24 ಗ್ರಾಮದಲ್ಲಿ ನೀರಿಗಾಗಿ ಜನ-ಜಾನುವಾರು ಪರದಾಟ
Team Udayavani, May 5, 2019, 12:55 PM IST
ಕುರುಗೋಡು: ಏಳುಬೆಂಚಿಯಲ್ಲಿ ತಳ್ಳುಗಾಡಿಯಲ್ಲಿ ನೀರು ತರುತ್ತಿರುವ ಮಹಿಳೆಯರು.
ಕುರುಗೋಡು: ಬೇಸಿಗೆ ಬಂತೆಂದರೆ ಎಲ್ಲೆಂದರಲ್ಲಿ ಅಂತರ್ಜಲ ಕುಸಿತದಿಂದ ಜಲ ಮೂಲಗಳು ಬತ್ತಿ ಹೋಗಿ ಪಟ್ಟಣದ 24ಕ್ಕೂ ಹೆಚ್ಚು ಗ್ರಾಮಗಳ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ಇದರಿಂದ ಬೇಸತ್ತ ಜನ ಶುದ್ಧ ಕುಡಿಯುವ ನೀರು ಬೇಕೆಂದರೆ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತೆರಳಿ ಹಣ ಕೊಟ್ಟು ನೀರು ತಂದು ಸೇವಿಸಬೇಕಾದ ದುಸ್ಥಿತಿ ಎದುರಾಗಿದೆ. ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಜನರು ನಿತ್ಯ ಇದರಿಂದ ಪರಿತಪಿಸುವಂತಾಗಿದೆ.
ಸರಕಾರ ಪಟ್ಟಣದ ಕೆಲ ಗ್ರಾಮಗಳಲ್ಲಿ ಕೆರೆಗಳು ನಿರ್ಮಿಸಿದ್ದು, ಅವುಗಳು ಜನರಿಗೆ ಉಪಯೋಗವಾಗದೆ ನಿರುಪಯುಕ್ತಗೊಂಡಿವೆ. ಇನ್ನೂ ಜಾನುವಾರುಗಳಿಗೆ ಹಾಗೂ ಮನೆ ಬಳಕೆಗೆ ನೀರು ಬೇಕೆಂದರೆ ಖಾಸಗಿ ಕೊಳವೆ ಬಾವಿ ನೀರು ತರಬೇಕಾದ ಸ್ಥಿತಿ ಮಹಿಳೆಯರಲ್ಲಿ ಉಂಟಾಗಿದೆ. ಪ್ರತಿಯೊಂದು ಹಳ್ಳಿಗಳಲ್ಲಿಯೂ ವಾರಕ್ಕೊಮ್ಮೆ ನೀರು ಒದಗಿಸುತ್ತಿರುವ ಸ್ಥಳೀಯ ಇಲಾಖೆ ಅಧಿಕಾರಿಗಳ ವಿರುದ್ಧ ನಿತ್ಯ ಶಾಪ ಹಾಕುತ್ತಾ ಸಮಸ್ಯೆ ಒಳಗೆ ಮುಳುಗಿರುವ ಜನರು, ದನಕರು, ಮನೆ ಬಳಕೆ, ಬಟ್ಟೆ ತೊಳೆಯಲು ನೀರಿಲ್ಲವಾಗಿದೆ. ಇದರಿಂದ ಜನರು ವಾರಕ್ಕೊಮ್ಮೆ ಜಳಕ ಮಾಡುವ ಪರಿಸ್ಥಿತಿ ಎದುರಾಗಿದೆ.
ಫ್ಲೋರೈಡ್ ನೀರೇ ಗತಿ; ಕುಡಿಯುವ ನೀರಿಗಾಗಿ ಹಳ್ಳಿ, ಗ್ರಾಮ, ಪಟ್ಟಣ ಸೇರಿದಂತೆ ವಿವಿಧ ಕಡೆ ಶುದ್ಧ ಘಟಕಗಳು ಸ್ಥಾಪಿಸಲಾಗಿದೆ. ಆದರೆ ಅನೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ದುರಸ್ತಿಗೆ ಬಂದಿದ್ದು, ಬೇಸಿಗೆಕಾಲದಲ್ಲಿ ಅವುಗಳನ್ನು ದುರಸ್ತಿಗೊಳಿಸಿ ಜನರಿಗೆ ನೀರು ಒದಗಿಸಲು ಅಧಿಕಾರಿಗಳು ಮುಂದಾಗದಿರುವುದು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.
12 ಹೆಚ್ಚು ಕೆರೆ: ಸರಕಾರ ಕೆಲ ವರ್ಷಗಳ ಹಿಂದೆ ಸಮಗ್ರ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಅಂದಾಜು ಒಂದು ಕೆರೆಗೆ 2 ಕೋಟಿ ವೆಚ್ಚದಲ್ಲಿ ಸುಮಾರು 12ಕ್ಕಿಂತ ಹೆಚ್ಚು ಕುಡಿಯುವ ನೀರಿನ ಕೆರೆಗಳು ನಿರ್ಮಿಸಿದೆ. ಆದರೆ ಅವುಗಳು ನಿರ್ಮಾಣವಾದ ಬಳಿಕ 2 ವರ್ಷ ಭರ್ತಿಯಾಗಿ ಜನರಿಗೆ ಅನುಕೂಲವಾಗಿದ್ದ ಕೆರೆಗಳು ಅಂದಿನಿಂದ ಇಂದಿನವರೆಗೂ ಸಂಪೂರ್ಣ ಬತ್ತಿ ಹೋಗಿವೆ. ತುಂಗಭದ್ರಾ ಮಂಡಳಿ ಕೃಷಿಗೆ ಬೇಸಿಗೆ ನೀರು ಒದಗಿಸಲು ಸ್ಥಗಿತಗೊಳಿಸಿದ ಕಾರಣ ಕೆರೆಗೆ ನೀರು ತುಂಬಿಸಲು ಅಗಿಲ್ಲ.
ಸಮಸ್ಯೆಗೆ ಒಳಗಾದ ಗ್ರಾಮಗಳು: ಎಚ್.ವೀರಾಪುರ, ಗೇಣಿಕೆಹಾಳ್, ಮುಷ್ಟಗಟ್ಟಿ, ಕಲ್ಲುಕಂಬ, ಕೆರೆಕೆರೆ, ಎಮ್ಮಿಗನೂರು, ಸಿದ್ದಮ್ಮನಹಳ್ಳಿ, ಏಳುಬೆಂಚಿ, ಯರ್ರಂಗಳ್ಳಿ, ವದ್ದಟ್ಟಿ, ಒರ್ವಾಯಿ, ಗುತ್ತಿಗೆನೂರು, ಪಟ್ಟಣಶೆರಗು, ಬೈಲೂರು, ಕೋಳೂರು, ದಮ್ಮೂರು, ಸೋಮಸಮುದ್ರ, ಸಿಂಗೇರಿ ಸೇರಿ 23 ಗ್ರಾಮಗಳಲ್ಲಿ ನೀರಿಗೆ ಸಮಸ್ಯೆಯಿದೆ.
ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿಲ್ಲ. ಹಳ್ಳಿಗಳಲ್ಲಿರುವ ನೀರಿನ ತೊಂದರೆ ಪರಿಶೀಲಿಸಿ ಆ ಗ್ರಾಮದ ಪಿಡಿಒ ಹತ್ತಿರ ಚರ್ಚೆ ನಡೆಸಿ ಪ್ರತಿಯೊಂದು ಗ್ರಾಮಗಳಿಗೆ ಸಮರ್ಪಕ ನೀರು ಒದಗಿಸುವ ಕಾರ್ಯ ಕೈಗೊಳ್ಳುತ್ತೇನೆ.
•ಶಿವಾನಂದ ಕಲ್ಮನೆ, ತಾಪಂ ಇಒ
ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಪ್ರತಿ ವರ್ಷ ನೀರಿನ ತೊಂದರೆ ಎದುರಿಸು ತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತವು ಸಂಬಂಧಿಸಿದ ಅಧಿ ಕಾರಿ ಗಳನ್ನು ಹಳ್ಳಿಗಳಿಗೆ ಕಳುಹಿಸಿ ತಕ್ಷಣವೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
•ದರೂರು ಪುರುಷೋತ್ತಮಗೌಡ.
ಸುಧಾಕರ ಮಣ್ಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಚೋರಾಡಿ; ಕರೆ ಬಂದರೆ ಬೆಟ್ಟ ಹತ್ತಬೇಕು!
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಚೋರಾಡಿ; ಕರೆ ಬಂದರೆ ಬೆಟ್ಟ ಹತ್ತಬೇಕು!
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.