ಘಟಬಂಧನದಿಂದ ಮಹಾಭ್ರಷ್ಟಾಚಾರ

ಉತ್ತರ ಪ್ರದೇಶದಲ್ಲಿ ಮೈತ್ರಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ

Team Udayavani, May 5, 2019, 7:42 AM IST

Modi 4

ತಾಪ್‌ಗ್ಢ: ಮಹಾಘಟಬಂಧನದಿಂದ ಮಹಾ ಭ್ರಷ್ಟಾಚಾರ ಹೆಚ್ಚುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ನ ಅಧಃಪತನ ಶುರುವಾಗಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ತನ್ನ ಅಹಂಕಾರದಿಂದಲೇ ಕುಸಿಯು ತ್ತಾರೆ ಎಂದಿದ್ದಾರೆ. ಒಂದೆಡೆ ಸಮಾಜವಾದಿ ಪಕ್ಷದ ಮುಖಂಡರು ಕಾಂಗ್ರೆಸ್‌ ಜತೆಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಆದರೆ ಅದೇ ಸಮಾಜವಾದಿ ಪಕ್ಷದ ಜತೆ ಮಹಾ ಘಟಬಂಧನ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ, ಕಾಂಗ್ರೆಸ್‌ಗೆ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಒಂದು ಕಾಲದಲ್ಲಿ ಪರಿಶುದ್ಧ ಪ್ರಧಾನಿ ಎಂದು ಕರೆಸಿ ಕೊಂಡಿದ್ದ ರಾಜೀವ್‌ ಗಾಂಧಿ ಕೊನೆಗೆ ನಂಬರ್‌ ಒನ್‌ ಭ್ರಷ್ಟರಾದರು. ಕಾಂಗ್ರೆಸ್‌ ಹಲವು ಬಾರಿ ಬೆಂಬಲ ವಾಪಸ್‌ ಪಡೆದು ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಬಿಜೆಪಿ ಮಾತ್ರವೇ ದೇಶಕ್ಕೆ ಸ್ಥಿರ ಸರಕಾರ ನೀಡಬಲ್ಲದು ಎಂದು ಮೋದಿ ಹೇಳಿದ್ದಾರೆ.

ಅಮೇಠಿಯಲ್ಲಿ ಶಾ ರೋಡ್‌ಶೋ
ರಾಹುಲ್ ಗಾಂಧಿ ಲೋಕಸಭೆ ಕ್ಷೇತ್ರ ಅಮೇಠಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಶನಿವಾರ ರೋಡ್‌ಶೋ ನಡೆಸಿದ್ದಾರೆ. ಜನರಿಗೆ ಕುಟುಂಬ ರಾಜಕಾರಣ ಹಾಗೂ ಅಭಿವೃದ್ಧಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದು ಎಂದಿ ದ್ದಾರೆ. ಬಿಜೆಪಿ ಅಭ್ಯರ್ಥಿ ಸ್ಮತಿ ಇರಾನಿ ಯೊಂದಿಗೆ ಶಾ ರೋಡ್‌ಶೋ ನಡೆಸಿದ್ದು, ಉತ್ತರ ಪ್ರದೇಶದಲ್ಲಿ ಹಿಂದಿ ಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ.

ಬಿಜೆಪಿಯಿಂದ ಹಣದ ಆಮಿಷ: ಪ್ರಿಯಾಂಕಾ
ಪ್ರತಿ ಗ್ರಾಮದ ಮುಖಸ್ಥರಿಗೆ ಬಿಜೆಪಿ 20 ಸಾವಿರ ರೂ. ಹಣದ ಆಮಿಷ ಒಡ್ಡುತ್ತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆರೋಪಿಸಿದ್ದಾರೆ. ಬಿಜೆಪಿ ಹಣ ವಿತರಿಸುತ್ತಿದೆ. ಆದರೆ ಕಾಂಗ್ರೆಸ್‌ ಪ್ರಣಾಳಿಕೆ ಯನ್ನು ವಿತರಿಸುತ್ತಿದೆ ಎಂದಿದ್ದಾರೆ. ಅಲ್ಲದೆ, ಬಿಜೆಪಿ ಅಭ್ಯರ್ಥಿ ಸ್ಮತಿ ಇರಾನಿ ವಿರುದ್ಧ ಹರಿಹಾಯ್ದ ಪ್ರಿಯಾಂಕಾ, ಕೇವಲ 16 ಬಾರಿ ಸ್ಮತಿ ಕ್ಷೇತ್ರಕ್ಕೆ ಬಂದಿದ್ದಾರೆ. ಆದರೆ ರಾಹುಲ್ ಇಲ್ಲಿಗೆ ಲೆಕ್ಕವಿಲ್ಲದಷ್ಟು ಬಾರಿ ಬಂದಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಕೇಜ್ರಿವಾಲ್ಗೆ ಕಪಾಳಮೋಕ್ಷ
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಚುನಾವಣ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾರೆ. ಮೋತಿನಗರದಲ್ಲಿ ರೋಡ್‌ಶೋದಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್, ಜನರಿಗೆ ಕೈಬೀಸುತ್ತಾ ಸಾಗಿದ್ದರು. ಈ ವೇಳೆ ವ್ಯಕ್ತಿ ಯೊಬ್ಬ ವಾಹನವನ್ನೇರಿ ಕೇಜ್ರಿವಾಲ್ಗೆ ಹೊಡೆದಿದ್ದಾರೆ. ಇದು ವಿಪಕ್ಷದ ಕುತಂತ್ರ ಎಂದು ಎಎಪಿ ಆರೋಪಿಸಿದೆ. ಅಲ್ಲದೆ ಮುಖ್ಯ ಮಂತ್ರಿ ಭದ್ರತೆಯಲ್ಲಿ ಗಂಭೀರ ಲೋಪವಾಗಿದೆ ಎಂದೂ ಆರೋಪಿ ಸಲಾಗಿದೆ. ಥಳಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ಬಾರಿ ಎಎಪಿ ಮುಖಂಡ ಕೇಜ್ರಿವಾಲ್ ಥಳಿತಕ್ಕೊಳಗಾಗಿದ್ದಾರೆ.

ನಾಳೆ 5ನೇ ಹಂತದ ಮತದಾನ
ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಉತ್ತರ ಪ್ರದೇಶದ ಅಮೇಠಿ, ರಾಯ್‌ಬರೇಲಿ ಸೇರಿದಂತೆ ಕುತೂಹಲ ಹುಟ್ಟಿಸಿರುವ ಹಲವು ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಶನಿವಾರ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಕೊನೆ ಕ್ಷಣದಲ್ಲಿ ಜನರನ್ನು ಮನವೊಲಿಸಲು ಎಲ್ಲ ಪಕ್ಷಗಳು ಯತ್ನಿಸಿದ್ದವು. ಅಮೇಠಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಬೃಹತ್‌ ರ್ಯಾಲಿ ನಡೆಸಿದರೆ, ರಾಯ್‌ ಬರೇಲಿ ಹಾಗೂ ಇತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳೂ ಬಿರುಸಿನ ಪ್ರಚಾರ ನಡೆಸಿವೆ. ಒಟ್ಟು 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಜಾರ್ಖಂಡದ ಕೆಲವು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಮೋದಿಯನ್ನು ಟೀಕಿಸಿದ ಟಿಎಂಸಿ
ಪಶ್ಚಿಮ ಬಂಗಾಲದಲ್ಲಿ ಫೋನಿ ಚಂಡಮಾರುತದ ಪರಿಣಾಮಗಳನ್ನು ತಿಳಿಯಲು ಪ್ರಧಾನಿ ನರೇಂದ್ರ ಮೋದಿಯವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡದೇ ಪಶ್ಚಿಮ ಬಂಗಾಲದ ರಾಜ್ಯಪಾಲರಾದ ಕೇಸರಿನಾಥ್‌ ತ್ರಿಪಾಠಿಯವರಿಗೆ ಕರೆ ಮಾಡಿ ವಿವರ ಪಡೆದಿರುವುದು ವಿವಾದ ಕ್ಕೀಡಾಗಿದೆ. ಪ್ರಧಾನಿ ನಡೆಯನ್ನು ಟೀಕಿಸಿರುವ ತೃಣಮೂಲ ಕಾಂಗ್ರೆಸ್‌, ”ರಾಜ್ಯಪಾಲರಿಗೆ ಕರೆ ಮಾಡಿದ್ದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ, ರಾಜ್ಯಪಾಲರಿಗಿಂತ ಖಚಿತ ಮಾಹಿತಿಯನ್ನು ಮುಖ್ಯಮಂತ್ರಿ ಅಥವಾ ರಾಜ್ಯದ ಇತರ ಅಧಿಕಾರಿಗಳು ನೀಡುತ್ತಿದ್ದರು. ಮತ್ತಷ್ಟು ನೈಜ ಚಿತ್ರಣ ನೀಡುತ್ತಿದ್ದರು. ಆದರೆ, ಪ್ರಧಾನಿಯವರು ಇಲ್ಲಿ ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ಸಿಎಂ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡಿಲ್ಲ” ಎಂದಿದೆ.

ಮೋದಿಗೆ ಮತ್ತೂಂದು ಕ್ಲೀನ್‌ಚಿಟ್
ಎಪ್ರಿಲ್ 21ರಂದು ಗುಜರಾತ್‌ನಲ್ಲಿ ಚುನಾವಣ ಪ್ರಚಾರದ ವೇಳೆ ವಿಂಗ್‌ ಕಮಾಂಡರ್‌ ಅಭಿನಂದನ್‌ ಮತ್ತು ಬಾಲಾಕೋಟ್ ದಾಳಿಯನ್ನು ಪ್ರಸ್ತಾವಿಸಿದ ಪ್ರಧಾನಿ ನರೇಂದ್ರ ಮೋದಿಗೆ ಚುನಾವಣ ಆಯೋಗ ಕ್ಲೀನ್‌ ಚಿಟ್ ನೀಡಿದೆ. ಅಭಿನಂದನ್‌ರನ್ನು ಪಾಕ್‌ ಬಿಡುಗಡೆ ಮಾಡುವಂತೆ ಒತ್ತಡ ತಂದಿದ್ದೆವು. ಬಿಡುಗಡೆ ಮಾಡದಿದ್ದರೆ ಪರಿಣಾಮ ಎದುರಿಸ ಬೇಕಾದೀತು ಎಂದು ಎಚ್ಚರಿಸಿದ್ದೆವು ಎಂದು ಮೋದಿ ಹೇಳಿಕೊಂಡಿದ್ದರು. ಈ ಬಗ್ಗೆ ಮೋದಿ ವಿರುದ್ಧ ಆಯೋಗಕ್ಕೆ ದೂರು ನೀಡಲಾಗಿತ್ತು. ದೂರು ಪರಿಶೀಲಿಸಿದ ಚುನಾವಣ ಆಯೋಗ ಇದರಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದಿದೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

7

Crime: ಸೈನೈಡ್ ಮಿಶ್ರಿತ ಜ್ಯೂಸ್‌ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್‌ ಅರೆಸ್ಟ್

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.