ಅನಿಯಂತ್ರಿತ ಠೇವಣಿ ಯೋಜನೆ ಬಗ್ಗೆ ತಿಳಿದಿರಲಿ
Team Udayavani, May 6, 2019, 6:00 AM IST
ಸುರಕ್ಷಿತ ಹೂಡಿಕೆಯ ಪ್ರಶ್ನೆ ಬಂದಾಗ ಎಲ್ಲಕ್ಕಿಂತ ಮೊದಲು ಕಾಣಿಸುವುದು ನಿರಖು ಠೇವಣಿಗಳು. ಅಂದರೆ ಫಿಕ್ಸೆಡ್ ಡಿಪಾಸಿಟ್‌ಗಳು. ವಿವಿಧ ಅವಧಿಗಳ ಈ ನಿರಖು ಠೇವಣಿ ಯೋಜನೆಗಳಲ್ಲಿ ಹಣ ತೊಡಗಿಸುವುದು ಸುಭದ್ರ, ಸುರಕ್ಷಿತ ಮತ್ತು ಆಕರ್ಷಕ ಎಂಬ ನಂಬಿಕೆ ಸಹಜವಾಗಿಯೇ ಜನ ಸಾಮಾನ್ಯರಲ್ಲಿದೆ. ಹಾಗಾಗಿ, ಜನರು ಬ್ಯಾಂಕ್, ಸಹಕಾರಿ ಬ್ಯಾಂಕ್, ಬ್ಯಾಂಕೇತರ ಹಣಕಾಸು ಕಂಪೆನಿಗಳು ಮತ್ತು ಪೋಸ್ಟ್ ಆಫೀಸ್ ಟರ್ಮ್ ಡಿಪಾಸಿಟ್ ಯೋಜನೆಗಳತ್ತ ಮುಖ ಮಾಡುತ್ತಾರೆ.
ನಿರಖು ಠೇವಣಿ ಹಣ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮತ್ತು ಅಂಚೆ ಇಲಾಖೆಯ ಠೇವಣಿ ಯೋಜನೆಗಳಲ್ಲಿ ಹೆಚ್ಚು ಸುಭದ್ರವಾಗಿ ರು ತ್ತದೆ. ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಅಸಲನ್ನೂ ಕಳೆದುಕೊಳ್ಳುವ ರಿಸ್ಕ್ ಖಂಡಿತ ಬೇಡ ಎನ್ನುವವರು ಸದಾ ಕಾಲ ಮುಂಚೂಣಿಯ ಸರಕಾರಿ ಬ್ಯಾಂಕ್‌ಗಳು ಮತ್ತು ಅಂಚೆ ಇಲಾಖೆಯ ಟರ್ಮ್ ಡೆಪಾಸಿಟ್ ಯೋಜನೆಗಳನ್ನು ನೆನಪಿನಲ್ಲಿ ಇರಿಸಿ ಕೊಳ್ಳುವುದು ಕ್ಷೇಮ. ಹೂಡಿಕೆಯಲ್ಲಿ ಯಾವತ್ತೂ ನಾವು ರಿಸ್ಕ್ ಫ್ಯಾಕ್ಟರ್ ಮರೆಯಬಾರದು. ಸಾಮಾನ್ಯವಾಗಿ ವಹಿವಾಟುದಾರರನ್ನು ಹೂಡಿಕೆದಾರರೆಂದು ಪರಿಣತರು ಪರಿಗಣಿಸುವುದಿಲ್ಲ. ವಹಿವಾಟುದಾರರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಗರಿಷ್ಠ ಲಾಭ ಗಳಿಸುವುದೇ ಹೂಡಿಕೆಯ ಮೂಲ ಉದ್ದೇಶವಾಗಿರುತ್ತದೆ. ಹೂಡಿಕೆದಾರರಿಗೆ ಆರರಿಂದ ಹನ್ನೆರಡು ತಿಂಗಳ ಅವಧಿಯೆಂದರೆ ಒಂದು ಯುಗ. ಈ ಅವಧಿಯೊಳಗೆ ತಮ್ಮ ಹೂಡಿಕೆ ಮೊತ್ತವು ನಷ್ಟದ ಹಾದಿ ಹಿಡಿದರೆ ಅದನ್ನು ನಿರ್ದಯೆಯಿಂದ ಅವರು ಕೊನೆಗೊಳಿಸಿ ಕೈಗೆ ಬಂದಷ್ಟು ದುಡ್ಡನ್ನು ಬೇರೆ ಆಕರ್ಷಕ ಮಾಧ್ಯಮಗಳಲ್ಲಿ ತೊಡಗಿಸುತ್ತಾರೆ. ಈ ಯತ್ನದಲ್ಲಿ ತಾವು ಅಸಲಿನ ಭಾಗವನ್ನೇ ಕಳೆದುಕೊಂಡರೂ ಅವರು ಚಿಂತಿಸುವುದಿಲ್ಲ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು ನಾನಾ ಅವಧಿಯ, ಆಕರ್ಷಕ ಬಡ್ಡಿಯ ನಿರಖು ಠೇವಣಿ ಯೋಜನೆಗಳನ್ನು ಪ್ರಚುರ ಪಡಿಸುತ್ತಲೇ ಇರುತ್ತವೆ. ಅಂಚೆ ಇಲಾಖೆಯ ನಿರಖು ಠೇವಣಿಗಳ ಮೇಲಿನ ಬಡ್ಡಿ ಒಂದು ವರ್ಷದಿಂದ ಮೂರು ವರ್ಷದ ತನಕ ಡಿಪಾಸಿಟ್‌ಗೆ ಶೇ. 7ರಷ್ಟು ಬಡ್ಡಿ. ನಾಲ್ಕು, ಐದು ವರ್ಷಕ್ಕೆ 7.8ರಷ್ಟು ಬಡ್ಡಿ.
ನಿರಖು ಠೇವಣಿ ಅಂದರೆ ಹೂಡಿಕೆಯಲ್ಲಿ ಸಹನೆ, ತಾಳ್ಮೆ, ಸಂಯಮ ತೋರುವ ಹೂಡಿಕೆದಾರರು ನಿಶ್ಚಿಂತೆ, ಸುಭದ್ರತೆಯನ್ನು ಬಯಸುವವರಾಗಿರುತ್ತಾರೆ. ಅವರು ನಿರ್ದಿಷ್ಟ ವರ್ಷಗಳ ಕಾಲಕ್ಕೆ ಹಣವನ್ನು ಹೂಡಿ, ಅದು ಮಾಗುವವರೆಗೆ ಕಾಯುತ್ತಾರೆ. ಈ ಬಗೆಯ ಪ್ರವೃತ್ತಿದಾರರಿಗೆ ಅತ್ಯಂತ ಪ್ರಶಸ್ತವಾಗಿರುವ ಹೂಡಿಕೆ ಮಾಧ್ಯಮ ಎಂದರೆ ನಿರಖು ಠೇವಣಿ. ಇದನ್ನೇ ನಾವು ಫಿಕ್ಸ್ ಡಿಪಾಸಿಟ್ ಎಂದು ಕರೆಯುವುದು.
ಒಂದು, ಎರಡು, ಮೂರು, ಐದು ವರ್ಷಗಳ ಅವಧಿಯ ಟರ್ಮ್ ಡಿಪಾಸಿಟ್ ಗಳು ಅಥವಾ ಅವಧಿ ನಿರಖು ಠೇವಣಿಗಳು ಸುಭದ್ರತೆ, ಸುರಕ್ಷೆಯ ದೃಷ್ಟಿಯಿಂದ ಒಳ್ಳೆಯದು.
ಹಾಗಿದ್ದರೂ ಲಾಭದಾಯಕತೆ ನಿಶ್ಚಿತವಾಗಿರುವುದರಿಂದ ಮಧ್ಯಮ ವರ್ಗದ ಮಂದಿಯ ಮೊದಲ ಹೂಡಿಕೆಯ ಆಯ್ಕೆಯೇ ನಿರಖು ಠೇವಣಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.