46 ದಿನಗಳಲ್ಲಿ ಮೊಟ್ಟೆಯೊಡೆದ ಕಡಲಾಮೆ ಮರಿಗಳು

Team Udayavani, May 5, 2019, 6:19 AM IST

kadalame

ಉಪ್ಪುಂದ: ತ್ರಾಸಿ ಸಮೀಪದ ಸನ್ಯಾಸಿಬಲೆ ಕಡಲ ತೀರದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಪತ್ತೆಯಾಗಿದ್ದ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳಿಂದ ಅವಧಿಗೂ ಮುನ್ನ ಅಂದರೆ 46 ದಿನಗಳಲ್ಲಿಯೇ ಮೊಟ್ಟೆ ಒಡೆದು ಮರಿಗಳು ಹೊರಬಂದಿರುವುದು ಅಚ್ಚರಿ ಮೂಡಿಸಿದೆ.

ಸಮುದ್ರದಲ್ಲಿರುವ ಆಲಿವ್‌ ರಿಡ್ಲೆà, ಗ್ರೀನ್‌ ಟರ್ಟಲ್‌ ಕಡಲಾಮೆಗಳು ಹೆಚ್ಚಾಗಿ ಮಾರ್ಚ್‌ ತಿಂಗಳಿನಲ್ಲಿ ಮೊಟ್ಟೆ ಇಡುತ್ತವೆ. 2019ರ ಮಾ. 20ರಂದು 100ಕ್ಕೂ ಮಿಕ್ಕಿ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳು ಕಂಚುಗೋಡು ಗ್ರಾಮದ ಸನ್ಯಾಸಿಬಲೆ ಕಡಲ ತೀರದಲ್ಲಿ ದೊರಕಿದ್ದವು. ಕಡಲಾಮೆ ಮೊಟ್ಟೆಗಳು ಪತ್ತೆಯಾದ ತತ್‌ಕ್ಷಣ ಸ್ಥಳೀಯರು ಕಡಲಾಮೆ ಸಂರಕ್ಷಣೆ ಕಾರ್ಯನಿರತ ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಇಲಾಖೆಯ ಅಧಿಕಾರಿಗಳ ಸಹಾಯದಿಂದ ದೊರಕಿದ ಮೊಟ್ಟೆಗಳ ಬೆಳವಣಿಗೆಗೆ ಹ್ಯಾಚರಿ ನಿರ್ಮಿಸಿ ಸಂರಕ್ಷಿಸಿದ್ದರು.

ಸ್ಥಳೀಯರಾದ ದಾಮು ಗಣಪತಿ ಖಾರ್ವಿ, ರಾಘವೇಂದ್ರ ಖಾರ್ವಿ, ನಮೋ ಸದಾಶಿವ, ಸತೀಶ ಖಾರ್ವಿ, ಶೇಖರ ಖಾರ್ವಿ, ಶರತ್‌, ವಿನೋದ, ಅನಿಷ್‌ ಖಾರ್ವಿ, ವಿನೋದ ಖಾರ್ವಿ ಮತ್ತಿತರರು ಕಡಲಾಮೆ ಮೊಟ್ಟೆ ಸಂರಕ್ಷಣೆಯಲ್ಲಿ ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಕಾರ್ಯಕರ್ತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಿದ್ದರು.

52 ದಿನಗಳು ಬೇಕು
ಕಡಲಾಮೆ ಮೊಟ್ಟೆಯಲ್ಲಿ ಮರಿಗಳ ಪೂರ್ಣ ಬೆಳವಣಿಗೆಗೆ 52 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಹ್ಯಾಚರಿಯಲ್ಲಿ 46 ದಿನಗಳಿಗೆ ಮೊಟ್ಟೆ ಒಡೆದು ಮರಿಗಳು ಹೊರಬಂದಿರುವ ಕಡಲಾಮೆ ಮರಿಗಳು ಸ್ಥಳೀಯರಲ್ಲಿಯೂ ಆಶ್ಚರ್ಯ ಮೂಡಿಸಿದೆ. ಬಹುತೇಕ ಮೊಟ್ಟೆಗಳಿಂದ ಮರಿಗಳು ಹೊರ ಬಂದಿದ್ದು, ಇವುಗಳನ್ನು ಕಡಲು ಶಾಂತವಾಗಿರುವ ಸಮಯ ನೋಡಿಕೊಂಡು, ಚಂದ್ರನ ಬೆಳಕಿನಲ್ಲಿ ಮತ್ತೆ ಸಮುದ್ರಕ್ಕೆ ಬಿಡಲಾಗುತ್ತದೆ.

ಟಾಪ್ ನ್ಯೂಸ್

Kalaburagi-BJP-Protest

Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್‌ ರಾಜೀನಾಮೆಗೆ ಬಿಜೆಪಿ ಆಗ್ರಹ

1-vit-22

Dakshina Kannada; ಆರು ತಿಂಗಳ ಅಂತರದಲ್ಲಿ ಮತ್ತೊಂದು ದೊಡ್ಡ ದರೋಡೆ

1-nity

Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್‌

HDK

Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ

1-vvv

ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್‌’ನಲ್ಲಿ ಪಲಿಮಾರು ಶ್ರೀ ಅಭಿಮತ

1-moidin

ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್‌ ಬಾವ

pejavar

ವಚನ, ದಾಸ ಸಾಹಿತ್ಯ ಮನೆ ಮನೆಗೆ ತಲುಪಿಸೋಣ: ಪೇಜಾವರ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈಲಿನಲ್ಲಿ ಹೃದಯಾಘಾತ ಕೇರಳ ಮೂಲದ ವ್ಯಕ್ತಿ ಸಾವು

ರೈಲಿನಲ್ಲಿ ಹೃದಯಾಘಾತ ಕೇರಳ ಮೂಲದ ವ್ಯಕ್ತಿ ಸಾವು

Siddapura: ಪಾದಚಾರಿ ಮಹಿಳೆಗೆ ಕಾರು ಢಿಕ್ಕಿ; ಗಂಭೀರ

Siddapura: ಪಾದಚಾರಿ ಮಹಿಳೆಗೆ ಕಾರು ಢಿಕ್ಕಿ; ಗಂಭೀರ

Kundapura: ಪತಿ, ತಾಯಿಯಿಂದ ಕಿರುಕುಳ; ಪತ್ನಿ ದೂರು

Kundapura: ಪತಿ, ತಾಯಿಯಿಂದ ಕಿರುಕುಳ; ಪತ್ನಿ ದೂರು

Gangolli: ಬೋಟಿನಿಂದ ಬಿದ್ದು ಮೀನುಗಾರ ನಾಪತ್ತೆ

Gangolli: ಬೋಟಿನಿಂದ ಬಿದ್ದು ಮೀನುಗಾರ ನಾಪತ್ತೆ

1-mobile-tower

Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi-BJP-Protest

Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್‌ ರಾಜೀನಾಮೆಗೆ ಬಿಜೆಪಿ ಆಗ್ರಹ

1-vit-22

Dakshina Kannada; ಆರು ತಿಂಗಳ ಅಂತರದಲ್ಲಿ ಮತ್ತೊಂದು ದೊಡ್ಡ ದರೋಡೆ

1-nity

Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್‌

HDK

Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ

1-vvv

ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್‌’ನಲ್ಲಿ ಪಲಿಮಾರು ಶ್ರೀ ಅಭಿಮತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.