ಗುರುವನ್ನು ನೆನೆದು ಬದುಕು ನಡೆಸಿ

ಮುಮ್ಮಡಿ ಮಹಾಲಿಂಗ ಮಹಾಸ್ವಾಮೀಜಿ ಸಂಸ್ಮರಣಾ ಮಹೋತ್ಸವ

Team Udayavani, May 4, 2019, 2:07 PM IST

ramanagar-2-tdy..

ಕನಕಪುರ: ಗುರು ಎನ್ನುವುದು ಸುಂದರ ಮತ್ತು ಪವಿತ್ರ ಶಬ್ದ. ಈ ಶಬ್ದ ಕೇಳಿದರೆ ಹೃದಯದಲ್ಲಿ ಸಂತೋಷದ ಭಾವ ಉಕ್ಕುತ್ತದೆ. ಈ ಸ್ಥಾನದ ಮಹತ್ವ ಬೆಳಕು. ಅದು ಅನಂತ ವಿಸ್ತಾರ, ಮನಸ್ಸಿನ ಮಾಯೆ ಮರೆಯಾಗಿಸುವ ಶಕ್ತಿ ಗುರುವಿಗಿದೆ. ಗುರುವನ್ನು ನೆನೆದು ಬದುಕು ನಡೆಸಬೇಕು ಎಂದು ಬಿಜಾಪುರದ ಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.

ನಗರದ ದೇಗುಲಮಠದ ಆವರಣದಲ್ಲಿ ಮುಮ್ಮಡಿ ಮಹಾಲಿಂಗ ಮಹಾಸ್ವಾಮಿಗಳ 2ನೇ ವರ್ಷದ ಸಂಸ್ಮರಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭೂಮಿಯಲ್ಲಿ ಎಲ್ಲವೂ ಇದೆ. ಆದರೆ, ಬಡವ-ಶ್ರೀಮಂತ ಎನ್ನುವ ತಾರತಮ್ಯವಿದೆ. ಭೂಮಿಯಲ್ಲಿ ಬಂಗಾರವಿದೆ. ಅದರ ಮೇಲೆ ಮಲಗಿರುವ ಬಡವನಿಗೆ ಇಲ್ಲಿ ಬಂಗಾರವಿದೆ, ಅದನ್ನು ಬಳಸಿಕೊಳ್ಳಬೇಕು ಎಂಬ ಜ್ಞಾನವನ್ನು ನೀಡುವವನು ಗುರು. ಆ ಗುರುವಿನ ಜ್ಞಾನದಿಂದ ಮಾತ್ರ ಎಲ್ಲಾ ಕಷ್ಟಗಳ ನಿವಾರಣೆ ಸಾಧ್ಯ. ಮನುಷ್ಯನಿಗೆ ನೆಮ್ಮದಿ ಇಲ್ಲದೆ ಶ್ರೀಮಂತಿಕೆ, ಅಧಿಕಾರವಿದ್ದರೆ ಪ್ರಯೋಜನವಿಲ್ಲ. ತನ್ನನ್ನು ತಾನು ಅರಿಯದಿದ್ದರೆ ಮನಸ್ಸು ಶ್ರೀಮಂತವಾಗುವುದಿಲ್ಲ. ಆದರೆ, ಹೃದಯ ಶ್ರೀಮಂತಿಕೆಯನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಗುರು ಪರಂಪರೆಯ ಮಠಗಳಿಂದ ಸನ್ಮಾರ್ಗದಲ್ಲಿ ನಡೆಯುವುದು ಮನುಷ್ಯ ಧರ್ಮ ಎಂದು ತಿಳಿಸಿದರು.

ಗುರುಗಳಿಂದ ಸಮಸ್ಯೆ ಪರಿಹಾರಕ್ಕೆ ಮಾರ್ಗ: ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆಯಲ್ಲಿ ಭಾರತೀಯರಾದ ನಾವುಗಳು ಎಷ್ಟೇ ತೊಂದರೆ, ಬಂಧನ, ಸಂಕಷ್ಟಗಳಿದ್ದರೂ ಸಹ ಮಠದ ಗುರುಗಳಿಂದ ಸಮಸ್ಯೆ ಪರಿಹಾರಕ್ಕೆ ಮಾರ್ಗ ದೊರೆಯುತ್ತದೆ. ಅಮೇರಿಕಾದಂತಹ ಶ್ರೀಮಂತ ದೇಶದಲ್ಲಿ ಭೌತಿಕ ಸಂಪತ್ತು ಇದೆ. ಆದರೂ ಸಹ ಮಾನಸಿಕವಾಗಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಶದ ಅವರ ಮಟ್ಟಕ್ಕೆ ಶ್ರೀಮಂತಿಕೆ ಇಲ್ಲದಿದ್ದರೂ ಇಲ್ಲಿ ಎಲ್ಲವನ್ನು ಮೆಟ್ಟಿನಿಲ್ಲುವ ಶಕ್ತಿ ಇದೆ. ಮಾನಸಿಕವಾಗಿ ನಾವು ಶ್ರೀಮಂತಿಕೆಯಿಂದ ಕೂಡಿದ್ದೇವೆ. ನಂಬಿಕೆಯಿಂದ ಬದುಕುತ್ತಿದ್ದೇವೆ. ನಂಬಿಕೆ ಇಲ್ಲದೆ ನಮ್ಮ ಜೀವನ ನಡೆಯಲು ಅಸಾಧ್ಯ ಎಂದು ತಿಳಿಸಿದರು.

ನಮ್ಮ ಪೂರ್ವಜರು ಅಂದೇ ಸಂಶೋಧಿಸಿದ್ದರು: ಜಗತ್ತಿನಲ್ಲಿ ಎಲ್ಲಾ ಸಂಶೋಧನೆಗಳಿಂದ ಹಲವು ಸತ್ಯಗಳು ಹೊರಬರುತ್ತಿವೆ. ಆದರೆ, ನಮ್ಮ ಪೂರ್ವಜರು, ಋಷಿಮುನಿಗಳು ಅಣುವಿನಿಂದ ಏನು ಸಾಧ್ಯವಾಗಲಿದೆ ಎಂಬುದನ್ನು ಕಂಡುಕೊಂಡು ಅಂದೇ ನಮಗೆ ತಿಳಿಸಿದ್ದರು. ಅದಕ್ಕೆ ಇಂದಿನಂತೆ ಅಕ್ಷರದ ಜ್ಞಾನವಿಲ್ಲದೆ ದಾಖಲಾಗಲಿಲ್ಲ. ಅಂತಹ ದೇಶದಲ್ಲಿ ಜನ್ಮ ಪಡೆದ ನಾವೇ ಧನ್ಯರು. ಭಗವದ್ಗೀತೆಯ ಸಾರದಂತೆ ಕಾಲಕಾಲಕ್ಕೆ ತಕ್ಕಂತೆ ಲೋಕ ಕಲ್ಯಾಣಕ್ಕಾಗಿ ದರ್ಶನ ನೀಡುವ ಸಂತರನ್ನು ನಾವು ನಮ್ಮ ದೇಶದ ಗುರು ಪರಂಪರೆಯಲ್ಲಿ ಮಾತ್ರ ಕಾಣಲು ಸಾಧ್ಯ. ಹಾಗೆ ಇಲ್ಲಿಯೂ ಕೂಡ ದೇಗುಲಮಠದ ಸೇವೆಗೆ ಗುರುವರ್ಯರು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಕಡಿಮೆ ಅವಧಿಯಲ್ಲಿ ಎಲ್ಲರ ಮನಸ್ಸು ಗೆದ್ದರು: ಮಾಜಿ ಸಚಿವ ಪಿ.ಜಿ.ಆರ್‌ ಸಿಂಧ್ಯಾ ಮಾತನಾಡಿ, ಲಿಂಗೈಕ್ಯರಾದ ಮಹಾಲಿಂಗಸ್ವಾಮೀಜಿಗಳಿಗೆ ಮಾನವೀಯತೆಯ ಎಲ್ಲಾ ಸದ್ಗುಣಗಳು ಇದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಎಲ್ಲರ ಮನಸ್ಸನ್ನು ಗೆದ್ದರು. ಅವರ ಪುಣ್ಯ ಸಂಸ್ಮರಣೆಗೆ ಅತ್ಯುತ್ತಮ ಸಂಘಟಕರಾದ ಶಿವರಾತ್ರಿ ದೇಶಿಕೇಂದ್ರದಸ್ವಾಮಿಗಳು ಆಗಮಿಸಿದ್ದಾರೆ ಎಂದರೆ ನಮ್ಮ ಪುಣ್ಯ. ಜಗತ್ತಿನ ಶ್ರೀಮಂತ ದೇಶದಲ್ಲಿ ಬಸವಣ್ಣನವರ ಚಿಂನತೆಗೆ ಕೇಂದ್ರ ತೆರದು ಅಲ್ಲಿ ಸಂಶೋಧನೆ ನಡೆಸುವ ಮೂಲಕ ಜಗತ್ತಿನಲ್ಲಿ ಬಸವಣ್ಣನವರ ತಣ್ತೀಗಳನ್ನು ಸಾರುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೇಲಿಮಠದ ಶಿವರುದ್ರಮಹಾಸ್ವಾಮೀಜಿ, ದೇಗುಲಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಚನ್ನಬಸವಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ಉಚಿತ ಸಾಮೂಹಿಕ ವಿವಾಹ ನಡೆಯಿತು. ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಉಪನ್ಯಾಸಕ ಶಿವಕುಮಾರ್‌, ಬಿ.ನಾಗರಾಜು, ಸ್ಟುಡಿಯೋ ಚಂದ್ರು, ಮಹೇಶ್‌ ಸೇರಿದಂತೆ ಅನೇಕರು ಹಾಜರಿದ್ದರು.

ಟಾಪ್ ನ್ಯೂಸ್

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.