ಅಡಿಕೆ ಧಾರಣೆ ಸ್ಥಿರ; ಕಾಳುಮೆಣಸು ಏರಿಕೆ
Team Udayavani, May 5, 2019, 5:56 AM IST
ಕಳೆದೆರಡು ವಾರಗಳಲ್ಲಿ ಅಲ್ಪ ಏರಿಕೆ ಕಂಡಿದ್ದ ಅಡಿಕೆ ಬೆಲೆ ಈ ವಾರ ಅದೇ ದರದಲ್ಲಿ ಮುಂದುವರಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆದರೆ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರಾಟಕ್ಕೆ ಬಿಡದೆ ತೆಗೆದಿರಿಸಿಕೊಂಡಿದ್ದ ಬೆಳೆಗಾರರಿಗೆ ನಿರೀಕ್ಷಿತ ಬೆಲೆ ಏರಿಕೆ ಆಗದೇ ಇರುವುದು ನಿರಾಶೆಯನ್ನುಂಟು ಮಾಡಿದೆ.
ಎರಡು ವಾರದ ಹಿಂದೆ 275 ರೂ.ನಲ್ಲಿದ್ದ ಅಡಿಕೆ ಧಾರಣೆ 278 ರೂ.ಗೆ ಏರಿಕೆಯಾಗಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಉಳಿದಂತೆ ಹೊಸ ಅಡಿಕೆ 228 ರೂ.ನಿಂದ 230 ರೂ., ಡಬಲ್ ಚೋಲು 300 ರೂ.ನಿಂದ 310 ರೂ.ವರೆಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿಕೊಂಡಿದೆ.
ಪಠೊರಾ ಹೊಸ 150 ರೂ.ನಿಂದ 190 ರೂ. ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಗೋಟು 100 ರೂ. ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.
ಕಾಳುಮೆಣಸು ಏರಿಕೆ?
ಕಾಳುಮೆಣಸು ಧಾರಣೆಯಲ್ಲೂ ಚೇತರಿಕೆ ಕಂಡುಬಂದಿಲ್ಲ. ವಾರದ ನಡಿಗೆಯನ್ನು ಗಮನಿಸುವಾಗ ಕಾಳುಮೆಣಸು ಕೆ.ಜಿ.ಗೆ 310 ರೂ. ವರೆಗೆ ಧಾರಣೆ ಪಡೆದುಕೊಂಡಿದೆ. ಹಿಂದಿನ ವಾರ ಕೆ.ಜಿ.ಗೆ 310 ರೂ. ಧಾರಣೆ ಇತ್ತು. ಕಳೆದ ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಂಡಿಲ್ಲ.
ತೆಂಗು ಧಾರಣೆ
ತೆಂಗಿಗೆ ಹಿಂದಿನ ವಾರದ ಧಾರಣೆಯೇ ಮುಂದುವರಿದಿದೆ. ಈ ವಾರ ತೆಂಗಿನಕಾಯಿ ಕೆ.ಜಿ.ಗೆ 32 ರೂ. ನಿಂದ 34 ರೂ. ವರೆಗೆ ವ್ಯವಹಾರ ಕುದುರಿಸಿದೆ. ಹಿಂದಿನ ವಾರ ಇದೇ ಧಾರಣೆ ಇತ್ತು. ಅದರ ಹಿಂದಿನ ವಾರ 1 ರೂ. ಏರಿಕೆ ಕಂಡಿತ್ತು. ಒಟ್ಟಿನಲ್ಲಿ ಉತ್ತಮವೆನಿಸುವ ಧಾರಣೆ ತೆಂಗಿಗೆ ಮುಂದುವರಿದಿದೆ. ಒಂದು ವರ್ಷದ ಅವಧಿಯಲ್ಲಿ ತೆಂಗಿಗೆ ಉತ್ತಮ ಧಾರಣೆ ಮುಂದುವರಿದಿದೆ.
ಕೊಕ್ಕೋ ಸ್ಥಿರ
ಕೊಕ್ಕೋ ಧಾರಣೆಯಲ್ಲಿ ಇಳಿಕೆ ಕಂಡಿದೆ. ಕಳೆದ ಕೆಲವು ಸಮಯಗಳಿಂದ ಕೊಕ್ಕೋ ಧಾರಣೆ ಸ್ಥಿರವಾಗಿ ಕ್ರಮಿಸುತ್ತಿತ್ತು. ಹಸಿ ಕೊಕ್ಕೋ ಕೆ.ಜಿ.ಗೆ 65 ರೂ., ಒಣ ಕೊಕ್ಕೋ ಕೆ.ಜಿ.ಗೆ 195 ರೂ.ನಲ್ಲಿ ಖರೀದಿ ನಡೆದಿತ್ತು. ಈ ವಾರದ ಹಸಿ ಕೊಕ್ಕೋ 60 ರೂ.ಗೆ ಇಳಿಕೆ ಕಂಡಿದೆ.
ರಬ್ಬರ್ ಬೆಳವಣಿಗೆಯಿಲ್ಲ
ಹಿಂದಿನ ವಾರ ಧಾರಣೆ ಏರಿಸಿಕೊಂಡು ಅಚ್ಚರಿ ಮೂಡಿಸಿದ್ದ ರಬ್ಬರ್, ಈ ವಾರ ಸುಮಾರು 1 ರೂ. ನಷ್ಟು ಕುಸಿತ ಕಂಡಿದೆ. ಆರ್ಎಸ್ಎಸ್4 ದರ್ಜೆ 1.5 ರೂ. ಕುಸಿತ ಕಂಡು 124 ರೂ., ಆರ್ಎಸ್ಎಸ್5 ದರ್ಜೆ 1 ರೂ. ಕುಸಿತ ಕಂಡು 118 ರೂ., 50 ಪೈಸೆ ಕುಸಿದಿರುವ ಲಾಟ್ 113 ರೂ. ನಲ್ಲಿ ಖರೀದಿ ನಡೆಸಿದೆ. ತಲಾ 1 ರೂ. ಏರಿಸಿಕೊಂಡಿರುವ ಸಾðಪ್ 1 ದರ್ಜೆ 88 ರೂ. ಹಾಗೂ ಸಾಪ್ 2 ದರ್ಜೆ 80 ರೂ. ನಲ್ಲಿ ಖರೀದಿ ನಡೆಸಿವೆ. ಹಿಂದಿನ ವಾರ ದೊಡ್ಡ ಅಂತರದಿಂದ ಧಾರಣೆಗಳು ಏರಿಕೆಗೊಂಡಿತ್ತು. ಈ ವಾರ ಒಂದಷ್ಟು ಕುಸಿತ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.