ಎಸೆದ ಬಾಟಲ್ಗಳಿಗೆ ಕಲಾತ್ಮಕ ಸ್ಪರ್ಶ
ಪರಿಸರ ರಕ್ಷಣೆಗೆ ಮೇಘಾ ಕೊಡುಗೆ
Team Udayavani, May 4, 2019, 5:00 AM IST
ಮಹಾನಗರ: ಬೀಚ್ ಬದಿಯಲ್ಲಿ ಯಾರೋ ಎಸೆದು ಹೋದ ಬಾಟಲ್ಗಳನ್ನು ಸಂಗ್ರಹಿಸಿ ಅದಕ್ಕೆ ಕಲಾತ್ಮಕ ಸ್ಪರ್ಶ ನೀಡುವುದರೊಂದಿಗೆ ಇಲ್ಲೊ ಬ್ಬಳು ಯುವತಿ ಮಾದರಿಯಾಗಿದ್ದಾರೆ. ಆ ಮೂಲಕ ಬಾಟಲ್ನಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ.
ಬೊಕ್ಕಪಟ್ಣದ ರಾಜ್‌ಪ್ರಹ್ಲಾದ್ ಮತ್ತು ಸುಜಾತಾ ಮೆಂಡನ್ ದಂಪತಿಯ ಪುತ್ರಿ ಮೇಘಾ ಮೆಂಡನ್ ಅವರೇ ಇತರರು ಎಸೆದು ಹೋದ ಬಾಟಲ್ಗಳಿಗೆ ಬಾಟಲ್ ಆರ್ಟ್ ಮೂಲಕ ಕಲಾತ್ಮಕ ರೂಪ ನೀಡುತ್ತಿರುವವರು. ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಅಂತಿಮ ವರ್ಷದ ಆರ್ಕಿಟೆಕ್ಚರ್ ವಿದ್ಯಾರ್ಥಿನಿಯಾಗಿರುವ ಮೇಘಾ, ತಮ್ಮ ಸ್ನೇಹಿತರಾದ ಶ್ರಾವ್ಯಾ ಬೊಕ್ಕಪಟ್ಣ, ಅಕ್ಷಯ್ ಪುತ್ರನ್, ಯಶವಂತ್ ಮೆಂಡನ್ ಅವರ ಸಹಕಾರದೊಂದಿಗೆ ಕಳೆ ದೆರಡು ವರ್ಷಗಳಿಂದ ಬಾಟಲ್ ಆರ್ಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಟಲ್ನಿಂದ ಮನೆ ಅಂದ ಹೆಚ್ಚಳ
ಜನರು ಸ್ನೇಹಿತರೊಂದಿಗೆ, ಕುಟುಂಬ ಸದಸ್ಯರಿಗೊಂದಿಗೆ ಸಮಯ ಕಳೆಯಲು ಬೀಚ್‌ಗಳಿಗೆ ಹೋಗುವಾಗ ಕುಡಿಯಲು ಪಾನೀಯಗಳನ್ನು ಬಾಟಲಿಗಳಲ್ಲಿ ಕೊಂಡೊಯ್ಯುತ್ತಾರೆ. ಆದರೆ ಸೇವನೆ ಬಳಿಕ ಆ ಬಾಟಲಿಗಳನ್ನು ಅಲ್ಲೇ ಎಸೆದು ಬರುತ್ತಾರೆ. ಹೀಗೆ ಎಸೆಯುವುದರಿಂದ ಅಂತರ್ಜಲ, ಜಲಚರ ಜೀವಿಗಳಿಗೆ ಸಮಸ್ಯೆಯಾಗುತ್ತದೆ. ಪರಿಸರ ಮಾಲಿನ್ಯಕ್ಕೂ ಇದು ಕಾರಣವಾಗುತ್ತದೆ. ಬಾಟಲ್ಗಳನ್ನು ಎಸೆಯದೇ ಅವುಗಳ ಮೂಲಕ ಮನೆಯ ಅಂದವನ್ನು ಹೆಚ್ಚಿಸ ಬಹುದು ಎಂದು ಯುವ ಸಮುದಾಯ ಸಹಿತ ಎಲ್ಲರಿಗೂ ತಿಳಿಸಿಕೊಡುವ ಉದ್ದೇಶದಿಂದ ಬಾಟಲ್ ಆರ್ಟ್ ಮಾಡುತ್ತಿದ್ದೇನೆ ಎನ್ನುತ್ತಾರೆ ಮೇಘಾ ಮೆಂಡನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.