ಕುಟುಂಬಕ್ಕೆ ಇನ್ನೂ ಗೊತ್ತಿಲ್ಲ ?
Team Udayavani, May 5, 2019, 6:00 AM IST
ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ಸಮುದ್ರದಲ್ಲಿ ಪತ್ತೆಯಾಗಿರುವ ವಿಚಾರವನ್ನು ನಾಪತ್ತೆಯಾಗಿರುವ ಮೀನುಗಾರರ ಮನೆಯವರು ಆಘಾತಗೊಳ್ಳುವರೆಂಬ ಕಾರಣದಿಂದ ಮನೆಯಲ್ಲಿ ಬಹಿರಂಗ ಪಡಿಸಿಲ್ಲ ಎನ್ನಲಾಗಿದೆ.
ಚಂದ್ರಶೇಖರ್ ಕೋಟ್ಯಾನ್ ಅವರ ಪತ್ನಿ ಶ್ಯಾಮಲಾ ಮತ್ತು ದಾಮೋದರ ಸಾಲ್ಯಾನ್ ಅವರ ಪತ್ನಿ ಮೋಹಿನಿ, ತಾಯಿ ಸೀತಾ ಸಾಲ್ಯಾನ್, ತಂದೆ ಸುವರ್ಣ ತಿಂಗಳಾಯ ಅವರಿಗೂ ಇನ್ನೂ ವಿಷಯ ತಿಳಿದಿಲ್ಲ. ತಮ್ಮವರು ಬಂದೇ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇಬ್ಬರ ಮನೆಯಲ್ಲೂ ಹೆತ್ತವರು ತಮ್ಮ ಮಕ್ಕಳನ್ನು ನೆನೆದು ಈಗಲೂ ಕಣ್ಣೀರಿಡುತ್ತಿದ್ದಾರೆ.
ರಕ್ಷಣಾ ಸಚಿವರ ಭೇಟಿ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮೇ 16ರೊಳಗೆ ಭೇಟಿಯಾಗಿ ಮಾತುಕತೆ ನಡೆಸಲಾಗುವುದು. ಹೇಗೆ ಮುಳು ಗಡೆಯಾಯಿತು ಎಂಬ ಬಗ್ಗೆ ತನಿಖೆ ಯಾಗಬೇಕು ಮತ್ತು ಕೇಂದ್ರದಿಂದ 7 ಮಂದಿ ಮೀನುಗಾರರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಲು ಆಗ್ರಹಿಸ ಲಾಗುವುದು ಎಂದು ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ಮಲ್ಪೆ ಮೀನುಗಾರ ಸಂಘದ ಸಮುದಾಯ ಭವನದಲ್ಲಿ ಶಾಸಕ ರಘುಪತಿ ಭಟ್ ಉಪಸ್ಥಿತಿಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಐಎನ್‌ಎಸ್ ಕೊಚ್ಚಿನ್ ಡಿ. 15ರ ತಡರಾತ್ರಿ ಅದೇ ಮಾರ್ಗದಲ್ಲಿ ತೆರಳಿದ್ದು, ಢಿಕ್ಕಿಯಾಗಿರುವ ಬಗ್ಗೆ ಮೀನು ಗಾರರ ಶಂಕೆಯ ಬಗ್ಗೆ ಸಚಿವರಿಗೆ ವಿವರಿಸಲಾಗುವುದು, ಇದಕ್ಕೆ ಪೂರಕ ಸ್ಪಂದನೆ ದೊರೆಯದಿದ್ದಲ್ಲಿ ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದವರು ತಿಳಿಸಿದ್ದಾರೆ.
45 ಲಕ್ಷ ರೂ. ಸಾಲ
ಸುವರ್ಣ ತ್ರಿಭುಜ ಬೋಟನ್ನು 2016ರಲ್ಲಿ ನಿರ್ಮಿಸಲಾಗಿತ್ತು. 23.69 ಮೀ. ಉದ್ದವಿದ್ದು, 350 ಅಶ್ವಶಕ್ತಿಯ ಎಂಜಿನ್ ಬಳಸಲಾಗಿದೆ. 2016 ಸೆ. 19ರಂದು ಇಲಾಖಾ ನೋಂದಾವಣೆ ಮಾಡಲಾಗಿದೆ. ಮಲ್ಪೆಯ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನಲ್ಲಿ 45 ಲಕ್ಷ ರೂ. ಸಾಲ ಪಡೆಯಲಾಗಿದ್ದು, 15.52 ಲಕ್ಷ ರೂ. ಸಾಲಬಾಕಿ ಇದೆ. ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿಯಲ್ಲಿ 40 ಲಕ್ಷ ರೂ. ವಿಮೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.