ಆರ್‌ಪಿಎಫ್ ಸಿಬ್ಬಂದಿ ಕರ್ತವ್ಯ ನಿಯೋಜನೆಯಲ್ಲಿ ತಾರತಮ್ಯ?
Team Udayavani, May 5, 2019, 10:49 AM IST
ಹುಬ್ಬಳ್ಳಿ: ರೈಲ್ವೆ ಸುರಕ್ಷತಾ ಬಲ (ಆರ್‌ಪಿಎಫ್)ಸಿಬ್ಬಂದಿ ಕರ್ತವ್ಯ ನಿಯೋಜನೆಯಲ್ಲಿ ಅಧಿಕಾರಿಗಳು ತಾರತಮ್ಯ ತೋರುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಕೆಲ ಸಿಬ್ಬಂದಿಗೆ 12 ತಾಸು, 24 ತಾಸು ಕೆಲಸ ನೀಡಲಾಗುತ್ತಿದೆ ಎಂಬ ಅಳಲು ಅನೇಕರದ್ದಾಗಿದೆ.
ರೈಲ್ವೆ ನಿಲ್ದಾಣ ಸೇರಿದಂತೆ ಇಲಾಖೆಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ, ಸುರಕ್ಷತಾ ಕ್ರಮ ಕೈಗೊಳ್ಳುವ ನೆಪದಲ್ಲಿ ಅಧಿಕಾರಿಗಳು ಕಳೆದೊಂದು ವರ್ಷಗಳಿಂದ ತಮಗೆ ಬೇಕಾದವರನ್ನು ಹೊರತುಪಡಿಸಿ ಇನ್ನುಳಿದ ಸಿಬ್ಬಂದಿಗೆ ದಿನದ 12 ತಾಸು ಕೆಲಸಕ್ಕೆ ನಿಯೋಜಿಸುತ್ತಿದ್ದಾರೆ. ಕರ್ತವ್ಯದ ಮಧ್ಯೆ ಎರಡು ತಾಸು ಮಾತ್ರ ವಿಶ್ರಾಂತಿ ಬಿಟ್ಟು 24 ತಾಸು ಡ್ಯೂಟಿ ಮಾಡುವಂತೆ ಸೂಚಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಓರ್ವ ಸಿಬ್ಬಂದಿ 12 ತಾಸು ಕರ್ತವ್ಯದಲ್ಲಿದ್ದರೆ ಅವರಿಗೆ ಸ್ಥಳದಲ್ಲೇ ನೀರು, ಊಟ ಕೊಡಬೇಕೆಂಬ ನಿಯಮವಿದೆ. ಆದರೆ ಅಧಿಕಾರಿಗಳು ಆ ಯಾವ ವ್ಯವಸ್ಥೆಯನ್ನು ಸಿಬ್ಬಂದಿಗೆ ಒದಗಿಸುತ್ತಿಲ್ಲ. ತಮಗೆ ಬೇಕಾದವರಿಗೆ ದಿನಕ್ಕೆ 8 ತಾಸು ಮಾತ್ರ ಕರ್ತವ್ಯ ಮಾಡಲು ಹೇಳುತ್ತಾರೆ. ಅವರಿಗೆ ರಜೆ ಕೂಡ ಕೊಡುತ್ತಾರೆ. ಮುಖ ನೋಡಿ ಮಣೆ ಹಾಕುತ್ತಿದ್ದಾರೆ. ಆದರೆ ಇನ್ನುಳಿದವರಿಗೆ ರಜೆ ನೀಡಲು ಸತಾಯಿಸುತ್ತಿದ್ದು, ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೂ ಹಕ್ಕಿನ ರಜೆ ನೀಡದೆ ಗೈರು ಹಾಜರಿ ಎಂದು ನಮೂದಿಸುತ್ತಿದ್ದಾರೆ. ಆರ್‌ಪಿಎಫ್ ಪ್ರಧಾನ ನಿರೀಕ್ಷಕರು/ಪ್ರಧಾನ ಮುಖ್ಯ ಭದ್ರತಾ ಆಯುಕ್ತರ (ಐಜಿ/ಪಿಸಿಎಸ್‌ಸಿ) ಆದೇಶವಿದೆ. ರಜೆ ಕೊಡಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ತಮಗೆ ಬೇಕಾದವರಿಗೆ ಒಂದು ರಾತ್ರಿ ಪಾಳಿ ಮಾತ್ರ ಡ್ಯೂಟಿ ಹಾಕುತ್ತಾರೆ. ಇನ್ನುಳಿದವರಿಗೆ ವಾರದಲ್ಲಿ ಮೂರು ದಿನ ರಾತ್ರಿ ಡ್ಯೂಟಿ ಕಡ್ಡಾಯ ಮಾಡಲಾಗಿದೆ. ಉತ್ತರ ಭಾರತೀಯರು ಹಾಗೂ ದಕ್ಷಿಣ ಭಾರತೀಯರು ಎಂಬ ಭೇದಭಾವ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ನಿಲ್ದಾಣದ ಐದು ಪ್ಲಾಟ್ಫಾರ್ಮ್ನ್ನು ಇಬ್ಬರೇ ಸಶಸ್ತ್ರ ಸಿಬ್ಬಂದಿ ಒಂದು ತುದಿಯಿಂದ ಇನ್ನೊಂದು ತುದಿವರೆಗೆ ನೋಡಿಕೊಳ್ಳಬೇಕು. ಅನುಮಾನ ಬಂದರೆ ಪ್ರಯಾಣಿಕರ ತಪಾಸಣೆ ಮಾಡಬೇಕು. ಕರ್ತವ್ಯದಲ್ಲಿ ಏನಾದರೂ ಲೋಪವಾದರೆ ಇಲ್ಲವೇ ನಿಲ್ದಾಣದಲ್ಲಿ ಅನಾಹುತ, ಅವಘಡಗಳು ಸಂಭವಿಸಿದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಿ, ಸಂಬಳ ಕಡಿತಗೊಳಿಸುತ್ತಾರೆ. ಕರ್ತವ್ಯದಲ್ಲಿದ್ದಾಗ ಟೋಪಿ ಹಾಕಿಲ್ಲ, ಪ್ರಯಾಣಿಕರ ಲಗೇಜ್, ಟಿಕೆಟ್ ತಪಾಸಣೆ ಮಾಡಿಲ್ಲ, ಮೊಬೈಲ್ನಲ್ಲಿ ಮಾತನಾಡುತ್ತಿದ್ದೀರಿ, ಶೌಚಾಲಯಕ್ಕೆ ಹೋಗಿದ್ದೀರಿ ಎಂದು ಕ್ಷುಲ್ಲಕ ಕಾರಣಕ್ಕೆ ಸಂಬಳ ಕಡಿತಗೊಳಿಸಲಾಗುತ್ತಿದೆ ಎಂದು ದೂರಲಾಗಿದೆ.
ಆರ್‌ಪಿಎಫ್ ಸಿಬ್ಬಂದಿಯನ್ನು ಹಗಲಿರುಳು ದುಡಿಸಿಕೊಳ್ಳುತ್ತಿರುವುದನ್ನು ಗಮನಿಸಿರುವ ನೈಋತ್ಯ ರೈಲ್ವೆ ಮಹಾ ಪ್ರಬಂಧಕರು ಪಿಸಿಎಸ್‌ಸಿ ಅವರಿಗೆ ಹಾಗೆ ನಡೆಸಿಕೊಳ್ಳದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ತಮ್ಮ ಚಾಳಿ ಬಿಟ್ಟಿಲ್ಲ. ದೇಶದ ಗಡಿ ನಿಯಂತ್ರಣ ರೇಖೆಯಲ್ಲಿ ಅರೆಸೇನಾ ಪಡೆಗೆ ಇಲ್ಲದಂತಹ ಹಾಗೂ ದೇಶದ ಯಾವ ರೈಲ್ವೆ ವಿಭಾಗಗಳಲ್ಲೂ ಇಲ್ಲದಂತಹ ಡ್ಯೂಟಿಯನ್ನು ನೈಋತ್ಯ ರೈಲ್ವೆ ವಲಯದ ಸಿಬ್ಬಂದಿಯಿಂದ ಮಾಡಿಸಲಾಗುತ್ತಿದೆ ಎಂಬ ಗೋಳು ಅನೇಕ ಸಿಬ್ಬಂದಿಯದ್ದಾಗಿದೆ.
ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.