ಕೃತಿ ರಚನೆಗಳಿಂದ ವ್ಯಕ್ತಿತ್ವ ವಿಕಸನ: ಸರಸ್ವತಿ


Team Udayavani, May 5, 2019, 6:08 AM IST

saraswati

ಬದಿಯಡ್ಕ: ಸಾಹಿತ್ಯ ರಚನೆಗಳ ಮೂಲಕ ವ್ಯಕ್ತಿತ್ವ ವಿಕಸನದ ಜೊತೆಗೆ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಗಡಿನಾಡಿನಲ್ಲಿ ಗಝಲ್‌ ಸಾಹಿತ್ಯ ಪ್ರಕಾರದ ಕೃತಿ ಮೊದಲ ಬಾರಿಗೆ ಮೂಡಿಬಂದಿರುವುದು ಕಾಸರಗೋಡಿನ ಸಾಹಿತ್ಯ ಲೋಕಕ್ಕೆ ಹೊಸ ದಿಕ್ಕನ್ನು ನೀಡಲಿ ಎಂದು ನಿವೃತ್ತ ಶಿಕ್ಷಕಿ ಸರಸ್ವತಿ ಎಚ್‌. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಕವಯಿತ್ರಿ, ವಿಮರ್ಶಕಿ ಚೇತನಾ ಕುಂಬಳೆ ಅವರ ಚೊಚ್ಚಲ ಕೃತಿ ಗಝಲ್‌ ಸಂಕಲನ “ನಸುಕಿನಲ್ಲಿ ಬಿರಿದ ಹೂಗಳು’ ಕೃತಿಯನ್ನು ಬದಿಯಡ್ಕದ ರಾಮ ಲೀಲಾ ಸಭಾಂಗಣದಲ್ಲಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾ ಲಕ್ಷ್ಮೀ ಕುಳಮರ್ವ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್‌.ಪುಣಿಚಿತ್ತಾಯ ಕಲೆ, ಸಾಹಿತ್ಯಗಳೇ ಮೊದಲಾದ ಸೃಜನಾತ್ಮಕತೆಗಳು ಯುವ ತಲೆಮಾರಿನ ಜಂಜಡದ ಬದುಕಿಗೆ ಹೊಸ ಬೆಳಕನ್ನು ನೀಡಬಲ್ಲ ಶಕ್ತಿಹೊಂದಿವೆೆ. ಆದರೆ ಹೊಸತನಕ್ಕೆ ಹೊಂದಿಕೊಳ್ಳುವ ಬರಹಗಳು ಆಧುನಿಕ ಶೈಲಿಯೊಂದಿಗೆ ಪ್ರಕಟಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾಸರಗೋಡಿನ ಸಾರಸ್ವತ ಲೋಕದ ಎಡೆಬಿಡದ ಪಯಣ ಸಕಾರಾತ್ಮಕತೆಯೊಂದಿಗೆ ಬೆಳೆಯುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಚೇತನಾ ಕುಂಬಳೆ ಅವರ ಇನ್ನೊಂದು ಕೃತಿ, ಸಾಹಿತ್ಯ ರಚನೆಗಳ ವಿಮಶಾì ಸಂಕಲನ ಪಡಿನೆಳಲು ಕೃತಿಯನ್ನು ಕವಯಿತ್ರಿ, ರಂಗನಟಿ ಪೂರ್ಣಿಮಾ ಸುರೇಶ್‌ ಹಿರಿಯಡ್ಕ ಅವರು ಹಿರಿಯ ಸಾಹಿತಿ ಹರೀಶ್‌ ಪೆರ್ಲ ಅವರಿಗೆ ನೀಡಿ ಲೋಕಾರ್ಪಣೆಗೊಳಿಸಿದರು. ಅವರು ಈ ಸಂದರ್ಭ ಮಾತನಾಡಿ, ಆಧುನಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಹಿತ್ಯ ಬರಹಗಳ ಹೊಸ ಬದಲಾವಣೆಗಳ ಹೊರಳುವಿಕೆಯತ್ತ ತೆರೆದುಕೊಳ್ಳುತ್ತಿರುವುದು ವಿಶೇಷತೆವಾಗಿದೆ. ಹೆಚ್ಚು ಮಾಗಿಕೊಳ್ಳುವಲ್ಲಿ ವಿಮರ್ಶೆಗಳು ಬಲ ನೀಡುತ್ತವೆ. ಸಾಹಿತ್ಯ ವಿಮರ್ಶೆ ಹೊಸ ಓದುಗರಿಗೆ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.

ಕೃತಿಯ ಬಗ್ಗೆ ಮಾತನಾಡಿದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕಿ ಲಕ್ಷಿ$¾à ಕೆ. ಅವರು ವಿಮಶಾì ಕೃತಿಗಳು ಕಲಾತ್ಮಕತೆಯನ್ನು ಎತ್ತಿಹಿಡಿಯುತ್ತವೆೆ. ತಮ್ಮದೇ ಶೈಲಿಯ ಮೂಲಕ ಸಮರ್ಥ ವಿಮರ್ಶಕಿಯಾಗಿ ರೂಪುಗೊಳ್ಳುತ್ತಿರುವುದು ಗಡಿನಾಡಿನ ಸಾರಸ್ವತ ಲೋಕದ ಭರವಸೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತೆಹ್ರೀ ಕೆ ಉರ್ದು ಸಂಘಟ ನೆಯ ಮುಖಂಡ ಮೊಹಮ್ಮದ್‌ ಅಝೀಂ ಮಣಿಮುಂಡ ಅವರು ಗಝಲ್‌ ಸಾಹಿತ್ಯ ಪ್ರಕಾರದ ಇತಿಹಾಸ, ಗಝಲ್‌ ಪ್ರಕಾರದ ಸಾಹಿತ್ಯದ ಮಹತ್ವದ ಬಗ್ಗೆ ವಿವರಣಾತ್ಮಕ ಮಾಹಿತಿ ನೀಡಿ ಸ್ವರಚಿತ ಉರ್ದು ಗಝಲ್‌ ವಾಚಿಸಿದರು. ಜತೆಗೆ ಮೊಹಮ್ಮದ್‌ ಅಶ್ವಾಕ್‌ ಮಣಿಮುಂಡ ಅವರಿಂದ ಸುಮಧುರ ಗಝಲ್‌ ಗಾಯನ ನಡೆಯಿತು.

ಕವಯಿತ್ರಿ ಶ್ವೇತಾ ಕಜೆ ಸ್ವರಚಿತ ಗಝಲ್‌ ವಾಚನ ನಡೆಸಿದರು. ಶ್ಯಾಮಲಾ ರವಿರಾಜ್‌ ಕುಂಬಳೆ ಪ್ರಾರ್ಥನಾ ಗೀತೆ ಹಾಡಿದರು. ಕೃತಿಕರ್ತೆ ಚೇತನಾ ಕುಂಬಳೆ ತಮ್ಮ ಸಾಹಿತ್ಯ ಯಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೇಘನಾ ರಾಜಗೋಪಾಲ್‌ ವಂದಿಸಿದರು. ಪತ್ರಕರ್ತ, ಸಂಘಟಕ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.

ಭಾವದ ಶೋಧನೆ
ಸಾಹಿತ್ಯ ಪ್ರಕಾರಗಳ ಪರಿಸರ ನಿರ್ಮಾಣವಾಗದೆ ಯಶಸ್ಸು ಹೊಂದಲು ಸಾಧ್ಯವಿಲ್ಲ. ಸಾಹಿತ್ಯದ ವಿವಿಧ ಪ್ರಕಾರಗಳು ಯಶಸ್ಸುಗಳಿಸಲು ಪೂರಕ ವಾತಾವರಣ ಇರಬೇಕು. ಈ ನಿಟ್ಟಿನಲ್ಲಿ ತೀವ್ರ ಭಾವದ ಶೋಧನೆಯ ಕೃತಿಗಳು ನಿರ್ಮಾಣಗೊಳ್ಳುತ್ತದೆ. ಚೇತನಾ ಅವರ ಗಝಲ್‌ ಸಂಕಲನ ಮೂಲ ಗಝಲ್‌ ಪ್ರಕಾರದ ಹಿನ್ನೆಲೆಯನ್ನು ಉಳಿಸಿಕೊಂಡು ಯಶಸ್ವಿ ಕೃತಿಯಾಗಿ ಮೂಡಿಬಂದಿದೆ ಎಂದರು.
 -ಡಾ|ವಸಂತಕುಮಾರ್‌ ಪೆರ್ಲ,
ಮಂಗಳೂರು ಆಕಾಶವಾಣಿಯ ನಿವೃತ್ತನಿರ್ದೇಶಕ,

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.