“ಓದಿನಿಂದ ಆಲೋಚನೆ, ವಿವೇಚನೆ ಜಾಗೃತ’
ಕೃತಿ ಬಿಡುಗಡೆ, ಅಭಿನಂದನ ಸಮಾರಂಭ
Team Udayavani, May 4, 2019, 9:50 AM IST
ಬೆಳ್ತಂಗಡಿ: ಅಧ್ಯಯನದ ವಿಸ್ತಾರದಿಂದ ಮೌಲ್ಯಯುತ ವಿಚಾರಗಳು ಬರವಣಿಗೆ ರೂಪದಲ್ಲಿ ಹೊರಹೊಮ್ಮಲು ಸಾಧ್ಯ. ಓದುವ ಹವ್ಯಾಸದಿಂದ ಪ್ರಾಪಂಚಿಕ ಜ್ಞಾನದ ಜತೆಗೆ ಆಲೋಚನೆ, ವಿವೇಚನೆ ಜಾಗೃತಗೊಳ್ಳುತ್ತದೆ ಎಂದು ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅಭಿಪ್ರಾಯಪಟ್ಟರು.
ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ಕೃತಿ ಬಿಡುಗಡೆ, ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿ, ಬರಹಗಾರನಲ್ಲಿ ವಿಷಯಗಳ ನಿಖರತೆ ಸ್ಪಷ್ಟವಾಗಿರಬೇಕಾಗುತ್ತದೆೆ. ಇದು ಓದು ಗರ ಆವಶ್ಯಕತೆಗೆ ಅನುಗುಣವಾಗಿ ವಿಷಯ ಮೇಲಿನ ಪ್ರೌಢಿಮೆ ಹೊಂದಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಕೃತಿಯ ಸದುಪಯೋಗ ಪಡೆದು ಕೊಳ್ಳುವಂತೆ ತಿಳಿಸಿದರು.
ಕುವೆಂಪು ವಿವಿ ಸಹಾಯಕ ಪ್ರಾಧ್ಯಾ ಪಕ, ಲೇಖಕ ಡಾ| ಸತೀಶ್ ಕುಮಾರ್ ಅಂಡಿಂಜೆ ಮಾತನಾಡಿ, ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಬರೆಯ ಲಾಗಿರುವ ಕೃತಿಗಳ ಅಧ್ಯಯನದಿಂದ ಮಹತ್ವದ ವಿಷಯಗಳ ಅನಾವರಣ ವಾಗಲಿದೆ ಎಂದರು.
ಡಾ| ಸತೀಶ ಕುಮಾರ್ ಅಂಡಿಂಜೆ ಬರೆದ ಭಾರತೀಯ ಮಾಧ್ಯಮ ಕಾನೂನುಗಳು ಮತ್ತು ನೀತಿ ಸಂಹಿತೆ, ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಎನ್.ಕೆ. ಪದ್ಮನಾಭ ಅವರ ದಿಗªರ್ಶನ ಧ್ವನಿ ಹಾಗೂ ಡಾ| ಹಂಪೇಶ್ ಕೆ.ಎಸ್. ಅವರ ಸಂಪಾದನೆ ಕೃತಿಯನ್ನು ಡಾ| ಬಿ. ಯಶೋವರ್ಮ ಬಿಡುಗಡೆಗೊಳಿಸಿದರು.
ಉಪಯುಕ್ತ ಕೃತಿಗಳು
ಆರೋಗ್ಯ ಮತ್ತು ಜ್ಞಾನ ಎರಡು ವಿಷಯಗಳಲ್ಲಿ ಮುಂಚಿತ ಅಧ್ಯಯನ ಅವಶ್ಯ. ಸಾಮಾನ್ಯ ಜ್ಞಾನದ ಪರಿಕಲ್ಪನೆ ಪಡೆದಲ್ಲಿ ವಿಷಯಗಳ ಮೇಲಿನ ರಚನಾತ್ಮಕ ಸಂವೇದನೆ ಸಾಧ್ಯ. ಪತ್ರಿಕಾ ವಿದ್ಯಾರ್ಥಿಗಳು ಹಾಗೂ ಪತ್ರಿಕೋದ್ಯಮದ ಅಧ್ಯಯನ ದೃಷ್ಟಿಯಿಂದ ಕೃತಿಗಳು ಉಪಯುಕ್ತವಾಗಿವೆ.
– ಡಾ| ಬಿ. ಯಶೋವರ್ಮ, ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.