗಿಸಲಾಗಿದೆ. ಎತ್ತರ ಪ್ರದೇಶಕ್ಕೆ ನೀರು ಸರಿಯಾಗಿ ಲಭ್ಯವಾಗುತ್ತಿಲ್ಲ.
– ಮಾನಸಾ ಸಿ. ಪೈ,
ತೆಂಕಪೇಟೆ ವಾರ್ಡ್‌ ಸದಸ್ಯರು

ಚರಂಡಿ ಸರಿಪಡಿಸಿದರೂ ಸಾಕು
ಡ್ರೈನೇಜ್‌ ನೀರಿನಿಂದಾಗಿ ಕುಡಿಯುವ ಬಾವಿ ನೀರು ಕಲುಷಿತಗೊಂಡಿದೆ. ನಗರಸಭೆ ಈ ಬಗ್ಗೆ ಕ್ರಮ ವಹಿಸಿದರೂ ಕೂಡ ನಮ್ಮ ವ್ಯಾಪ್ತಿಗೆ ತಕ್ಕಷ್ಟು ಕುಡಿಯುವ ನೀರು ಲಭ್ಯವಾಗುತ್ತದೆ ಎಂದು ಹೇಳುತ್ತಾರೆ ರಾಜಾಂಗಣ ಪಾರ್ಕಿಂಗ್‌ ಪ್ರದೇಶದಲ್ಲಿ ನಿವಾಸಿಗಳು. ಮನೆಯ ಬಾವಿಯ ಪಕ್ಕದಲ್ಲಿಯೇ ಚರಂಡಿ ಹಾದು ಹೋಗುವುದರಿಂದ ಕುಡಿಯುವ ನೀರು ಇದ್ದೂ ಉಪಯೋಗಕ್ಕಿಲ್ಲದಂತಾಗಿದೆ ಎಂಬುವುದು ಇಲ್ಲಿನ ನಿವಾಸಿಗಳ ಅಳಲು. ಸದ್ಯಕ್ಕೆ 3 ದಿನಕ್ಕೊಮ್ಮೆ ಬರುವ ನಳ್ಳಿ ನೀರನ್ನೇ ಆಶ್ರಯಿಸಿದ್ದೇವೆ. ಅದೂ ಬಾರದಿದ್ದರೆ ಸಮೀಪದ ಮನೆಯೊಂದರ ಬಾವಿ ನೀರು ತರುತ್ತೇವೆ. ಬಾವಿ ನೀರು ಕೂಡ ಬತ್ತಿ ಹೋಗಿದೆ. ಇನ್ನು ಎಷ್ಟು ದಿನ ನೀರು ಸಿಗುತ್ತದೋ ಗೊತ್ತಿಲ್ಲ. ಟ್ಯಾಂಕರ್‌ ನೀರನ್ನಾದರೂ ಒದಗಿಸಿದರೆ ಒಳ್ಳೆಯದಿತ್ತು.
 -ವಸಂತಿ, ಸ್ಥಳೀಯರು

ಉದಯವಾಣಿ ಆಗ್ರಹ
ಟ್ಯಾಂಕರ್‌ ನೀರು ಪೂರೈಸಿದರೆ ಜನರಿಗೆ ಅನುಕೂಲವಾದೀತು. ನೀರಿನ ಸಂಪರ್ಕ, ಬಾವಿಗಳು ಇಲ್ಲದ ಮನೆಗಳನ್ನು ಗುರುತಿಸಿ ಅವರಿಗಾದರೂ ಟ್ಯಾಂಕರ್‌ ನೀರು ಒದಗಿಸಿದರೆ ಒಳ್ಳೆಯದು. ನೀರು ಬಿಡುವ ನಿರ್ದಿಷ್ಟ ವೇಳೆಯನ್ನು ಮೊದಲೇ ತಿಳಿಸಿದರೆ ನಿವಾಸಿಗಳಿಗೆ ಅನುಕೂಲವಾಗುತ್ತದೆ.

ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಬರೆದು ಕಳುಹಿಸಿ.

– ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

6

Malpe ಬೀಚ್‌ ಸ್ವಚ್ಛತೆ: 3 ದಿನದಲ್ಲಿ 26 ಲೋಡ್‌ ಕಸ ಸಂಗ್ರಹ

5

Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ

4

Kaup: ಬೆಳಪು ಆಸ್ಪತ್ರೆಗೆ ವಿಟಮಿನ್‌ಎಂ ಕೊರತೆ!

3

Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

9

Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.