ಮಾದಕ ವ್ಯಸನಿಗಳಿಗೆ ಜೀವನ ಪಾಠ!

ಎರಡು ವರ್ಷಗಳಲ್ಲಿ 50ಕ್ಕೂ ಹೆಚ್ಚು ವ್ಯಸನಮುಕ್ತರ ಯಶೋಗಾಥೆ

Team Udayavani, May 5, 2019, 6:00 AM IST

Durgs

ಸಾಂದರ್ಭಿಕ ಚಿತ್ರ.

ಮಹಾನಗರ: “ಅವರೆಲ್ಲ ಮಾದಕ ವ್ಯಸನಕ್ಕೆ ಬಲಿಯಾಗಿ ದುರಂತ ಬದುಕು ಕಾಣುವ ಹಂತದಲ್ಲಿ ಅವರಿದ್ದರು. ಆದರೀಗ ವ್ಯಸನ ಮುಕ್ತರಾಗಿ ಸುಂದರ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲ, ವ್ಯಸನಿಗಳನ್ನು ಕರೆದು ಮನಃ
ಪರಿವರ್ತನೆಗೊಳಿಸಿ ವ್ಯಸನಮುಕ್ತರಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ’.


ಮಾದಕ ವ್ಯಸನಿಗಳಾಗಿದ್ದವರೇ ವ್ಯಸನ ಮುಕ್ತರಾಗಿ ಯಶಸ್ವಿ ಜೀವನ ನಡೆಸು ವುದರೊಂದಿಗೆ ಮಾದಕ ವಸ್ತುಗಳ ದಾಸರಾ ಗದಂತೆ ವ್ಯಸನಿಗಳಿಗೆ ಜಾಗೃತಿ ಮೂಡಿ ಸುತ್ತಿರುವ ಯಶೋಗಾಥೆ ಇದು. ಇದೇ ಯಶಸ್ಸಿನ ಕಥೆಯಡಿ ಎರಡು ವರ್ಷ ಗಳಲ್ಲಿ ನಗರದಲ್ಲಿ 50ಕ್ಕೂ ಹೆಚ್ಚು ಮಂದಿ ವ್ಯಸನದಿಂದ ಮುಕ್ತರಾಗಿ ಬದುಕು ನಿರ್ಮಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ನಾರ್ಕೋಟಿಕ್ಸ್‌ ಅನಾನಿಮಸ್‌ ಎಂಬ ಹೆಸರಿನಡಿ ಈ ಜಾಗೃತಿ ಕಾರ್ಯ ನಡೆ ಯುತ್ತಿದ್ದು, ನಗರದಲ್ಲಿ 2 ವರ್ಷಗಳ ಹಿಂದೆ ಆರಂಭ ವಾಗಿದೆ. ನೆಟ್‌ವರ್ಕ್‌ನಡಿ ತೊಡಗಿಸಿ ಕೊಂಡಿರುವ 12 ಮಂದಿ ಸ್ವತಃ ವ್ಯಸನ ಮುಕ್ತರಾಗಿದ್ದು ಪ್ರಸ್ತುತ ವ್ಯಸನಮುಕ್ತ ಸಮಾಜ ನಿರ್ಮಾ ಣಕ್ಕೆ ಸ್ವಯಂ ಸ್ಫೂರ್ತಿ ಯಿಂದ ತೊಡಗಿಸಿ ಕೊಂಡಿದ್ದಾರೆ.

1953ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾದ ನಾರ್ಕೋಟಿಕ್‌ ಅನಾನಿ ಮಸ್‌ ತಂಡವು ಭಾರತಾದ್ಯಂತ ವಿವಿಧ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಒಂದು ಕಾಲದಲ್ಲಿ ಮಾದಕದ್ರವ್ಯ ವ್ಯಸನಕ್ಕೆ ಒಳಗಾಗಿ ಹೊರ ಬಂದವರು ಈ ತಂಡ ಕಟ್ಟಿಕೊಂಡು ಇತರರನ್ನು ಆ ಚಟದಿಂದ ಎಳೆದು ತರುವಲ್ಲಿ ಶ್ರಮಿಸುತ್ತಿದ್ದಾರೆ.

ನಗರದಲ್ಲಿಯೂ ಕೆಲವು ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದಲ್ಲದೆ, ತಿಂಗಳಲ್ಲಿ ಎರಡು ದಿನ ವ್ಯಸನಿಗಳಿಗೆಂದೇ ಸಭೆ ನಡೆಸುತ್ತಾರೆ. ತಾವು ಮಾದಕ ದ್ರವ್ಯ ವ್ಯಸನಕ್ಕೊಳಗಾದ ಸಂದರ್ಭ ಅನುಭವಿಸಿದ ಕಷ್ಟ, ಅದರಿಂದ ಆಶ್ರಯಿಸಿದ ಕುಟುಂಬ ಮಂದಿಗಾದ ತೊಂದರೆಯನ್ನು ಭಾವನಾತ್ಮಕವಾಗಿ ತಿಳಿಸುವ ಮೂಲಕ ವ್ಯಸನಮುಕ್ತಾಗುವಂತೆ ವಿವಿಧ ಹಂತಗಳಲ್ಲಿ ಮನಃಪರಿವರ್ತನೆಗೆ ಪ್ರೇರೇಪಿಸಲಾಗುತ್ತದೆ. ಹೀಗೆ ದೊರಕಿದ ಪ್ರೇರಣೆಯಿಂದಾಗಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಸಹಿತ ಐವತ್ತಕ್ಕೂ ಹೆಚ್ಚು ಮಂದಿ ವ್ಯಸನಮುಕ್ತರಾಗಿದ್ದಾರೆ. ವ್ಯಸನಮುಕ್ತರಾಗಿ ಜಾಗೃತಿ ಮೂಡಿಸುತ್ತಿರುವ ಮಂದಿ ಸೋದ್ಯೋಗ, ಇತರ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಕೈತುಂಬ ಸಂಬಳ ಪಡೆಯುತ್ತಿದ್ದಾರೆ ಎನ್ನುತ್ತಾರೆ ವ್ಯಸನಮುಕ್ತರಾಗಿ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡ ವ್ಯಕ್ತಿಯೊಬ್ಬರು.

ಕಾಲೇಜಿನಲ್ಲಿ ಡ್ರಗ್ಸ್‌ ಚಟಕ್ಕೆ ಬಲಿಯಾದೆ
ಜಾಗೃತಿ ಮೂಡಿಸುತ್ತಿರುವ ಹೆಸರು ಹೇಳಲಿಚ್ಛಿಸದ ಯುವಕನೋರ್ವ ಹೇಳುವ ಪ್ರಕಾರ, ತಾನು ಕಾಲೇಜು ಹಂತದಲ್ಲಿ ಡ್ರಗ್ಸ್‌ ಚಟಕ್ಕೆ ಬಲಿಯಾದೆ. ನಶೆ, ಗಮ್ಮತ್ತಿಗೋಸ್ಕರ ಸೇವನೆ ಮಾಡುತ್ತಿದ್ದದ್ದು ಚಟವಾಗಿ ಬೆಳೆಯಿತು. ಅದರಿಂದ ಹೊರಬರಲಾರದೆ ತುಂಬ ನರಕ ಅನುಭವಿಸಿದ್ದೆ. ಕೊನೆಗೆ ನಾರ್ಕೋಟಿಕ್‌ ಅನಾ ನಿಮಸ್‌ ಸಂಪರ್ಕ ಬೆಳೆದು, ಇಲ್ಲಿ ಸೇರಿಕೊಂಡೆ. ಅನಂತರ ಮನಃಪರಿವರ್ತನೆಯಾಗಿ ಈಗ ಯಶಸ್ವಿ ಜೀವನ ನಡೆಸುತ್ತಿದ್ದೇನೆ. ಜತೆಗೆ ವ್ಯಸನಿಗಳ ಮನಃ ಪರಿವರ್ತಿ ಸುವುದರಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ.

ವಿದ್ಯಾರ್ಥಿಗಳೇ ಹೆಚ್ಚು!
ದುರಂತವೆಂದರೆ, ಈ ತಂಡ ನಡೆಸುವ ಮಾದಕದ್ರವ್ಯ ವಿರುದ್ಧ ಜಾಗೃತಿ ಸಭೆಗೆ ಬರುವ ಬಹುತೇಕರು ಕಾಲೇಜು ವಿದ್ಯಾರ್ಥಿಗಳೇ. ಸ್ನೇಹಿತರ ಸಹವಾಸ, ನಶೆಗಾಗಿ, ಓದುವ ಒತ್ತಡ ಮುಂತಾದವುಗಳಿಂದಾಗಿ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಆದರೆ, ಅದರಿಂದಾಗುವ ಅನಾಹುತಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಪೋಷಕರ ಒತ್ತಾಯಕ್ಕೆ ಮಣಿದೋ, ಸ್ವಯಂ ಆಸಕ್ತಿಯಿಂದಲೋ ನಾರ್ಕೋಟಿಕ್‌ ಅನಾನಿಮಸ್‌ ಸಭೆಗೆ ಹಾಜರಾಗುತ್ತಾರೆ. ಅಂತಹವರಿಗೆ ನಮ್ಮದೇ ಜೀವನದಲ್ಲಿ ನಡೆದ ಕೆಟ್ಟ ಅನುಭವಗಳನ್ನು ವಿವರಿಸಿ ಮನಃ ಪರಿವರ್ತನೆ ಮಾಡುತ್ತೇವೆ. ಮುಕ್ತ ಸಂವಾದ (ಪೋಷಕರು, ಹಿತೈಷಿಗಳ ಜತೆಗೆ) ಮತ್ತು ವೈಯಕ್ತಿಕ ಸಂವಾದಗಳನ್ನು ನಡೆಸಿ ಅವರನ್ನು ಮಾದಕ ವ್ಯಸನದಿಂದ ಎಳೆದು ತರುವ ಪ್ರಯತ್ನ ಮಾಡುತ್ತೇವೆ. ಎಲ್ಲರನ್ನು ಪರಿವರ್ತಿಸಲು ಸಾಧ್ಯವಾಗದಿದ್ದರೂ ಬಹುತೇಕರು ಅರ್ಥೈಸಿಕೊಂಡು ಮಾದಕ ವ್ಯಸನದಿಂದ ಹೊರಬರುತ್ತಾರೆ ಎನ್ನುತ್ತಾರವರು.

12 ಹಂತದ ಕಾರ್ಯಕ್ರಮ
ಸಂಸ್ಥೆಗೆ ಆಗಮಿಸುವವರನ್ನು ಮಾದಕವ್ಯಸನ ಮುಕ್ತಗೊಳಿಸುವುದಕ್ಕಾಗಿ ಒಟ್ಟು 12 ಹಂತದ ಕಾರ್ಯಕ್ರಮಗಳಿರುತ್ತವೆ. ಎಡಿಕ್ಟ್ ಹಂತದಲ್ಲಿ ವ್ಯಸನಮುಕ್ತರಾದವರಿಂದ ವ್ಯಸನಿಗಳಿಗೆ ಜೀವನಪಾಠ, ಎರಡನೇ ಹಂತದಲ್ಲಿ ವ್ಯಸನದಿಂದಾಗುವ ಅನಾಹುತಗಳ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳನ್ನು ಓದಿಸಲಾಗುತ್ತದೆ. ಬಳಿಕ ವ್ಯಸನಕ್ಕೊಳಗಾದವರೊಂದಿಗೆ ವೈಯಕ್ತಿಕ ಸಂವಾದ, ಸಭೆ ನಡೆಸುವ ಇತರರು ಮತ್ತು ವ್ಯಸನಿಗಳ ನಡುವೆ ಮುಕ್ತ ಸಂವಾದ ಸಹಿತ ವಿವಿಧ ಹಂತಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ.

ಡ್ರಗ್‌ ವ್ಯಸನಿಗಳಾಗುತ್ತಿರುವ
ಮಹಿಳೆಯರು!
ಡ್ರಗ್ಸ್‌ ತೆಗೆದುಕೊಳ್ಳುವುದರಲ್ಲಿ ಪುರುಷರಷ್ಟೇ ಅಲ್ಲದೆ, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾರ್ಕೋಟಿಕ್‌ ಅನಾನಿಮಸ್‌ ಸದಸ್ಯರ ಅನುಭವದ ಪ್ರಕಾರ, ಶೇ. 60ರಷ್ಟು ಪುರುಷರು ಮಾದಕದ್ರವ್ಯಗಳ ದಾಸರಾದರೆ, ಶೇ. 40ರಷ್ಟು ಮಹಿಳೆಯರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.

-  ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.