ಕೆಕೆಆರ್‌ಗೆ ಗೆಲುವು ಅನಿವಾರ್ಯ
Team Udayavani, May 5, 2019, 6:11 AM IST
ಮುಂಬಯಿ: ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿರುವ ಮುಂಬೈ ಇಂಡಿಯನ್ಸ್ ರವಿವಾರ ರಾತ್ರಿ ಕೋಲ್ಕತಾ ನೈಟ್ ರೈಡರ್ ವಿರುದ್ಧ “ವಾಂಖೇಡೆ’ ಅಂಗಳದಲ್ಲಿ ಸೆಣಸಲಿದೆ. ಈ ಪಂದ್ಯದೊಂದಿಗೆ ಈ ಬಾರಿಯ ಐಪಿಎಲ್‌ನ ಲೀಗ್ ಹಂತಕ್ಕೆ ತೆರೆಬೀಳಲಿದೆ.
ಕೆಕೆಆರ್ ಪಾಲಿಗೆ ಇದು ಮಹತ್ವದ ಪಂದ್ಯವಾಗಿದ್ದು, ಪ್ಲೇ ಆಫ್ಗೇರಲು ಮುಂಬೈ ವಿರುದ್ಧ ದೊಡ್ಡ ಮೊತ್ತದ ಗೆಲುವು ಅನಿವಾರ್ಯ. ಇತ್ತ ಮುಂಬೈಗೆ ತವರಿನ ಪಂದ್ಯವಾದರಿಂದ ಜಯಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಯೋಜನೆ ಹಾಕಿಕೊಂಡಿದೆ. ರಸೆಲ್ ಮತ್ತು ಹಾರ್ದಿಕ್ ಪಾಂಡ್ಯ ಈ ಪಂದ್ಯದ ಪ್ರಮುಖ ಆಕರ್ಷಣೆ. ಮೊದಲ ಮುಖಾಮುಖೀಯಲ್ಲಿ ಇವರಿಬ್ಬರು ಬಿರುಸಿನ ಬ್ಯಾಟಿಂಗ್ ನಡೆಸಿ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಿದ್ದರು. ಈ ಪಂದ್ಯದಲ್ಲೂ ಅವರಿಂದ ಬಿರುಸಿನ ಬ್ಯಾಟಿಂಗ್ ವೈಭವವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮುಂಬೈ ಸಶಕ್ತ ತಂಡ
ಮುಂಬೈ ಬ್ಯಾಟಿಂಗ್ ಬಲ ಮಧ್ಯಮ ಕ್ರಮಾಂಕದಲ್ಲಿ ಅಡಗಿದೆ. ಆಲ್‌ರೌಂಡರ್ ಪಾಂಡ್ಯ ಬ್ರದರ್ಸ್ ಮತ್ತು ಪೊಲಾರ್ಡ್ ದೊಡ್ಡ ಮೊತ್ತ ಪೇರಿಸಲು ಸಮರ್ಥರು. ಇನ್ನು ಡಿ ಕಾಕ್, ನಾಯಕ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಮುಂಬೈ ಬೌಲಿಂಗ್ ತುಂಬಾ ಘಾತಕ. ಯಾರ್ಕರ್ ಸ್ಪೆಷಲಿಸ್ಟ್ ಲಸಿತ ಮಾಲಿಂಗ ಮತ್ತು ಜಸ್‌ಪ್ರೀತ್ ಬುಮ್ರಾ ಎಲ್ಲ ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ. ಉಳಿದಂತೆ ಪಾಂಡ್ಯ ಬ್ರದರ್, ರಾಹುಲ್ ಚಹರ್ ಉತ್ತಮ ಲಯದಲ್ಲಿದ್ದಾರೆ.
ಆ್ಯಂಡ್ರೆ ರಸೆಲ್ ಕೆಕೆಆರ್‌ನ ದೊಡ್ಡ ಆಸ್ತಿ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ರಸೆಲ್ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಮರ್ಥ ಆಟಗಾರ. ಇನ್ನು ಲಿನ್, ಗಿಲ್, ಕಾರ್ತಿಕ್ ಫಾರ್ಮ್ಗೆ ಮರಳಿರುವುದೂ ತಂಡಕ್ಕೆ ಪ್ಲಸ್ ಪಾಯಿಂಟ್. ಮಧ್ಯಮ ಕ್ರಮಾಂಕದಲ್ಲಿ ರಾಣಾ ಅವರ ಬಿರುಸಿನ ಬ್ಯಾಟಿಂಗ್ ಕೂಡ ಕೆಕೆಆರ್‌ಗೆ ಹೆಚ್ಚು ಬಲ ನೀಡಿದಂತಾಗಿದೆ. ಬೌಲಿಂಗ್‌ನಲ್ಲಿ ನಾರಾಯಣ್, ಚಾವ್ಲಾ ಎದುರಾಳಿ ಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.