ಅಜರ್ ನಿಷೇಧ ಮುಂದೂಡಲು ಪಾಕ್ ಯತ್ನ!
ಮೇ 15ರವರೆಗೆ ಮುಂದೂಡಿಸಲು ಯತ್ನ
Team Udayavani, May 4, 2019, 6:00 AM IST
ಹೊಸದಿಲ್ಲಿ: ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಪಾಕಿಸ್ಥಾನದ ಮಸೂದ್ ಅಜರ್ನನ್ನು ಮೇ 1ರಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಜಾಗತಿಕ ಉಗ್ರ ಎಂದು ಘೋಷಿಸಲಾಗಿತ್ತು. ಇದನ್ನು ಮೋದಿ ನೇತೃತ್ವದ ಭಾರತ ಸರಕಾರಕ್ಕೆ ದಕ್ಕಿದ ಭಾರೀ ರಾಜತಾಂತ್ರಿಕ ವಿಜಯ ಎನ್ನಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ ಈ ಘೋಷಣೆಯನ್ನು ಸಾಧ್ಯವಾದಷ್ಟು ಮುಂದೂಡಲು ಪಾಕಿಸ್ಥಾನ ರಹಸ್ಯ ಯತ್ನ ನಡೆಸಿತ್ತು. ಚೀನಾದ ಮೇಲೆ ಒತ್ತಡ ಹೇರಿದ್ದ ಅದು, ಗರಿಷ್ಠ ಮೇ 15ರವರೆಗೆ ಘೋಷಣೆಯನ್ನು ಮುಂದೂಡಲು ವಿಶ್ವಸಂಸ್ಥೆಯ ದಿಗ್ಬಂಧನ ಸಮಿತಿ ಮುಖ್ಯಸ್ಥ ದೇಶ, ಇಂಡೊನೇಷ್ಯಾಕ್ಕೆ ತಿಳಿಸಿ ಎಂದು ಕೋರಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಆದರೆ ಇಂಡೊನೇಷ್ಯಾ ಈ ಬೇಡಿಕೆಯನ್ನು ಖಡಕ್ಕಾಗಿ ತಳ್ಳಿ ಹಾಕಿತ್ತು. ಅನಿವಾರ್ಯವಾಗಿ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಒಪ್ಪಿಕೊಂಡಿತ್ತು. ಅಜರ್ನನ್ನು ಜಾಗತಿಕ ನಿಷೇಧಕ್ಕೊಳಪಡಿಸುವುದು ತಡವಾದಷ್ಟೂ, ಮೋದಿ ನೇತೃತ್ವದ ಸರಕಾರ ಪ್ರಸ್ತುತ ಭಾರತ ದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಲಾಭ ಪಡೆಯುವುದು ಕಡಿಮೆಯಾಗುತ್ತದೆ ಎನ್ನುವುದು ಪಾಕ್ ಲೆಕ್ಕಾಚಾರ ಎನ್ನಲಾಗಿದೆ.
ಪಾಕ್ ವಿಶ್ವದಲ್ಲೇ 3ನೇ ಗರಿಷ್ಠ ನಿಷೇಧಿತರ ರಾಷ್ಟ್ರ: ಮಸೂದ್ ಅಜರ್ ಜಾಗತಿಕ ಉಗ್ರ ಎಂದು ಘೋಷಿಸಲ್ಪಡುವುದರೊಂದಿಗೆ, ನಿಷೇಧಿತ ಉಗ್ರರು, ಸಂಘಟನೆಗಳಿರುವ ದೇಶಗಳ ಪೈಕಿ ಪಾಕಿಸ್ಥಾನಕ್ಕೆ ವಿಶ್ವದಲ್ಲೇ 3ನೇ ಸ್ಥಾನ ಸಿಕ್ಕಿದೆ. ಇದೀಗ ಪಾಕ್ನ 146 ವ್ಯಕ್ತಿಗಳು/ಸಂಘಟನೆಗಳು ನಿಷೇಧಕ್ಕೊಳಗಾಗಿದ್ದಾರೆ. ಅಗ್ರಸ್ಥಾನದಲ್ಲಿ ಇರಾಕ್, ದ್ವಿತೀಯ ಸ್ಥಾನದಲ್ಲಿ ಆಫ್ಘಾನಿಸ್ಥಾನ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.