ದುರುಗಮ್ಮನಹಳ್ಳ ಸ್ವಚ್ಛಗೊಳಿಸಿದ ಪ್ರಾಣೇಶ
Team Udayavani, May 4, 2019, 3:31 PM IST
ಗಂಗಾವತಿ: ನಗರದ ಮಧ್ಯೆ ಭಾಗದಲ್ಲಿ ಹರಿಯುವ ದುರುಗಮ್ಮನಹಳ್ಳದಲ್ಲಿ ಶುಕ್ರವಾರ ಬೆಳಗ್ಗೆ ಹಾಸ್ಯ ಕಲಾವಿದ ಬಿ. ಪ್ರಾಣೇಶ ನೇತೃತ್ವದಲ್ಲಿ ಸ್ವಚ್ಛತಾ ಶ್ರಮಾನುಭವ ಜರುಗಿತು. ಹಳ್ಳದಲ್ಲಿ ಪ್ಲಾಸ್ಟಿಕ್ ಗಾಜು ಸೇರಿ ಅಪಾಯಕಾರಿ ವಸ್ತು ಹಾಗೂ ಕಸವನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಕಸವನ್ನು ನಗರಸಭೆಯ ಸಿಬ್ಬಂದಿಗೆ ತಲುಪಿಸಲಾಯಿತು.
ಈ ಸಂದರ್ಭದಲ್ಲಿ ಕಲಾವಿದ ಬಿ. ಪ್ರಾಣೇಶ ಮಾತನಾಡಿ, ನಗರದ ಸೌಂದರ್ಯಕ್ಕೆ ದುರುಗಮ್ಮನಹಳ್ಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಮೊದಲು ದುರುಗಮ್ಮನಹಳ್ಳದ ನೀರು ಸ್ವಚ್ಛವಾಗಿತ್ತು. ಹಳ್ಳಕ್ಕೆ ಕಸ, ಪ್ಲಾಸ್ಟಿಕ್, ಕೊಳೆತ ತರಕಾರಿ ಹಾಗೂ ತ್ಯಾಜ್ಯವನ್ನು ಸುರಿಯುವ ಮೂಲಕ ಹಳ್ಳದ ಆರೋಗ್ಯ ಕೆಡಿಸಲಾಗಿದೆ. ಎಲ್ಲರೂ ನಗರಸಭೆ ಜತೆ ಕೈಜೋಡಿಸಿ ಹಳ್ಳವನ್ನು ಸ್ವಚ್ಛಗೊಳಿಸಿ ಮೊದಲಿಂತೆ ಮಾಡಬೇಕಿದೆ. ನಗರದ ಘನತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಪೌರಾಯುಕ್ತ ಡಾ| ದೇವಾನಂದ ದೊಡ್ಮನಿ, ಡಾ| ಭಾವಿಕಟ್ಟಿ, ಕೌಸರ್ ಬೇಗಂ, ಜಿ. ಶ್ರೀಧರ, ಡಾ| ಶಿವಕುಮಾರ ಮಾಲೀಪಾಟೀಲ್, ಮಂಜುನಾಥ ಗುಡ್ಲಾನೂರು, ಮಹಾಲಿಂಗಪ್ಪ, ಅಭಿಷೇಕ್, ಜಿ. ಪವನಗುಂಡೂರು, ಉಲ್ಲಾಸ, ವಾಸುಕೊಳಗದ, ಸುರೇಶ ಸಿಂಗನಾಳ ಸೇರಿ ಅನೇಕರಿದ್ದರು.
ರಾಯನಕೆರೆ ಅಭಿವೃದ್ಧಿಗೆ ದೇಣಿಗೆ
ತಾವರಗೇರಾ: ಸಮೀಪದ ಕಿಲಾರಹಟ್ಟಿ ಸಿಆರ್‌ಸಿ ವ್ಯಾಪ್ತಿಯ ಶಾಲಾ ಶಿಕ್ಷಕರು ರಾಯನಕೆರೆ ಅಭಿವೃದ್ಧಿ ಸೇವಾ ಸಮಿತಿಗೆ 21 ಸಾವಿರ ರೂ. ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಗುರುಪಾದಮ್ಮ ಭಂಡಾರಿ, ಸಹಶಿಕ್ಷಕರಾದ ಶಂಕರ್ ರಾಠೊಡ್, ಗಿರಿಯಪ್ಪಗೌಡ ಪಾಟೀಲ, ಶೇಖರಪ್ಪ ಬಿ., ತಿಮ್ಮಪ್ಪ ಮಡ್ಡೆರ, ಸ್ಥಳೀಯ ಪಿಎಸ್‌ಐ ಮಹಾಂತೇಶ ಸಜ್ಜನ, ಎಪಿಎಂಸಿ ಸದಸ್ಯರಾದ ವಿರುಪಣ್ಣ ನಾಲತವಾಡ, ಸಮಿತಿ ಸದಸ್ಯರಾದ ಅಮರೇಶ ಕುಂಬಾರ, ಸಂಜೀವ ಚಲುವಾದಿ, ಸಿದ್ಧನಗೌಡ, ಕರಡೆಪ್ಪ ನಾಲತವಾಡ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.