ನ್ಯೂಜಿಲ್ಯಾಂಡ್ ಓಪನ್: ಭಾರತದ ಸವಾಲು ಅಂತ್ಯ
Team Udayavani, May 4, 2019, 6:02 AM IST
ಆಕ್ಲೆಂಡ್: ‘ನ್ಯೂಜಿಲ್ಯಾಂಡ್ ಓಪನ್’ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಏಕೈಕ ಭರವಸೆಯಾಗಿದ್ದ ಎಚ್.ಎಸ್. ಪ್ರಣಯ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರಣಯ್ ಜಪಾನಿನ ಕಂಟಾ ಸುನೆಯಮ ವಿರುದ್ಧ 21-17, 15-21, 14-21 ಗೇಮ್‌ಗಳಿಂದ ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ. ಈ ಪಂದ್ಯ ಒಂದು ಗಂಟೆ 13 ನಿಮಿಷಗಳವರೆಗೆ ನಡೆದಿತ್ತು. ಮೊದಲ ಗೇಮ್ ತೀವ್ರತೆಯಿಂದ ಕೂಡಿತ್ತು. 13 ಅಂಕಗಳವರೆಗೆ ಒಬ್ಬರ ಹಿಂದೆ ಒಬ್ಬರಂತೆ ಅಂಕವನ್ನು ಗಳಿಸುತ್ತಾ ಪಂದ್ಯದ ತೀವ್ರತೆಯನ್ನು ಹೆಚ್ಚಿಸಿದ್ದರು. ಅನಂತರ ಸತತ 4 ಅಂಕಗಳನ್ನು ಗಳಿಸಿದ ಪ್ರಣಯ್ 17-13 ಅಂಕಗಳ ಮುನ್ನಡೆ ಪಡೆದರು. ಆದರೆ ಕಂಟಾ ಅಂಕಗಳ ಅಂತರವನ್ನು 17-18ಕ್ಕೆ ತಂದಿಟ್ಟರು. ಆಟದ ವೇಗ ಹೆಚ್ಚಿಸಿಕೊಂಡ ಪ್ರಣಯ್ 21-17 ಅಂಕಗಳ ಅಂತರದಿಂದ ಮೊದಲ ಗೇಮ್ ತಮ್ಮದಾಗಿಸಿಕೊಂಡರು.
ದ್ವಿತೀಯ ಗೇಮ್‌ನಲ್ಲೂ ಉತ್ತಮ ಆರಂಭ ಪಡೆದ ಪ್ರಣಯ್ 11-5 ಅಂಕಗಳನ್ನು ಗಳಿಸಿದ್ದರು. ಆದರೆ ಪ್ರಣಯ್ ಮಾಡಿದ ತಪ್ಪುಗಳಿಂದ ಅವಕಾಶ ಪಡೆದ ಕಂಟಾ ಸುಲಭವಾಗಿ ಈ ಗೇಮ್ ಗೆದ್ದರು. ನಿರ್ಣಾಯಕ ಗೇಮ್‌ನಲ್ಲಿ ಇಬ್ಬರ ನಡುವೆ ಭಾರೀ ಪೈಪೋಟಿಯೇ ನಡೆಯಿತು. 14-14 ಸಮಬಲದ ಹೋರಾಟದಲ್ಲಿದ್ದಾಗ ಅತ್ಯುತ್ತಮ ಆಟವಾಡಿದ ಕಂಟಾ ಪ್ರಣಯ್‌ಗೆ ಅಂಕ ಗಳಿಸುವ ಅವಕಾಶವನ್ನು ನೀಡದೆ 21-14 ಅಂಕಗಳಿಂದ ಗೆದ್ದು ಸೆಮಿಫೈನಲ್ಗೆ ಮುನ್ನಡೆದರು. ಈ ಸೋಲಿನೊಂದಿಗೆ ಕೂಟದಲ್ಲಿ ಭಾರತೀಯ ಸವಾಲು ಕೊನೆಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.