ಸೋಲು-ಗೆಲುವಿನ ಲೆಕ್ಕಾಚಾರ ಜೋರು

ನಾಗಠಾಣ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಬಲ-ಚಡಚಣ ಭಾಗದಲ್ಲಿ ಬಿಜೆಪಿಗೆ ಬೆಂಬಲ

Team Udayavani, May 4, 2019, 11:29 AM IST

4-MAY-8

ನಾಗಠಾಣ ವಿಧಾನಸಭಾ ಕ್ಷೇತ್ರ

ವಿಜಯಪುರ: ವಿಜಯಪುರ ಲೋಕಸಭೆಯಲ್ಲಿರುವ 8 ವಿಧಾನಸಭೆಗಳಲ್ಲಿ ಅತಿ ದೊಡ್ಡ ಕ್ಷೇತ್ರ ಎನಿಸಿರುವ ನಾಗಠಾಣ ಜೆಡಿಎಸ್‌ ಶಾಸಕ ಇರುವ ಕ್ಷೇತ್ರ. ಮಿತ್ರ ಪಕ್ಷಗಳು ಜೆಡಿಎಸ್‌ ಶಾಸಕ ಡಾ| ದೇವಾನಂದ ಚವ್ಹಾಣ ಅವರ ಪತ್ನಿ ಡಾ| ಸುನೀತಾ ಚವ್ಹಾಣ ಅವರನ್ನು ಕಣಕ್ಕಿಳಿಸಿದ್ದು, ಸಹಜವಾಗಿ ಮಿತ್ರ ಪಕ್ಷಗಳ ನಾಯಕರು ಈ ಕ್ಷೇತ್ರದಲ್ಲಿ ತಮಗೆ ಹೆಚ್ಚಿನ ಬಲ ಎಂಬ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಕೇಂದ್ರ ಸಚಿವರಾಗಿ ತಾವು ಪ್ರತಿನಿಧಿಸುವ ಕ್ಷೇತ್ರವ್ಯಾಪ್ತಿಯ ನಾಗಠಾಣ ಕ್ಷೇತ್ರಕ್ಕೆ ಕಳೆದ ಒಂದು ದಶಕದಲ್ಲಿ ಗಂಭೀರ ಸಮಸ್ಯೆಗಳ ನಿವಾರಣೆಗೆ ಮುಂದಾಗಿಲ್ಲ ಎಂಬ ಆರೋಪದ ಕಾರಣ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೂ ವಿರೋಧಿ ಅಲೆ ಎದ್ದಿದೆ. ಇತ್ತ ಕಳೆದ ಒಂದು ವರ್ಷದಿಂದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸಮ್ಮಿಶ್ರ ಸರ್ಕಾರದ ಆಡಳಿತ ಪಕ್ಷದ ಶಾಸಕರಾಗಿದ್ದರೂ ಹೇಳಿಕೊಳ್ಳುವಂಥ ಯಾವ ಕೆಲಸವನ್ನೂ ಮಾಡಿಲ್ಲ . ಬದಲಾಗಿ ಸ್ವಜಾತಿ ಪ್ರೇಮ ಮೆರೆಯುತ್ತಿದ್ದಾರೆ ಎಂಬ ದೂರುಗಳಿವೆ‌. ಇದು ಮಿತ್ರ ಪಕ್ಷಗಳ ಆಭ್ಯರ್ಥಿಯಾಗಿರುವ ಶಾಸಕ ದೇವಾನಂದ ಪತ್ನಿ ಸುನೀತಾ ಚವ್ಹಾಣಗೆ ವಿರೋಧಿ ಗಾಳಿ ಬೀಸುವಂತೆ ಮಾಡಿದೆ.

ಪ್ರಸಕ್ತ ಚುನಾವಣೆಯಲ್ಲಿ 2,56,845 ಮತದಾರರಿರುವ ಈ ವಿಧಾನಸಭೆ ಕ್ಷೇತ್ರದಲ್ಲಿ 1,63,613 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದು, ಶೇ. 63.70 ಮತದಾನವಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಶೇ. 59.11 ಮತದಾನವಾಗಿದ್ದು, ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ. 4.59 ಮತದಾನ ಹೆಚ್ಚಿದೆ. ಬಿಸಿಲನ್ನೂ ಲೆಕ್ಕಿಸದೇ ಈ ಕ್ಷೇತ್ರದ ಮತದಾರ ಹಕ್ಕು ಚಲಾಯಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಸಹಜವಾಗಿ ಇದು ತಮಗೆ ಪೂರಕವಾಗಲಿದ್ದು, ಮಿತ್ರ ಪಕ್ಷಗಳ ಆಭ್ಯರ್ಥಿ ಸುನೀತಾ ಚವ್ಹಾಣಗೆ ಹೆಚ್ಚಿನ ಮತ ತಂದುಕೊಡಲಿದೆ ಎಂಬ ಆಂದಾಜಿದೆ.

ರಾಜಕೀಯ ಪಕ್ಷಗಳ ನಾಯಕರ ಲೆಕ್ಕಾಚಾರದ ಪ್ರಕಾರ ತಡವಾಗಿ ಮಿತ್ರ ಪಕ್ಷಗಳು ಕ್ಷೇತ್ರ ಹೊಂದಾಣಿಕೆ ಹಾಗೂ ವಿಜಯಪುರ ಕ್ಷೇತ್ರಕ್ಕೆ ಅಂತಿಮ ಕ್ಷಣದಲ್ಲಿ ಅಭ್ಯರ್ಥಿಯನ್ನು ಘೋಷಿಸಿ ರುವುದು ಜೆಡಿಎಸ್‌ ಪಕ್ಷಕ್ಕೆ ಹಿನ್ನಡೆ ಎಂಬ ಮಾತಿದೆ. ಹೀಗಾಗಿ ಚಡಚಣ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬರಲಿದ್ದರೆ, ಶಾಸಕ ದೇವಾನಂದ ಅವರ ಕಾರ್ಯಕ್ಷೇತ್ರ ನಾಗಠಾಣ ಭಾಗದಲ್ಲಿ ಮಿತ್ರ ಪಕ್ಷಗಳ ಅಭ್ಯರ್ಥಿ ಕಡೆಗೆ ಒಲವು ತೋರಿದ್ದಾರೆ. ಸಚಿವ ಎಂ.ಬಿ. ಪಾಟೀಲ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ಈ ಬಾರಿ ಬಿಜೆಪಿ ಬೆಂಬಲಿಸುವ ಸಾಂಪ್ರದಾಯಿಕ ಮತದಾರರು ಕೂಡ ಎಂಬ ವಿಶ್ಲೇಷಣೆ ಇದೆ.

ನಾಗಠಾಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್‌ ಶಾಸಕ ದೇವಾನಂದ ಚವ್ಹಾಣ ಕಳೆದ 1 ವರ್ಷದ ತಮ್ಮ ಆಧಿಕಾರದ ಅವಧಿಯಲ್ಲಿ ಸ್ವಜಾತಿ ಪ್ರೇಮ ಮೆರೆದಿದ್ದಾರೆ ಎಂಬ ಆರೋಪವಿದೆ. ಪರಿಶಿಷ್ಟ ಜಾತಿಯಲ್ಲೇ ಅಸ್ಪೃಶ್ಯರಾಗಿರುವ ದಲಿತರ ಕೇರಿಗಳ ಆಭಿವೃದ್ಧಿಗೆ ಯಾವ ಕಾರ್ಯಕ್ರಮಗಳನ್ನೂ ರೂಪಿಸಿಲ್ಲ. ಬದಲಾಗಿ ಈ ಹಿಂದೆ ಮಂಜೂರಾಗಿದ್ದ ಅಭಿವೃದ್ಧಿ ಯೋಜನೆಗಳನ್ನು ತಮ್ಮ ಸಮುದಾಯದ ಬಂಜಾರಾ ತಾಂಡಾಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂಬ ಅಸಮಾಧಾನ ಈ ಚುನಾವಣೆಗಲ್ಲಿ ಮಿತ್ರ ಪಕ್ಷಗಳ ಅಭ್ಯರ್ಥಿಗೆ ಮುಳುವಾಗುವ ಸಾಧ್ಯತೆ ಎಂದು ವಿರೋಧಿಗಳು ವಿಶ್ಲೇಷಿಸುತ್ತಾರೆ.

ಇದರ ಹೊರತಾಗಿಯೂ ನಾಗಠಾಣ ವಿಧಾನಸಭೆ ಕ್ಷೇತ್ರದಲ್ಲಿ ಚಡಚಣ ಹಾಗೂ ನಾಗಠಾಣ ಎರಡು ಭಾಗದಲ್ಲಿ ವಿಭಿನ್ನ ಪ್ರತಿಕ್ರಿಯೆ ಇದೆ. ಕುಡಿಯುವ ನೀರಿನ ಗಂಭೀರ ಪರಿಸ್ಥಿತಿ ಎದುರಿ ಸುತ್ತಿರುವ ಕ್ಷೇತ್ರಗಳಲ್ಲಿ ನಾಗಠಾಣ ಕೂಡ ಒಂದು. ಈಗಲೂ ಈ ಭಾಗದ ಹಲವು ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವುದು ಕುಡಿಯುವ ನೀರಿಗೆ ತತ್ವಾರ ಇರುವುದರ ಪ್ರತೀಕ. ಈ ಸಮಸ್ಯೆ ನೀಗಲು ಚಡಚಣ ಭಾಗದಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ರೂಪಿಸುವಲ್ಲಿ ಕೇಂದ್ರದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವ ಹಾಗೂ ಬಿಜೆಪಿ ಹಾಲಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಹೆಚ್ಚಿನ ಬಲ ನೀಡಲಿದೆ ಎಂಬ ವಿಶ್ವಾಸ ಕೇಸರಿ ಪಾಳೆಯದಲ್ಲಿ ಮನೆ ಮಾಡಿದೆ.

ಮಿತ್ರ ಪಕ್ಷಗಳು ಕ್ಷೇತ್ರ ಹೊಂದಾಣಿಕೆ ಹಾಗೂ ಆಭ್ಯರ್ಥಿ ಘೋಷಣೆಯಲ್ಲಿ ವಿಳಂಬ ಮಾಡಿರುವುದು ಜೆಡಿಎಸ್‌ ಪಕ್ಷಕ್ಕೆ ಕೊಂಚ ಹಿನ್ನಡೆ ಆಗಲಿದೆ. ಆದರೂ ಹಾಲಿ ಸಂಸದ-ಸಚಿವರಾಗಿರುವ ರಮೇಶ ಜಿಗಜಿಣಗಿ ಅವರ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಸುನೀತಾ ಚವ್ಹಾಣಗೆ ನೆರವಾಗಲಿದೆ. ಮಿತ್ರಪಕ್ಷಗಳ ನಾಯಕರು-ಕಾರ್ಯಕರ್ತರು ಪ್ರಾಮಾಣಿಕ ಕೆಲಸ ಮಾಡಿರುವ ಕಾರಣ ಚಡಚಣ ಭಾಗದಲ್ಲಿ ಕೊಂದ ಹಿನ್ನಡೆ ಎನಿಸಿದರೂ ನಾಗಠಾಣ ಭಾಗದಲ್ಲಿ ಜೆಡಿಎಸ್‌ ಅಭ್ಯರ್ಥಿ ತನ್ನ ಎದುರಾಳಿಗಿಂತ 10 ಸಾವಿರಕ್ಕಿಂತ ಹೆಚ್ಚಿನ ಮತ ಪಡೆಯಲಿದ್ದಾರೆ.
•ಸಾಹೇಬಗೌಡ ಬಿರಾದಾರ (ತದ್ದೇವಾಡಿ)
ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಚಡಚಣ

ಕಾಂಗ್ರೆಸ್‌ ಪಕ್ಷದಲ್ಲಿ ಪರಿಶಿಷ್ಟ ಜಾತಿಯ ಬಲ ಸಮುದಾಯದ ನಾಯಕರು ಹಾಗೂ ಕಾರ್ಯಕರ್ತರ ಪಡೆ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಜೆಡಿಎಸ್‌ ಜೊತೆಗಿನ ಮೈತ್ರಿಯನ್ನು ಆಂತರಿಕವಾಗಿ ಒಪ್ಪಿಲ್ಲ. ಶಾಸಕರಾಗಿ ದೇವಾನಂದ ಚವ್ಹಾಣ ಕ್ಷೇತ್ರದಲ್ಲಿ ದಲಿತರಲ್ಲೇ ತಾರತಮ್ಯ ಮಾಡುತ್ತಿರುವುದು ಬಿಜೆಪಿ ಅಭ್ಯರ್ಥಿಗೆ ನೆರವಾಗಲಿದೆ. ಶಾಸಕರ ವಿರೋಧಿ ಅಲೆ ಹಾಗೂ ಪ್ರಧಾನಿ ಮೋದಿ ಪರ ಅಲೆ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ನೆರವಾಗಿದೆ. ಹೀಗಾಗಿ ಚಡಚಣ ಭಾಗದಲ್ಲಿ ಕನಿಷ್ಠ ಚಡಚಣ ಭಾಗದಲ್ಲಿ ಜೆಡಿಎಸ್‌ ಅಭ್ಯರ್ಥಿಗಿಂತ 10 ಸಾವಿರಕ್ಕೂ ಅಧಿಕ ಮತಗಳನ್ನು ಸೆಳೆಯಲಿದ್ದೇವೆ.
ಕಲ್ಲಪ್ಪ ಉಟಗಿ, ಅಧ್ಯಕ್ಷರು ಬಿಜೆಪಿ ಮಂಡಲ, ಚಡಚಣ

ಜಿ.ಎಸ್‌. ಕಮತರ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.